ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ದೇಶದಿಂದ ಪಲಾಯನ ಮಾಡಲು ಪ್ರಯಾಣಿಸಿದ ವಿಮಾನ ಸೋಮವಾರ ಮಧ್ಯಾಹ್ನ ಭಾರತಕ್ಕೆ ಆಗಮಿಸಿತು. ಇಂತಹ ಅವರ ವಿಮಾನವು ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಿದಂತ ವಿಮಾನ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.
ನೈಜ ಸಮಯದಲ್ಲಿ ವಾಯು ಸಂಚಾರವನ್ನು ಪ್ರದರ್ಶಿಸುವ ಫ್ಲೈಟ್ರಡಾರ್ 24 ವೆಬ್ಸೈಟ್ ಪ್ರಕಾರ, AJAX1431 ಬಾಂಗ್ಲಾದೇಶ ವಾಯುಪಡೆಯ ವಿಮಾನವನ್ನು 29,000 ಕ್ಕೂ ಹೆಚ್ಚು ಜನರು ಟ್ರ್ಯಾಕ್ ಮಾಡುತ್ತಿದ್ದಾರೆ. ಇದು ಈಗ ವಿಶ್ವದ ಅತಿ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನವಾಗಿದೆ. ಸಂಜೆ 4.15ರ ಸುಮಾರಿಗೆ ವಾರಣಾಸಿ ಬಳಿ ಇತ್ತು.
ವರದಿಗಳ ಪ್ರಕಾರ, ಬಾಂಗ್ಲಾದೇಶದ ಪ್ರಧಾನಿ ರಾಜೀನಾಮೆ ನೀಡಿ ಸೋಮವಾರ ದೇಶವನ್ನು ತೊರೆದಿದ್ದಾರೆ. ಇದನ್ನು ದೃಢಪಡಿಸಿದ ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್, ಅಧಿಕಾರವನ್ನು ವಹಿಸಿಕೊಳ್ಳಲು ಮಧ್ಯಂತರ ಸರ್ಕಾರವನ್ನು ರಚಿಸಲಾಗುವುದು ಎಂದು ಹೇಳಿದರು.
BREAKING: ಬಾಂಗ್ಲಾದೇಶದಿಂದ ಭಾರತಕ್ಕೆ ‘ಶೇಖ್ ಹಸೀನಾ’ ಆಗಮನ | Sheikh Hasina
ಬೆಂಗಳೂರಿನ ಹಲವೆಡೆ ಮಳೆ, ಸಂಚಾರ ವ್ಯತ್ಯಯ: ವಾಹನ ಸವಾರರು ಪರದಾಟ | Rain in Bengaluru
ಪುರುಷರೇ ಎಚ್ಚರ : `ಶಿಶ್ನ ಕ್ಯಾನ್ಸರ್’ ನ ಆರಂಭಿಕ ರೋಗಲಕ್ಷಣಗಳ ಬಗ್ಗೆ ತಿಳಿಯಿರಿ!