ಬೆಂಗಳೂರು: ಹಿರಿಯ ನಟ ಲೋಹಿತಾಶ್ವ ಅವರಿಗೆ ಹೃದಯಾಘಾತವಾದ ಬಳಿಕ, ನಗರದ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಬಗ್ಗೆ ಅವರ ಪುತ್ರ ಹಾಗೂ ನಟ ಶರತ್ ಲೋಹಿತಾಶ್ವ ಏನ್ ಹೇಳಿದರು ಅಂತ ಮುಂದೆ ಓದಿ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಂತ ಅವರು, 80 ವರ್ಷಗಳಾಗಿವೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಡಯಾಬಿಟಿಸ್, ಬಿಪಿ ಇತ್ತು. ಕೆಲ ದಿನಗಳ ಹಿಂದೆ ಯೂರಿನಲ್ ಇನ್ಫೆಕ್ಷನ್ ಕೂಡ ಆಗಿತ್ತು. ಅದರ ಬಗ್ಗೆ ಟ್ರೀಟ್ಮೆಂಟ್ ಕೊಡಿಸಲಾಗುತ್ತಿತ್ತು. ವಯಸ್ಸಾಗಿದ್ದರಿಂದ ಅವರಿಗೆ ಆಫರೇಷನ್ ಬೇಡ ಎಂಬುದಾಗಿ ವೈದ್ಯರು ಸೂಚಿಸಿದ್ದರು ಎಂದರು.

ನಿಮಗೆ ಬಂಜೆತನ, ಸೋರಿಯಾಸಿಸ್, ಥೈರಾಯಿಡ್ ಸೇರಿ ‘ದೀರ್ಘಕಾಲಿಕ ಸಮಸ್ಯೆ’ ಕಾಡುತ್ತಿದೆಯಾ.? ಇಲ್ಲಿದೆ ಪರಿಹಾರ | Homeopathy Treatment

ಇತ್ತೀಚಿಗೆ ವಾಂತಿ, ಜ್ವರ ಬಂದಿತ್ತು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಮೂರು ದಿನಗಳ ಕಾಲ ಚೆನ್ನಾಗಿಯೇ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಆದ್ರೇ ಸಂಜೆಯ ವೇಳೆಗೆ ಚಳಿಚಳಿ ಎಂದು ಹೇಳುತ್ತಿದ್ದರು. ಚಿಕಿತ್ಸೆ ಬಳಿಕ ಮತ್ತೆ ಸರಿಯಾಗುತ್ತಿದ್ದರು. ಚೆನ್ನಾಗಿ ಆಗುತ್ತಿದ್ದಾರೆ. ಇನ್ನೇನು ಕರೆದುಕೊಂಡು ಹೋಗಬಹುದು ಎಂಬುದಾಗಿ ವೈದ್ಯರು ಹೇಳುತ್ತಿದ್ದರು ಎಂದರು.

ಮೂರನೇ ದಿನದ ಚಿಕಿತ್ಸೆಯ ಬಳಿಕ ತಿಂಡಿ ಮಾಡಿದ ಬಳಿಕ, ನನ್ನ ಕಣ್ಣೆದುರಿಗೆ ಹೃದಯಾಘಾತ ಉಂಟಾಯಿತು. ಕೂಡಲೇ ಅವರಿಗೆ ವೈದ್ಯರು ಸಿಪಿಆರ್ ಚಿಕಿತ್ಸೆ ನೀಡಿದ್ರು. ಅವರ ಸ್ಥಿತಿ ಸದ್ಯಕ್ಕೆ ಗಂಭೀರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿದರು.

Share.
Exit mobile version