Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈಲ್ವೆ ಕಾಮಗಾರಿ ಹಿನ್ನಲೆ: ಈ ರೈಲುಗಳ ಸಂಚಾರ ರದ್ದು

03/03/2026 5:22 PM

ಮಾ.6ರಂದು ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ: 2026-27ನೇ ಸಾಲಿನ ಬಜೆಟ್ ಅನುಮೋದನೆಗೆ ಸಜ್ಜಾದ ಸರ್ಕಾರ

03/03/2026 5:18 PM

BREAKING : ‘ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಮತ್ತೆ ‘IPL’ ಹವಾ ; ‘5 ಪಂದ್ಯಗಳು, ಉದ್ಘಾಟನೆ, ಪ್ಲೇ ಆಫ್ & ಫೈನಲ್’ಗೆ ಬೆಂಗಳೂರು ಆತಿಥ್ಯ!

03/03/2026 5:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ‘ವಿದ್ಯುತ್ ದರ ಏರಿಕೆ’ ಮಾಡಿದ್ದೇಕೆ ಗೊತ್ತಾ.? ಇಲ್ಲಿದೆ ‘ಸಚಿವ ಕೆಜೆ ಜಾರ್ಜ್’ ಸ್ಪಷ್ಟನೆ | Electricity Price Hike
KARNATAKA

ರಾಜ್ಯದಲ್ಲಿ ‘ವಿದ್ಯುತ್ ದರ ಏರಿಕೆ’ ಮಾಡಿದ್ದೇಕೆ ಗೊತ್ತಾ.? ಇಲ್ಲಿದೆ ‘ಸಚಿವ ಕೆಜೆ ಜಾರ್ಜ್’ ಸ್ಪಷ್ಟನೆ | Electricity Price Hike

By kannadanewsnow0920/03/2025 7:28 PM

ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿಯ ಪಿಂಚಿಣಿ, ಗ್ರಾಚ್ಯುಟಿ ಹಣದ ವಿಷಯವಾಗಿ ಹೈಕೋರ್ಟ್‌ 2024ರ ಮಾರ್ಚ್‌ನಲ್ಲಿ ಹೊರಡಿಸಿದ್ದ ಆದೇಶದ ಮೇರೆಗೆ ಕೆಇಆರ್‌ಸಿ ದರ ಹೆಚ್ಚಳದ ಆದೇಶ ಹೊರಡಿಸಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಸರ್ಕಾರ ವಿದ್ಯುತ್‌ ದರವನ್ನು ಏರಿಸಿಲ್ಲ. ಯೂನಿಟ್‌ಗೆ 36 ಪೈಸೆ ಏರಿಕೆ ಆಗಿರುವುದು ವಿದ್ಯುತ್‌ ದರದ ಏರಿಕೆ ಅಲ್ಲ. ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿ ಹಣದ ಪಾಲನ್ನು ಗ್ರಾಹಕರಿಂದ ಪಡೆಯಬಹುದು ಎಂಬ ಹೈಕೋರ್ಟ್‌ ಆದೇಶದ ಮೇರೆಗೆ ಕೆಇಆರ್‌ಸಿ ಈ ಆದೇಶ ಹೊರಡಿಸಿದೆ. ಅದರಂತೆ, 2025-26ರ ಹಣಕಾಸು ವರ್ಷದಲ್ಲಿ ಪ್ರತಿ ಯೂನಿಟ್‌ಗೆ 36 ಪೈಸೆಯನ್ನು ಏರಿಸಿದೆ. ಎಂದು‌ ಸ್ಪಷ್ಟಪಡಿಸಿದರು.

“ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆಇಬಿ)ಯನ್ನು ರದ್ದುಗೊಳಿಸಿ ಕೆಪಿಟಿಸಿಎಲ್ ‌ಹಾಗೂ 5 ಎಸ್ಕಾಂಗಳನ್ನು ರಚಿಸಿದ ನಂತರ 2022ರ ಮಾರ್ಚ್‌ನಲ್ಲಿ ಕೆಇಆರ್‌ಸಿ ಮುಂದೆ ಪಿಂಚಣಿ ಮತ್ತು ಗ್ರಾಚ್ಯುಟಿ ಪಾಲನ್ನು ಗ್ರಾಹಕರಿಂದ ಪಡೆಯಲು ಆದೇಶಿಸುವಂತೆ ಅಂದಿನ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆಗ ಕೆಇಆರ್‌ಸಿ ಪ್ರಸ್ತಾವನೆಯನ್ನು ಪುರಸ್ಕರಿಸಿರಲಿಲ್ಲ. ಇದೀಗ ಹೈಕೋರ್ಟ್‌ ಆದೇಶದ ಮೇರೆಗೆ ಕೆಇಆರ್‌ಸಿ ಹೊಸ ಆದೇಶ ಹೊರಡಿಸಿದೆ,”ಎಂದು ಇಂಧನ ಸಚಿವರು ಹೇಳಿದರು.

“ಪಿಂಚಣಿ ಮತ್ತು ಗ್ರಾಚ್ಯುಟಿ ಪಾಲನ್ನು ಗ್ರಾಹರಕರಿಂದ ಪಡೆಯುವ ಪ್ರಸ್ತಾವನೆಯನ್ನು ಪ್ರಶ್ನಿಸಿ ಎಫ್‌ಕೆಸಿಸಿಐ ಹೈಕೋರ್ಟ್‌ಗೆ ಮೆಟ್ಟಿಲೇರಿತ್ತು. ಈ ಅರ್ಜಿಯನ್ನು ಹೈಕೋರ್ಟ್‌ 2024ರ ಮಾರ್ಚ್‌ 25ರಂದು ತಿರಸ್ಕರಿಸಿತ್ತು. ಹೈಕೋರ್ಟ್‌ ಆದೇಶವನ್ನು ಮುಂದಿಟ್ಟುಕೊಂಡು 2024ರ ನವೆಂಬರ್‌ 30ರಂದು ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳು ಮತ್ತೆ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದವು. ಅದನ್ನು ಪುರಸ್ಕರಿಸಿ ಕೆಇಆರ್‌ಸಿ ಆದೇಶ ಹೊರಡಿಸಿದೆ,” ಎಂದು ಸಚಿವ ಕೆ.ಜೆ.ಜಾರ್ಜ್‌ ಸ್ಪಷ್ಟಪಡಿಸಿದರು.

“ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ವಿದ್ಯುತ್‌ ಸುಧಾರಣಾ ನಿಯಮಗಳಿಗೆ 2022ರಲ್ಲಿ ತಿದ್ದುಪಡಿ ತರಲಾಗಿತ್ತು. ಕಪಿಟಿಸಿಎಲ್‌ಮತ್ತು ಎಸ್ಕಾಂಗಳ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿಯ ಪಾಲನ್ನು ಗ್ರಾಹಕರಿಂದ ಪಡೆಯಲು ಕೆಇಆರ್‌ಸಿ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ತಿದ್ದುಪಡಿಯಲ್ಲಿ ಹೇಳಲಾಗಿತ್ತು. ಇದರ ಆಧಾರದ ಮೇಲೆ ಮತ್ತು ಹೈಕೋರ್ಟ್‌ ಆದೇಶದಂತೆ ಕೆಇಆರ್‌ಸಿ ದರ ಹೆಚ್ಚಳ ಮಾಡಿದೆ,”ಎಂದು ತಿಳಿಸಿದರು.

BIG NEWS: ರಾಜ್ಯ, ರಾಷ್ಟ್ರಮಟ್ಟದ ’48 ಮಂದಿ’ ಹನಿಟ್ರ್ಯಾಪ್ CD, ಪೆನ್ ಡ್ರೈವ್ ಇದ್ದಾವೆ: ಸಚಿವ ರಾಜಣ್ಣ ಸ್ಪೋಟಕ ಬಾಂಬ್ | Honey Trap

BREAKING NEWS: ನನ್ನ ಹನಿಟ್ರ್ಯಾಪ್ ಆಗಿರೋದು ನಿಜ, ಆದರೇ ನಾನು ಒಳಗಾಗಿಲ್ಲ: ಸಚಿವ ಕೆ.ಎನ್ ರಾಜಣ್ಣ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ರೈಲ್ವೆ ಕಾಮಗಾರಿ ಹಿನ್ನಲೆ: ಈ ರೈಲುಗಳ ಸಂಚಾರ ರದ್ದು

03/03/2026 5:22 PM1 Min Read

ಮಾ.6ರಂದು ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ: 2026-27ನೇ ಸಾಲಿನ ಬಜೆಟ್ ಅನುಮೋದನೆಗೆ ಸಜ್ಜಾದ ಸರ್ಕಾರ

03/03/2026 5:18 PM1 Min Read

BREAKING : ‘ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಮತ್ತೆ ‘IPL’ ಹವಾ ; ‘5 ಪಂದ್ಯಗಳು, ಉದ್ಘಾಟನೆ, ಪ್ಲೇ ಆಫ್ & ಫೈನಲ್’ಗೆ ಬೆಂಗಳೂರು ಆತಿಥ್ಯ!

03/03/2026 5:09 PM1 Min Read
Recent News

ರೈಲ್ವೆ ಕಾಮಗಾರಿ ಹಿನ್ನಲೆ: ಈ ರೈಲುಗಳ ಸಂಚಾರ ರದ್ದು

03/03/2026 5:22 PM

ಮಾ.6ರಂದು ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ: 2026-27ನೇ ಸಾಲಿನ ಬಜೆಟ್ ಅನುಮೋದನೆಗೆ ಸಜ್ಜಾದ ಸರ್ಕಾರ

03/03/2026 5:18 PM

BREAKING : ‘ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಮತ್ತೆ ‘IPL’ ಹವಾ ; ‘5 ಪಂದ್ಯಗಳು, ಉದ್ಘಾಟನೆ, ಪ್ಲೇ ಆಫ್ & ಫೈನಲ್’ಗೆ ಬೆಂಗಳೂರು ಆತಿಥ್ಯ!

03/03/2026 5:09 PM
Mega offer for job seekers: Notification to fill 24,300 government posts in March itself

ಉದ್ಯೋಗಾಕಾಂಕ್ಷಿಗಳಿಗೆ ಮೆಗಾ ಆಫರ್: ಮಾರ್ಚ್‌ನಲ್ಲೇ 24,300 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ

03/03/2026 5:06 PM
State News
KARNATAKA

ರೈಲ್ವೆ ಕಾಮಗಾರಿ ಹಿನ್ನಲೆ: ಈ ರೈಲುಗಳ ಸಂಚಾರ ರದ್ದು

By kannadanewsnow0903/03/2026 5:22 PM KARNATAKA 1 Min Read

ಬೆಂಗಳೂರು: ವಂದಾಲ್ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (ಗೇಟ್ ಸಂಖ್ಯೆ 62) ಬಳಿ ಕಾಮಗಾರಿ ಹಮ್ಮಿಕೊಂಡಿರುವ…

ಮಾ.6ರಂದು ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ: 2026-27ನೇ ಸಾಲಿನ ಬಜೆಟ್ ಅನುಮೋದನೆಗೆ ಸಜ್ಜಾದ ಸರ್ಕಾರ

03/03/2026 5:18 PM

BREAKING : ‘ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಮತ್ತೆ ‘IPL’ ಹವಾ ; ‘5 ಪಂದ್ಯಗಳು, ಉದ್ಘಾಟನೆ, ಪ್ಲೇ ಆಫ್ & ಫೈನಲ್’ಗೆ ಬೆಂಗಳೂರು ಆತಿಥ್ಯ!

03/03/2026 5:09 PM
Mega offer for job seekers: Notification to fill 24,300 government posts in March itself

ಉದ್ಯೋಗಾಕಾಂಕ್ಷಿಗಳಿಗೆ ಮೆಗಾ ಆಫರ್: ಮಾರ್ಚ್‌ನಲ್ಲೇ 24,300 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ

03/03/2026 5:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.