ಮೈಸೂರು: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ವೇಳೆ ಪ್ರತಿಷ್ಠಾಪನೆಯಾಗುತ್ತಿರೋ ಶ್ರೀರಾಮನ ಮೂರ್ತಿ ಯಾರು ಕೆತ್ತಿರೋದು ಎಂಬುದಾಗಿ ತೀವ್ರ ಕುತೂಹಲ ಪ್ರತಿಷ್ಠಾಪನೆಗೆ ಮುಂಚೆ ಇತ್ತು. ಅಂತಿಮವಾಗಿ ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ರಾಮಲಲ್ಲಾ ಮೂರ್ತಿ ಆಯ್ಕೆಯಾಗಿ ಪ್ರತಿಷ್ಠಾಪನೆ ಕೂಡ ಆಗಿದೆ. ಈಗ ಆ ಮೂರ್ತಿಯ ಕಣ್ಣುಗಳು ಹೊಳೆಯುತ್ತಿರೋ ಹಿಂದಿನ ಕಾರಣ ಕೂಡ ರಿವೀಲ್ ಆಗಿದೆ. ಅದೇನು ಅಂತ ಮುಂದೆ ಓದಿ.
ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರಲ್ಲಿ ಸ್ಥಾಪನೆಯಾಗಿರೋ ರಾಮಲಲ್ಲಾ ಮೂರ್ತಿಯ ಬಗ್ಗೆಯೇ ಎಲ್ಲರ ಮಾತು. ಥೇಟ್ ಶ್ರೀರಾಮ ಚಂದ್ರನೇ ಇದ್ದಂತೆ ಇದೆ ಮೂರ್ತಿ. ಅದರಲ್ಲೂ ರಾಮಲಲ್ಲಾ ಮೂರ್ತಿಯ ಕಣ್ಣುಗಳಂತೂ ಹೊಳೆಯುತ್ತಿವೆ. ಅವುಗಳಲ್ಲಿ ಜೀವ ಕಳೆಯೇ ತುಂಬಿದೆ ಎಂಬುದಾಗಿ ವೀಕ್ಷಿಸಿದಂತ ಪ್ರತಿಯೊಬ್ಬರು ಹೇಳುತ್ತಿದ್ದಾರೆ.
ಹಾಗಾದ್ರೇ ರಾಮಲಲ್ಲಾ ಮೂರ್ತಿಯ ಕಣ್ಣುಗಳು ಹೊಳೆಯುತ್ತಿರೋದು ಏಕೆ.?
ಈ ಬಗ್ಗೆ ಶಿಲ್ಪಿ ಅರುಣ್ ಯೋಗಿರಾಜ್ ಸೀಕ್ರೇಟ್ ರಿವೀಲ್ ಮಾಡಿದ್ದಾರೆ. ಅಯೋಧ್ಯೆಯ ರಾಮಲಲ್ಲಾ ಮೂರ್ತಿಯ ಕಣ್ಣುಗಳನ್ನು ಚಿನ್ನ, ಬೆಳ್ಳಿಯ ಉಳಿಯಿಂದ ಕೆತ್ತನೆ ಮಾಡಿರೋದಾಗಿ ತಿಳಿಸಿದ್ದಾರೆ.
ಚಿನ್ನದ ಉಳಿ, ಬೆಳ್ಳಿಯ ಸುತ್ತಿಗೆಯಿಂದ ಕೆತ್ತನೆ ಮಾಡಿರೋ ಕಾರಣವೇ, ರಾಮಲಲ್ಲಾ ಮೂರ್ತಿಯ ಕಣ್ಣುಗಳು ಅಷ್ಟು ತೇಜೋ ಪೂರ್ಣವಾಗಿ ಹೊಳೆಯುವಂತೆ ಇರೋದು. ಆ ರಾಮಲಲ್ಲಾ ಮೂರ್ತಿಗೆ ಜೀವಕಳೆ ತುಂಬಿರೋದು ಕಾರಣ ಎಂಬುದಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ರಿವೀಲ್ ಮಾಡಿದ್ದಾರೆ.
Thought of sharing this Silver hammer with the golden chisel using which I carved the divine eyes (Netronmilana )of Ram lalla, Ayodhya pic.twitter.com/95HNiU5mVV
— Arun Yogiraj (@yogiraj_arun) February 10, 2024
ರಾಜ್ಯದ ‘SSLC, ಉನ್ನತ ಶಿಕ್ಷಣ ವ್ಯಾಸಂಗ’ದ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್
‘ರೋಡ್ ಟು ನೋವೇರ್’ನಿಂದ ಸಂಪೂರ್ಣ ಅಭಿವೃದ್ಧಿ ಕಡೆ ಮೋದಿಜೀ ಆಡಳಿತ- ಡಾ.ಸಿ.ಎನ್ ಅಶ್ವತ್ಥನಾರಾಯಣ