ಒಮ್ಮೆ ಕಾರ್ತಿವೀರ್ಯಾರ್ಜುನ, ಶಿವ ಮಹಿಮೆಯನ್ನು ಕುರಿತು ಹೇಳುತ್ತಾ,ಹಿಂದೆ ಶ್ರೀ ರಾಮನು ರಾವಣನನ್ನು ಸಂಹರಿಸುವುದಕ್ಕಾಗಿ ಸಮುದ್ರದ ಮೇಲೆ ಸೇತುವೆಯನ್ನು ಕಟ್ಟಿದ ಸ್ಥಳದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಶಿವನನ್ನು ಭಕ್ತಿಯಿಂದ ಆರಾಧಿಸಿ ಧ್ಯಾನಿಸಿ ಸಮುದ್ರವನ್ನು ದಾಟಿ ರಾವಣನನ್ನು ಸಂಹರಿಸಿದನು. ಇದೇ ರೀತಿ ಹನುಮಂತನು ಸಮುದ್ರ ಲಂಘನ ಮಾಡುವಾಗ ಶಿವನನ್ನು ಭಕ್ತಿಯಿಂದ ಧ್ಯಾನಿಸಿ, ಶ್ರೀ ರಾಮನಿಗೆ ನಮಸ್ಕರಿಸಿ ಮಹಾಬಲವನ್ನು ಸಂಪಾದಿಸಿ ಸಮುದ್ರವನ್ನು ದಾಟಿದನು. ಅರ್ಜುನನು ಯುದ್ಧದ ರಣರಂಗಕ್ಕೆ
ಪ್ರವೇಶ ಮಾಡುವ ಮೊದಲು ಕೃಷ್ಣನ ಸಲಹೆಯಂತೆ, ಶಿವನನ್ನು ಶ್ರದ್ಧಾ ಭಕ್ತಿ ಯಿಂದ ಪೂಜಿಸಿ ಧ್ಯಾನಿಸಿ ಯುದ್ಧ ರಂಗ ಪ್ರವೇಶ ಮಾಡಿದನು. ಈ ರೀತಿ ಎಂಥೆಂಥಾ ಮಹಾಮಹಿಮಾನ್ವಿತರು ಪುಣ್ಯ ಪುರುಷರೆಲ್ಲರೂ ಮಹಾಶಿವನನ್ನು ಅನವರತ ಪೂಜಿಸಿ, ಧ್ಯಾನಿಸಿ, ಜಯವನ್ನು ಸಂಪಾದಿಸಿಕೊಂಡರು. ಅಂತ ಮಹಾಮಹಿಮನಾದ ಪರಮೇಶ್ವರನನ್ನು ಸ್ತ್ರೀಯರು ಆರಾಧಿಸಿ ತಮ್ಮ ತಮ್ಮ ಮನದಿಷ್ಟಾರ್ಥಗಳನ್ನೆಲ್ಲ ಪೂರೈಸಿಕೊಂಡರು. ಆದುದರಿಂದ ಪೂಜೆಗಳಲೆಲ್ಲಾ
‘ಮಹಾಶಿವನ’ ಪೂಜೆ ಪರಮ ಪವಿತ್ರವಾದದ್ದು, ಪುಣ್ಯ ಪ್ರಧವಾದದ್ದು ಆಗಿದೆ.
ಹಾಗೆ, ಗಂಗಾ ನದಿಯು ಪವಿತ್ರವಾದದ್ದು. ಹೇಗೆಂದರೆ ವಿಷ್ಣುವಿನ ಪಾದದಿಂದ ಜನಿಸಿ, ಶಿವನ ಶಿರಸ್ಸಿನಿಂದ ಪ್ರಹರಿಸುತ್ತಾಳೆ. ಆದ್ದರಿಂದ ಗಂಗೆಯಲ್ಲಿ ಸ್ನಾನ ಮಾಡಿದರೆ ಸರ್ವ ಪಾಪಗಳು ನಶಿಸಿ ಹೋಗುತ್ತವೆ. ಒಂದು ವೇಳೆ ಗಂಗಾನದಿ ಅಲ್ಲದಿದ್ದರೂ, ಯಾವುದೇ ನೀರನ್ನು ಗಂಗಾ, ಗಂಗಾ, ಗಂಗಾ, ಎಂದು ಮೂರು ಬಾರಿ ಹೇಳಿ ಪ್ರೋಕ್ಷಿಸಿಕೊಂಡರೆ ಗಂಗಾಜಲಕ್ಕೆ ಸಮಾನವಾಗುತ್ತದೆ. ಗಂಗಾ ಜಲದಲ್ಲಿ ಸಾಕ್ಷಾತ್ ವಿಷ್ಣು ಸಾನಿಧ್ಯ ಇರುತ್ತದೆ. ಕಾರ್ತಿಕ, ಮಾಘ, ಮಾರ್ಗಶಿರ ಯಾವುದೇ ಪುಣ್ಯ ಮಾಸಗಳಲ್ಲಿ ಶಿವ ಮತ್ತು ವಿಷ್ಣುವಿನ ಆರಾಧನೆಯನ್ನು ಭಕ್ತಿಯಿಂದ ಮಾಡಿದರೆ ಸಕಲ ಪಾಪಗಳು ಪರಿಹಾರ ಆಗುವುದರೊಂದಿಗೆ ಸಾಕಷ್ಟು ಪುಣ್ಯವನ್ನು ಸಂಪಾದಿಸಬಹುದು.
ಅರಳಿ ಮರದ ಕುರಿತು ಕಾರ್ತಿಕ ಮಾಸದ ಕಥೆ ಹೀಗಿದೆ. ಸಮುದ್ರಮಂಥನ ಕಾಲದಲ್ಲಿ ದೊರಕಿದ ಅನೇಕ ಅನರ್ಘ್ಯ ವಸ್ತುಗಳಲ್ಲಿ ಲಕ್ಷ್ಮೀ ಮತ್ತು ಕೌಸ್ತುಭ ಗಳನ್ನು ಶ್ರೀಹರಿಗೆ ಅರ್ಪಿಸಲಾಯಿತು. ಉಳಿದ ಸಂಪತ್ತುಗಳನ್ನೆಲ್ಲ ದೇವತೆಗಳು ಹಂಚಿಕೊಂಡರು. ಮಹಾವಿಷ್ಣು ಲಕ್ಷ್ಮಿಯನ್ನು ವಿವಾಹವಾದ ಸಮಯದಲ್ಲಿ ಲಕ್ಷ್ಮಿಯು, ನಾರಾಯಣನಿಗೆ ಹೇಳಿದಳು, ‘ಸ್ವಾಮಿ ನನಗಿಂತ ಹಿರಿಯಳಾದ ನಮ್ಮ ಅಕ್ಕ ಜೇಷ್ಠಾದೇವಿ ಇದ್ದಾಳೆ. ಹಿರಿಯಳಾದ ಅವಳಿಗೆ ಮದುವೆಯಾಗುವ ಮೊದಲೇ ಕಿರಿಯಳಾದ ನನಗೆ ಮದುವೆಯಾಯಿತು. ಆದ್ದರಿಂದ ಅವಳಿಗೂ ಬೇಗ ಮದುವೆ ಮಾಡಬೇಕು.’ ಎಂದಳು. ಆಗ ನಾರಾಯಣನು, ಉದ್ಧಾಲಕ ಎಂಬ ಮಹರ್ಷಿಗೆ ಜೇಷ್ಠಾದೇವಿಯ ಜೊತೆ ಮದುವೆ ಮಾಡಿ ಅವನಿಗೆ ಒಪ್ಪಿಸಿದನು. ಜೇಷ್ಠಾದೇವಿಯು ನೋಡಲು ಸ್ಥೂಲ ಕಾಯ, ಕೆಂಪು ಕಣ್ಣುಗಳು, ಒರಟು ಮುಖ, ಮೊನಚು ಮಾತು, ಈ ರೀತಿ ಇರುವ ಜೇಷ್ಠಾ ಲಕ್ಷ್ಮಿಯನ್ನು ಮುನಿಯು ತನ್ನ ಆಶ್ರಮಕ್ಕೆ ಕರೆದೊಯ್ದುನು.
ಉದ್ದಾಲಕ ಋಷಿಯ ಆಶ್ರಮವು , ಜೇಷ್ಠಾ ದೇವಿಗೆ ಇಷ್ಟ ಆಗಲಿಲ್ಲ, ಅಲ್ಲಿ ನಡೆಯುವ ಹೋಮ, ಹೊಗೆ, ವೇದ ಘೋಷಣೆ ಮಂತ್ರ ಪಠಣಗಳು, ನೋಡೋದಕ್ಕೂ, ಕೇಳುವುದಕ್ಕೂ ಅವಳಿಗೆ ಆಗಲಿಲ್ಲ. ಆಗವಳು, ಹೇ ಮುನಿ, ಈ ಹೋಮ, ಹೊಗೆ, ಮಂತ್ರ, ಅತಿಥಿ ಸತ್ಕಾರ, ವೇದಗಳನ್ನು ಸ್ತುತಿಸುತ್ತಿರುವ ಬ್ರಾಹ್ಮಣರು, ಅನ್ಯೋನ್ಯರಾದ ದಂಪತಿಗಳು, ಪಿತೃಕಾರ್ಯ ನಡೆಯುವ ಸ್ಥಳ, ದಾನ ಧರ್ಮ ಮಾಡುವ ಜಾಗ, ಗುರು ಪೂಜೆಮಾಡುವ ಸ್ಥಳ, ಮಕ್ಕಳಿಗೆ ಲಾಲಿ ಹಾಡು ತೂಗುವ ಜಾಗ, ನಲಿಯುವ ಮಕ್ಕಳು, ಇರುವಂತಹ ಕಡೆಯಲ್ಲಿ ನನಗೆ ಉಸಿರು ಕಟ್ಟಿ ಹೋಗಿದೆ. ಇನ್ನು ಅರ್ಧ ಕ್ಷಣವು ನಾನು ಇಲ್ಲಿ ಇರಲಾರೆ.ಎಂದಳು. ಉದ್ದಾಲಕನು ಹಾಗಾದರೆ ನಿನಗೆ ಯಾವ ಸ್ಥಳ ಬೇಕು ಎಂದು ಕೇಳಿದನು.
ಜೇಷ್ಟಾದೇವಿ ಹೇಳಿದಳು,. ಎಲ್ಲಿ ಹಗಲು ರಾತ್ರಿ ಗಂಡ -ಹೆಂಡತಿ ಜಗಳ ಮಾಡುತ್ತಾರೋ, ಎಲ್ಲಿ ಅತಿಥಿಗಳಿಗೆ ನಿರಾಸೆಯಾಗುವುದೋ, ಯಾವ ಜಾಗದಲ್ಲಿ ವೃದ್ಧರು, ಸ್ನೇಹಿತರು, ಸಜ್ಜನರಿಗೆ ಅವಮಾನ ಆಗುವುದೋ,
ಎಲ್ಲಿ ಬೈಗುಳ, ಅಶ್ಲೀಲ ಶಬ್ದ, ದುರಾಚಾರ ,ದುರ್ನಡತೆ, ಪರಸ್ತ್ರೀ ಅಪಹರಣ,
ಕಿರುಕುಳ, ಪರರ ದ್ರವ್ಯದ ಅಪಹರಣ, ಬ್ರಹ್ಮ ಹತ್ಯೆ, ಬ್ರಾಹ್ಮಣರ ನಿಂದನೆ,ಇರುತ್ತದೆಯೋ ಅವೆಲ್ಲವೂ ನನಗೆ ದಯವಾದ ಸ್ಥಳ ಎಂದಳು. ಇಂತಹ ಹೊಲಸು ಮಾತುಗಳನ್ನು ಕೇಳಿದ ಉದ್ಧಾಲಕನು, ನೊಂದುಕೊಂಡನು.
ಒಂದು ಕ್ಷಣವು ತನ್ನ ಆಶ್ರಮದಲ್ಲಿ ಇರಿಸಿಕೊಳ್ಳಲು ಅವನ ಮನಸ್ಸು ಒಪ್ಪಲಿಲ್ಲ.
ಕುಟೀರ ದಿಂದ ಆಕೆಯನ್ನು ಕರೆದುಕೊಂಡು ಬೇರೆ ಸ್ಥಳ ಹುಡುಕುತ್ತಾ ಹೊರಟನು. ಎಷ್ಟು ಅಲೆದರು ಅಂಥ ಸ್ಥಳ ಸಿಗಲಿಲ್ಲ. ಹೋಗುತ್ತಿದ್ದ ರಸ್ತೆ ಬದಿಯಲ್ಲಿದ್ದ ಒಂದು ಅರಳಿ ಮರ ತೋರಿಸಿ, ನೀನು ಸ್ವಲ್ಪ ಹೊತ್ತು ಇಲ್ಲಿ ಕುಳಿತಿರು ನಾನು ಸ್ಥಳವನ್ನು ಹುಡುಕಿ ಬಂದು ಕರೆದೊಯ್ಯುತ್ತೇನೆ ಎಂದು ಹೇಳಿ ಹೊರಟನು. ಗಂಡನ ಆಜ್ಞೆಯಂತೆ ಜೇಷ್ಠಾ ದೇವಿಯು ಅಲ್ಲೇ ನಿಂತಿದ್ದಳು. ಎಷ್ಟು ದಿನಗಳಾದರೂ ಪತಿ ಉದ್ಧಾನಕ ವಾಪಸ್ಸು ಬರಲಿಲ್ಲ. ಗಂಡ ಬರದೇ ಇದ್ದ ಕಾರಣ ಆಕೆ ಜೋರಾಗಿ ಅಳತೊಡಗಿದಳು. ಅವಳ ದುಃಖವನ್ನರಿತ ಲಕ್ಷ್ಮೀ-ನಾರಾಯಣರು ಅಲ್ಲಿಗೆ ಬಂದರು.
ಶ್ರೀಹರಿಯು, ಅಳುತ್ತಿರುವ ಜೇಷ್ಟಾ ದೇವಿಯನ್ನು ಸಮಾಧಾನಪಡಿಸಿ, ಜೇಷ್ಟಾ ನೋಡು ಈ ಅರಳಿ ಮರದಲ್ಲಿ ನನ್ನ ಸನ್ನಿಧಿ ಇರುತ್ತದೆ. ಆದ್ದರಿಂದ ನೀನು ಈ ವೃಕ್ಷದ ಮೂಲದಲ್ಲಿ ನೆಲೆಸು. ನಿನ್ನನ್ನು ಪ್ರತಿ ವರ್ಷ ಯಾರು ಪೂಜಿಸುತ್ತಾರೋ,
ಅವರಿಗೆ ಲಕ್ಷ್ಮಿ ಒಲಿಯುತ್ತಾಳೆ ಎಂದನು. ಹೀಗೆ ಶನಿವಾರ ಅರಳೀವೃಕ್ಷವನ್ನು ಯಾರು ಶ್ರದ್ಧಾ ಭಕ್ತಿಗಳಿಂದ ಪೂಜಿಸಿದರೆ ಹೇಗೆ ಲಕ್ಷ್ಮಿ ಕಟಾಕ್ಷವಾಗುತ್ತದೆ ಎಂಬುದು ಭಗವಂತನ ಮಾತು. ಇಂಥ ಪುಣ್ಯಪ್ರದವಾದ ಕಥೆಗಳನ್ನು ಯಾರು ಹೇಳಿ ಕೇಳುತ್ತಾರೋ ಅವರು ಸಕಲ ಪಾಪಗಳನ್ನು ಕಳೆದುಕೊಂಡು ವಿಷ್ಣು ಸಾಯುವ್ಯ ಪದವಿಯನ್ನು ಪಡೆಯುವರು ಎಂಬುದು ಮಹಾಮಹಿಮರ ಅಭಿಪ್ರಾಯವಾಗಿದೆ.
ಪ್ರಾಥ: ಸ್ಮರಾಮಿ ಪರಮೇಶ್ವರ ವಕ್ತ್ರ ಪದ್ಮಂ
ಫಾಲಾಕ್ಷ ಕಿಲ ಪರಿಶೋಣಿತ ಪಂಚಬಾಣಂ
ಭಸ್ಮ ತ್ರಿಪುಂಡ ರಚಿತಂ ಪಣಿಕುಂಡಲಾಡ್ಯಂ
ಕುಂದೇಂದು ಚಂದನ ಸುಧಾರಸ ಮಂದಹಾಸಂ!
ಪ್ರಾಥಸ್ಮರಾಮಿ ಪರಮೇಶ್ವರ ಪುಣ್ಯನಾಮಂ
ಶ್ರೇಯ: ಪ್ರದಂ ಸಕಲ ದುಃಖ ವಿನಾಶ ಹೇತುಂ
ಸಂಸಾರ ತಾಪಶಮನಂ ಕಲಿ ಕಲ್ಮಷಘ್ನಂ
ಗೋ ಕೋಟಿ ದಾನ ಫಲದಂ ಸ್ಮರೇ ನಿತ್ಯಂ!!
ಮೂಲತೋ ಬ್ರಹ್ಮ ರೂಪಾಯ,
ಮಧ್ಯತೋ ವಿಷ್ಣು ರೂಪಿನೆ,
ಅಗ್ರತೋ ಶಿವ ರೂಪಾಯ
ವೃಕ್ಷ ರಾಜಯ ತೇ ನಮಃ’
ಅಂದರೆ ಅಶ್ವತ್ಥ ಮರ(Peepal tree)ದ ಬೇರುಗಳಲ್ಲಿ ಬ್ರಹ್ಮನೂ, ಕಾಂಡದಲ್ಲಿ ವಿಷ್ಣುವೂ, ಎಲೆಗಳಲ್ಲಿ ಶಿವನೂ ವಾಸಿಸುತ್ತಾರೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಎಲ್ಲ ವೃಕ್ಷಗಳ ರಾಜ ಎನಿಸಿಕೊಂಡಿದೆ ಅಶ್ವತ್ಥ ವೃಕ್ಷ. ಋಗ್ವೇದದಲ್ಲಿ ಈ ವೃಕ್ಷ ದೇವರೆನಿಸಿಕೊಂಡಿದ್ದರೆ, ಅಥರ್ವ ವೇದ(Atharva Veda)ದಲ್ಲಿ ಇದನ್ನು ಎಲ್ಲ ದೇವರುಗಳ ಮನೆ ಎನ್ನಲಾಗುತ್ತದೆ. ಯಜುರ್ ವೇದ(Yajur Veda)ದಲ್ಲಿ, ಪ್ರತಿ ಯಜ್ಞಕ್ಕೂ ಅರಳಿ ಮರ ಬೇಕೇ ಬೇಕು ಎನ್ನಲಾಗುತ್ತದೆ. ಅಂದರೆ ನಾಗರೀಕತೆ ಆರಂಭವಾದಂದಿನಿಂದಲೂ ಅರಳೀ ಮರಕ್ಕೆ ದೈವೀ ಸ್ಥಾನವಿದೆ. ಇದಕ್ಕೆ ವಾಸುದೇವ, ಚೈತನ್ಯ, ವಿಶ್ವವೃಕ್ಷ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಹಿಂದೂ, ಜೈನ, ಬೌದ್ಧರೆಲ್ಲರಿಗೂ ಈ ಮರದ ಮೇಲೆ ಧಾರ್ಮಿಕ ನಂಬಿಕೆಗಳಿವೆ.
ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು









