*ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ನಟಿ ರಮ್ಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಅಂದ ಹಾಗೇ ಅವರಿಗೆ ಮೋಹಕತಾರೆ ಎನ್ನುವ ಬಿರುದು ಕೂಡ ಇದೇ. ಸಾಮಾನ್ಯವಾಗಿ ನಟಿಯರಿಗೆ ಹಾಗೂ ನಟರಿಗೆ ಬಿರುದು ನೀಡುವುದು ಅವರ ಸಿನಿಮಾ ನಿರ್ದೇಶಕರು ಇಲ್ಲವೇ ಅಭಿಮಾನಿಗಳು ಆಗಿರುತ್ತಾರೆ. ಅದೇ ರೀತಿ ಇಲ್ಲೂ ಕೂಡ ರಮ್ಯ ಅವರಿಗೆ ಅವರ ಅಭಿಮಾನಿಯೊಬ್ಬರು ಅದರಲ್ಲೂ ಚಿಕ್ಕ ಹುಡುಗ ಮೋಹಕತಾರೆ ಅಂತ ಬಿರುದು ನೀಡಿದ್ದಾರೆ ಅಂತ ನಂಬಲೇ ಬೇಕು.
ಹೌದು. ನಟಿ ರಮ್ಯ ಅವರು ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಈ ವೇಳೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಗ ಬಾಲಕನಾಗಿದ್ದ ಮನೋವಜಂ ಎನ್ನುವವರು ಕಾರ್ಯಕ್ರಮದ ನಿರೂಪಕಿ ಅರ್ಚನ ಉಡುಪ ಅವರು ಯಾವ ಹಾಡನ್ನು ಹೇಳುತ್ತಿರ ಅಂತ ಕೇಳಿದ್ದಕ್ಕೆ. ಇವತ್ತು ನಾನು ಮೋಹಕ ತಾರೆ ರಮ್ಯಾ ನಟಿಸಿರುವ ಗೌರಮ್ಮ ಸಿನಿಮಾದ ಹಾಡನ್ನು ಹೇಳುತ್ತಾರೆ. ಅದೇ ವೇಳೇ ಅರ್ಚನ ಉಡುಪ ಅವರು ಕೂಡ ನಿಮಗೆ ನಾಮಕಾರಣ ಆಗಿದೆ ಅಂತ ರಮ್ಯ ಅವರಿಗೆ ತಿಳಿಸುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.