ಲಕ್ನೋ: ಇಂದು ಬಹುತೇಕರು ರೀಲ್ಸ್ ಮಾಡೋ ಹುಚ್ಚಿಗೆ ಬಿದ್ದಿದ್ದಾರೆ. ತರಾವರಿ ರೀತಿಯಲ್ಲಿ ರೀಲ್ಸ್ ಮಾಡಿ ಯೂಟ್ಯೂಬ್, ಫೇಸ್ ಬುಕ್, ಇನ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ರಾತ್ರೋ ರಾತ್ರಿ ವೈರಲ್ ಆಗುತ್ತಿದ್ದಾರೆ. ಹೀಗೆ ನೀವು ರೀಲ್ಸ್ ಮಾಡ್ತಾ ಇದ್ದರೇ ಅದಕ್ಕೂ ಮುನ್ನಾ ಸುದ್ದಿ ಮುಂದೆ ಓದಿ.
ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ರೀಲ್ಸ್ ಮಾಡೋದಕ್ಕೆ ಹೋದಂತ ಮಹಿಳೆಯೊಬ್ಬರು ಕುತ್ತಿಗೆಗೆ ಕುಣಿಕೆ ಬಿಗಿದುಕೊಂಡು ಸಾವನ್ನಪ್ಪಿರುವಂತ ಆಘಾತಕಾರಿ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಮೋಹಿನಿ(27) ಎಂಬುದಾಗಿ ಗುರುತಿಸಲಾಗಿದೆ.
ರೀಲ್ಸ್ ಮಾಡೋ ಹುಚ್ಚಿಗೆ ಬಿದ್ದಿದಂತ ಮೋಹಿನಿ, ನೇಣು ಹಾಕಿಕೊಳ್ಳೋ ದೃಶ್ಯವನ್ನು ಸೆರೆಹಿಡಿಯೋದಕ್ಕೆ, ಅದೇ ರೀತಿಯಲ್ಲಿ ಮಾಡೋದಕ್ಕೆ ಹೋಗಿದ್ದಾರೆ. ಆಗ ಸ್ಟೂಲ್ ನಿಂದ ಕೆಳಗೆ ಜಾರಿ ಬಿದ್ದ ಮೋಹಿನಿಯ ಕುತ್ತಿಗೆಯನ್ನು ನೇಣಿನ ಕುಣಿಕೆ ಬಿಗಿದು ಬಿಡಿಸಿಕೊಳ್ಳೋದಕ್ಕೆ ಸಾಧ್ಯವಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದೇ ವೇಳೆಯಲ್ಲಿ ಮನೆಯಲ್ಲಿದ್ದಂತ ಅವರ 4 ವರ್ಷದ ಮಗಳು ತಾಯಿ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದದ್ದನ್ನು ಕಂಡು ಸಹಾಯಕ್ಕಾಗಿ ಅಕ್ಕ ಪಕ್ಕದವರನ್ನು ಕೂಗಿಕೊಂಡಿದ್ದಾರೆ. ಮನೆಯೊಳಗೆ ನೆರೆ ಹೊರೆಯವರು ಧಾವಿಸಿದಂತ ವೇಳೆಗಾಗಲೇ ಮೋಹಿನಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ, ಕುಣಿಕೆಯಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ತನಿಖೆ ಕೈಗೊಂಡಿದ್ದಾರೆ. ಈ ತನಿಖೆಯ ವೇಳೆಯಲ್ಲಿ ಮೋಹಿನಿ ರೀಲ್ಸ್ ಮಾಡೋದಕ್ಕೆ ಹೋಗಿ ಹಗ್ಗ ಕುತ್ತಿಗೆಗೆ ಬಿಗಿದು ನೇಣಿನಿಂದ ಸಾವನ್ನಪ್ಪಿರುವಂತ ಸತ್ಯ ಬಯಲಾಗಿದೆ.
BREAKING: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸೋಮವಾರದಿಂದ ಟಿಕೆಟ್ ದರ ಏರಿಕೆಯಾಗಲ್ಲ
BREAKING: 54 ನಿಗಮ, ಮಂಡಳಿ ಅಧ್ಯಕ್ಷರಿಗೆ ಬಂಫರ್ ಗಿಫ್ಟ್: ರಾಜ್ಯ ಸಚಿವರ ಸ್ಥಾನಮಾನ ನೀಡಿ ಸರ್ಕಾರ ಆದೇಶ








