ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ದಾಂಪತ್ಯ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಅದನ್ನೊಂದು ಕಲೆ ಅಥವಾ ಜಾಣತನ ಎಂತಲೂ ಕರೆಯಬಹುದು. ದಾಂಪತ್ಯ ಬಲಪಡಿಸಲು ಹಲವಾರು ಕಸರತ್ತುಗಳನ್ನು ಇಬ್ಬರೂ ಮಾಡಬೇಕಾಗುತ್ತದೆ. ಸಂಬಂಧವನ್ನು ಬಿಗಿಗೊಳಿಸುವುದು ನಮ್ಮ ಕೈಯಲ್ಲಿದೆ. ನಮ್ಮನ್ನು ನಾವು ಕೆಲ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಈ ರೀತಿಯಾಗಿ ಕೆಲ ಚಟುವಟಿಕೆಗಳನ್ನು ಸಂಗಾತಿಗಳಿಬ್ಬರೂ ಒಟ್ಟಿಗೆ ಸೇರಿ ಮಾಡುವುದರಿಂದ ನಿಮ್ಮ ಬಂಧನ ಮತ್ತಷ್ಟು ಗಟ್ಟಿಯಾಗುತ್ತದೆ.
ಪ್ರೀತಿಯ ಸಂದೇಶ ಕಳುಹಿಸಿ: ಎಷ್ಟೋ ವಿಷಯಗಳನ್ನು ಮಾತಿನಲ್ಲಿ ಹೇಳತೀರದು. ನಿಮ್ಮ ಮನದಾಳದ ಮಾತನ್ನು ಸಂದೇಶಗಳ ಮೂಲಕ ಕಳುಹಿಸಿ. ಹಿಂದಿನ ಕಾಲದಲ್ಲಿ ಪತ್ರ ವಿನಿಮಯವಿತ್ತು. ಪತ್ರ ವಿನಿಮಯದ ಪ್ರಣಯ ತುಂಬಾ ಮಜವಾಗಿತ್ತು ಎಂದು ಹಿರಿಯರು ತಮ್ಮ ಪತ್ರ ಪ್ರಣಯದ ಅನುಭವಗಳನ್ನು ರಸವತ್ತಾಗಿ ಹೇಳಿಕೊಳ್ಳುತ್ತಾರೆ. ಆದರೆ ಕಾಲ ಬದಲಾಗಿ ಮೊಬೈಲ್ ಮೆಸೇಜ್ ರವಾನೆಗೆ ಬಂದು ನಿಂತಿದೆ. ಕೆಲಸದ ಒತ್ತಡ ನಡುವೆ ಅಥವಾ ನಿಮ್ಮ ಸಂಗಾತಿ ನಿಮ್ಮಿಂದ ಕೆಲ ದಿನಗಳವರಗೆ ದೂರವಿದ್ದಾಗ ಸಡನ್‌ಆಗಿ ಒಂದು ಪ್ರೀತಿಯ ಸಂದೇಶ ಕಳುಹಿಸಿ ನೋಡಿ. ಆಗ ಆಗುವ ಖುಷಿಯೇ ಬೇರೆ. ಸಂಗಾತಿಯ ಒಂದು ಪ್ರೀತಿ ಅಥವಾ ಕಾಳಜಿಯ ಸಂದೇಶ ನಿಮ್ಮ ಬಂಧವನ್ನು ಮತ್ತಷ್ಟು ಬಿಗಿಗೊಳಿಸುತ್ತದೆ. ಫಾರ್ವರ್ಡ್ ಮೆಸೇಜ್‌ಗಳು, ಅಥವಾ ಗೂಗಲ್‌ನಿಂ ಕಾಫಿ ಪೇಸ್ಟ್ ಮಾಡಿಕೊಂಡ ಮೆಸೇಜ್‌ಗಿಂತ ನಿಮ್ಮದೇ ಭಾಷೆಯಲ್ಲಿ ನಿಮ್ಮದೇ ಕಲೆಯಲ್ಲಿ ನಿಮ್ಮವರಿಗೆ ಪ್ರೀತಿ ಸಂದೇಶ ಕಳುಹಿಸಿ.
ಔಟಿಂಗ್ ಹೋಗಿ ಬನ್ನಿ: ತಿಂಗಳಿಗೆ ಒಂದು ಬಾರಿ ಆದ್ರೂ ಔಟಿಂಗ್ ಹೋಗಿ ಬನ್ನಿ. ಎಷೇ ಕೆಲಸ ಒತ್ತಡ ಅಥವಾ ಸಮಯದ ಅಭಾವವಿದ್ದರೂ ಪರವಾಗಿಲ್ಲ, ಸಮಯ ಮಾಡಿಕೊಂಡು ಒಂದು ಡಿನ್ನರ್‌ಗೋ ಅಥವಾ ಪಿಕ್‌ನಿಕ್‌ಗೋ, ಇನ್ನೂ ಸಮಯವಿದ್ದರೆ ಲಾಂಗ್ ಟ್ರಿಪ್‌ಗೆ ಹೋಗಿ ಬನ್ನಿ. ಹೊಸ ಊರು ಹೊಸ ಜಾಗ ನಿಮಗೆ ಹೊಸ ಅನುಭ ನೀಡುತ್ತದೆ. ನೀವಿಬ್ಬರೇ ಒಂಟಿಯಾಗಿದ್ದಾಗ ನಿಮ್ಮವರ ಮೇಲೆ ಸಹಜವಾಗಿ ಪ್ರೀತಿ ಕಾಳಜಿ ದುಪ್ಪಟ್ಟು ಆಗುತ್ತದೆ. ಇದೇ ಸಮಯದಲ್ಲಿ ಇಬ್ಬರೂ ಮುಕ್ತವಾಗಿ ಮಾತನಾಡು. ಅಥವಾ ನಿಮ್ಮ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಸೂಕ್ತ ಸಮಯ. ನಿಮ್ಮದೇ ಆದ ಒಂದು ಫೇವರೇಟ್ ಸ್ಪಾಟ್ ಮಾಡಿಕೊಳ್ಳಿ. ನಿಮಗೆ ಬೇಜಾರಾದಾಗ, ಬೇಕೆನಿಸಾದ ಅಲ್ಲಿಗೆ ಹೋಗಿ ಕೆಲ ಹೊತ್ತೋ ಅಥವಾ ಕೆಲ ದಿನ ಸಮಯ ಕಳೆದು ಬನ್ನಿ ಮನಸ್ಸು ಹಗುರವಾಗಿ ನೀವಿಬ್ಬರೂ ಇನ್ನಷ್ಟು ಹತ್ತಿರವಾಗುತ್ತೀರಿ.
ಒಟ್ಟಿಗೆ ಟಿವಿ ನೋಡಿ, ಸೀರೀಸ್‌ಗಳನ್ನು ನೋಡಿ. ಅಥವಾ ನಿಮಗೆ ಡ್ಯಾನ್ಸ್ ಮ್ಯೂಸಿಕ್‌ನಲ್ಲಿ ಇಷ್ಟವಿದ್ದರೆ ಇಬ್ಬರೂ ಒಟ್ಟಿಗೆ ಯಾವುದಾದರೂ ಸಂಗೀತ ವಾಧ್ಯವನ್ನು ಕಲೆತುಕೊಳ್ಳಿ. ಇಬ್ಬರೇ ಇದ್ದಾಗ ವಾಧ್ಯಗಳನ್ನು ನುಡಿಸಿ. ಒಬ್ಬರಿಗೊಬ್ಬರು ವಾಧ್ಯಗಳನ್ನು ಕಲಿಸಿಕೊಡಿ. ಇಂತ ಕಲೆಗಳಲ್ಲಿ ಒಬ್ಬರನ್ನೊಬ್ಬರು ತೊಡಗಿಸಿಕೊಂಡಾಗ ನಿಮ್ಮ ಸಾಂಗತ್ಯ ಬೋರ್ ಎನಿಸದೇ ಮತ್ತಷ್ಟು ಗಟ್ಟಿಯಾಗುತ್ತದೆ.
ಒಟ್ಟಿಗೆ ಅಡುಗೆ ಮಾಡಿ: ಇಬ್ರೂ ಸೇರಿ ಅಡುಗೆ ಮಾಡುವುದು ದಾಂಪತ್ಯದಲ್ಲಿ ಬೆಸ್ಟ್ ಫೀಲಿಂಗ್. ಬೇರೆ ಎಲ್ಲಾ ವಿಷಯದಲ್ಲಿ ಜೊತೆಗಿದ್ದುಕೊಂಡು ಹೆಂಡತಿಯೊಬ್ಬಳೇ ಅಡುಗೆ ಮನೆಯಲ್ಲಿ ಸದಾ ಒಬ್ಬಳೆ ಇದ್ದರೆ ಹೇಗೆ ಹೇಳಿ. ಅಡುಗೆ ಮನೆಯಲ್ಲಿ ಇಬ್ಬರೂ ಅಡುಗೆ ಮಾಡುತ್ತಾ ಹರಟುತ್ತಾ ಕಾಲ ಕಳೆಯೋದು ನಿಮ್ಮ ಸಾಂಗತಿಯ ನಡುವೆ ಮತ್ತಷ್ಟು ಪ್ರೀತಿ ಹೆಚ್ಚಿಸುತ್ತದೆ. ಇಬ್ಬರೂ ಹೊಸ ರುಚಿಗಳನ್ನು ಟ್ರೈ ಮಾಡಿ. ಕೇಕ್ ಅಥವಾ ಬಗೆ ಬಗೆಯ ಸ್ನ್ಯಾಕ್ಸ್ ಐಟಂಗಳನ್ನು ಟ್ರೈ ಮಾಡಿ. ಹೀಗೆ ಒಟ್ಟಿಗೆ ಅಡುಗೆ ಮಾಡಿದರೆ ಮಾಡಿದ ಅಡುಗೆ ಸ್ವಾದಿಷ್ಟವಾಗಿರುತ್ತದೆ ಹಾಗು ನಿಮ್ಮ ದಾಂಪತ್ಯದಲ್ಲಿ ಮತ್ತಷ್ಟು ಆತ್ಮೀಯತೆ ಹೆಚ್ಚುತ್ತದೆ.