ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ವೈದ್ಯ ಪತ್ನಿಯನ್ನೇ ಇಂಜೆಕ್ಷನ್ ನೀಡಿ ಡಾಕ್ಟರ್ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂಬುದಾಗಿ ನಾಟಕವಾಡಿದ್ದಾರೆ. ಆ ಬಳಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇಂಜೆಕ್ಷನ್ ನೀಡಿ ಹತ್ಯೆಗೈದಿರುವಂತ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ. ಹೀಗಾಗಿ ಪತ್ನಿಯನ್ನೇ ಇಂಜೆಕ್ಷನ್ ನೀಡಿ ಕೊಂದ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಮೇ.26, 2024ರಂದು ಡಾ.ಮಹೇಂದ್ರ ರೆಡ್ಡಿ ಹಾಗೂ ಡಾ.ಕೃತಿಕಾ ರೆಡ್ಡಿ ವಿವಾಹವಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿ ಡಾ.ಕೃತಿಕಾರೆಡ್ಡಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಅಜೀರ್ಣ, ಗ್ಯಾಸ್ಟ್ರಿಕ್, ಲೋಶುಗರ್ ನಿಂದ ಬಳಲುತ್ತಿದ್ದರು. ಈ ವಿಷಯ ಮುಚ್ಚಿಟ್ಟಿದ್ದಂತ ಕುಟುಂಬಸ್ಥರು ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಮಹೇಂದ್ರ ರೆಡ್ಡಿಗೆ ವಿವಾಹ ಮಾಡಿಕೊಟ್ಟಿದ್ದರು.
ಮದುವೆಯ ನಂತ್ರ ಪತ್ನಿ ಡಾ.ಕೃತಿಕಾರೆಡ್ಡಿಗೆ ಇರುವಂತ ಅನಾರೋಗ್ಯ ಸಮಸ್ಯೆಯು ಪತಿ ಡಾ.ಮಹೇಂದ್ರರೆಡ್ಡಿಗೆ ಗೊತ್ತಾಗಿತ್ತು. ಇದೇ ಕಾರಣಕ್ಕೆ ಪ್ರತಿದಿನ ವಾಂತಿ, ಇತರೆ ಸಮಸ್ಯೆಯಿಂದ ಬಳಲುತ್ತಿದ್ದಂತ ಪತ್ನಿ ಡಾ.ಕೃತಿಕಾರೆಡ್ಡಿ ಹತ್ಯೆಗೆ ಪ್ಲಾನ್ ಮಾಡಿದ್ದರು.
ಹುಷಾರು ತಪ್ಪಿದ್ದ ಕಾರಣ ತವರು ಮನೆಗೆ ತೆರಳಿದ್ದಂತ ಡಾ.ಕೃತಿಕಾರೆಡ್ಡಿಗೆ ಪತಿ ಡಾ.ಮಹೇಂದ್ರರೆಡ್ಡಿ ಔಷದೋಪಚಾರವನ್ನು ಎರಡು ದಿನ ಮಾಡಿದ್ದರು. ಆದರೇ ಪ್ರಜ್ಞೆ ತಪ್ಪಿದಂತ ಡಾ.ಕೃತಿಕಾರೆಡ್ಡಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.
ಈ ಘಟನೆಯ ಬಗ್ಗೆ ಆಸ್ಪತ್ರೆಯಿಂದ ಡೆತ್ ಮೆಮೋ ಬಂದ ಕಾರಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ದೂರು ಪಡೆದು ತನಿಖೆ ನಡೆಸಿದ್ದರು. ಮಾರತಹಳ್ಳಿ ಠಾಣೆಯ ಪೊಲೀಸರು ಡಾ.ಕೃತಿಕಾರೆಡ್ಡಿ ಅವರ ಮೃತದೇಹದ ಸ್ಯಾಂಪರ್ ಎಫ್ಎಸ್ಎಲ್ ಗೆ ತನಿಖೆಗೆ ಕಳುಹಿಸಿದ್ದರು.
ಎಫ್ಎಸ್ಎಲ್ ವರದಿ ಬಂದಿದ್ದು, ಅದರಲ್ಲಿ ಕೃತಿಕಾರೆಡ್ಡಿ ಸಾವಿಗೆ ಅನಸ್ತೇಶಿಯಾ ಅಂಶವೇ ಕಾರಣ ಎಂಬಂತ ಶಾಕಿಂಗ್ ಮಾಹಿತಿ ಬಂದಿದೆ. ಹೀಗಾಗಿ ಮಾರತಹಳ್ಳಿಯ ಪೊಲೀಸರು ಪತಿ ಡಾ.ಮಹೇಂದ್ರರೆಡ್ಡಿಯನ್ನು ಬಂಧಿಸಿದ್ದಾರೆ.
BREAKING: ರಾಜ್ಯದ ‘ಪೊಲೀಸ್ ಇಲಾಖೆ’ಯಲ್ಲಿ ಖಾಲಿ ಇರುವ ‘2032 ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ | JOB ALERT