ಶಿವಮೊಗ್ಗ: ಕೆಲಸದ ವಿಚಾರವಾಗಿ ಜಗಳ ಮಾಡಿಕೊಂಡ ವೈದ್ಯೆ ಹಾಗೂ ನರ್ಸ್ ಇಬ್ಬರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ಶಿವಮೊಗ್ಗದ ಬಿಆರ್ ಪಿಯಲ್ಲಿ ನಡೆದಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಬಿಆರ್ ಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಡಾ.ಹಂಸವೇಣಿ ಹಾಗೂ ನರ್ಸ್ ಸುಕನ್ಯಾ ಎಂಬುವರು ಕೆಲಸದ ವಿಚಾರವಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಕೆಲಸದ ವಿಚಾರದಲ್ಲಿ ವೈದ್ಯೆ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ಆರೋಪಿಸಿ ನಿದ್ರೆ ಮಾತ್ರೆ ಸೇವಿಸಿ ನರ್ಸ್ ಸುಕನ್ಯಾ ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನೂ ಈ ವಿಷಯ ತಿಳಿದಂತ ವೈದ್ಯೆ ಡಾ.ಹಂಸವೇಣಿ ಕೂಡ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಒಂದು ಗಂಟೆಯ ಸಮಯದಲ್ಲೇ ವೈದ್ಯೆ ಹಾಗೂ ನರ್ಸ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವೈದ್ಯೆ ಡಾ.ಹಂಸವೇಣಿಯನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ವಿಷಯ ತಿಳಿದು ಮೆಗ್ಗಾನ್ ಆಸ್ಪತ್ರೆಗೆ ಡಿಹೆಚ್ಓ ನಟರಾಜ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಈ ಕುರಿತು ತನಿಖೆ ನಡೆಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
ಅಂದಹಾಗೇ ಕಳೆದ 5 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಬಿಆರ್ ಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸುಕನ್ಯಾ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ವೈದ್ಯೆ ಡಾ.ಹಂಸವೇಣಿ ಕೆಲಸದ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದಾಗಿ ಆರೋಪ ಕೇಳಿ ಬಂದಿದೆ.
BREAKING: ಸಾಗರದ ‘ಗಣಪತಿ ಬ್ಯಾಂಕ್’ ಅಧ್ಯಕ್ಷರಾಗಿ ಶ್ರೀನಿವಾಸ್ ಮೇಸ್ತ್ರಿ, ಉಪಾಧ್ಯಕ್ಷರಾಗಿ ವಿ.ಶಂಕರ್ ಆಯ್ಕೆ