ಬೆಂಗಳೂರು: ರಾಜ್ಯ ಸರ್ಕಾರದಿಂದ ಇಂದು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹಾಗೂ ನಟಿ ಬಿ.ಸರೋಜಾ ದೇವಿಗೆ ಮರಣೋತ್ತರವಾಗಿ ಕರ್ನಾಟಕ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ. ಹಾಗಾದ್ರೇ ಈವರೆಗೆ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾದಂತ ಗಣ್ಯರು ಯಾರೆಲ್ಲ ಎನ್ನುವ ಪಟ್ಟಿ ಮುಂದಿದೆ ಓದಿ.
ಕರ್ನಾಟಕ ರತ್ನ ಪ್ರಶಸ್ತಿಯು ಕರ್ನಾಟಕ ಸರ್ಕಾರ ನೀಡುವ ಅತ್ಯುತ್ನತ ಪ್ರಶಸ್ತಿಯಾಗಿದೆ. ಇಂದು ಈ ಪ್ರಶಸ್ತಿಯನ್ನು ದಿವಂಗತ ನಟ ವಿಷ್ಣುವರ್ಧನ್ ಹಾಗೂ ನಟಿ ಬಿ.ಸರೋಜಾ ದೇವಿಗೆ ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ.
ಹೀಗಿದೆ ಈವರೆಗೆ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾದ ಗಣ್ಯರ ಪಟ್ಟಿ
- ರಾಷ್ಟ್ರಕವಿ ಕುವೆಂಪು, ಸಾಹಿತ್ಯ ಕ್ಷೇತ್ರ, 1992
- ಡಾ.ರಾಜ್ ಕುಮಾರ್, ಚಲನಚಿತ್ರ ಕ್ಷೇತ್ರ, 1992
- ಎಸ್ ನಿಜಲಿಂಗಪ್ಪ, ರಾಜಕೀಯ ಕ್ಷೇತ್ರ, 1999
- ಪ್ರೊ.ಸಿಎನ್ ಆರ್ ರಾವ್, ವಿಜ್ಞಾನ ಕ್ಷೇತ್ರ, 2000
- ಪಂಡಿಂತ್ ಭೀಮಸೇನ್ ಜೋಶಿ, ಸಂಗೀತ ಕ್ಷೇತ್ರ, 2004
- ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿಗಳು, ಸಾಮಾಜಸೇವೆ ಕ್ಷೇತ್ರ, 2006
- ಡಾ.ದೇ.ಜವರೇಗೌಡ, ಸಾಹಿತ್ಯ ಕ್ಷೇತ್ರ, 2008
- ಡಾ.ಡಿ ವೀರೇಂದ್ರ ಹೆಗ್ಗಡೆ, ಸಮಾಜ ಸೇವೆ, 2009
- ಪುನೀತ್ ರಾಜಕುಮಾರ್, ಚಲನಚಿತ್ರ ಕ್ಷೇತ್ರ, 2021
- ಸಾಹಸ ಸಿಂಹ ಡಾ.ವಿಷ್ಣುವರ್ಧನ್, ಬಿ.ಸರೋಜಾ ದೇವಿ, ಚಲನಚಿತ್ರ ಕ್ಷೇತ್ರ, 2025
ಸಾಗರದ ‘ಕಲ್ಮನೆ ಗ್ರಾಮ ಪಂಚಾಯ್ತಿ’ ನರೇಗಾ ಹಗರಣ: ಇಂದು ಇಂಚಿಂಚೂ ತನಿಖೆ ನಡೆಸಿದ ‘ಅಧಿಕಾರಿ’ಗಳು