ಕೆಎನ್ಎನ್ ಡಿಜಿಟಲ್ ಡೆಸ್ಕ್: ಆಧುನಿಕ ಬದಲಾದ ಜೀವನ ಶೈಲಿಯಲ್ಲಿ, ಅನೇಕರಿಗೆ ಅಲರ್ಜಿ ಸೇರಿದಂತೆ ಹಲವು ರೋಗಗಳು ಸದಾ ಕಾಡುತ್ತಿರುತ್ತವೆ. ಕೆಲವೊಮ್ಮೆ ಇಂಗ್ಲಿಷ್ ಮೆಡಿಸಿನ್ ನಿಂದ ವಾಸಿಯಾದ್ರೇ, ಮತ್ತೆ ಕೆಲವೊಮ್ಮೆ ವಾಸಿಯಾಗೋದಿಲ್ಲ. ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಸೇರಿದಂತೆ ವಿವಿಧ ರೋಗಗಳನ್ನು ಕಡಿಮೆ ವೆಚ್ಚದಲ್ಲಿ ನಿಮಗೆ ಚಿಕಿತ್ಸೆಯನ್ನು ನಂದಿ ಹೋಮಿಯೋಪತಿಯಲ್ಲಿ ( Nandi Homeopathy ) ನೀಡಲಾಗುತ್ತಿದೆ. ಆ ಬಗ್ಗೆ ಮುಂದೆ ಓದಿ.

ಇದು ಆಧುನಿಕ ಜೀವನ ಶೈಲಿಯ ಎಫೆಕ್ಟ್

ಪರಿಸರ ಮಾಲಿನ್ಯ ಹಾಗೂ ಆಧುನಿಕ ಜೀವನಶೈಲಿ ಪದ್ದತಿಯಿಂದ ಜನಸಾಮಾನ್ಯರ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದು ಹಲವು ಬಗೆಯ ಕಾಯಿಲೆಗಳಿಗೆ ದೂಡುತ್ತದೆ.

ಸೀನು, ನೆಗಡಿ, ಕೆಮ್ಮು, ಕಣ್ಣು ಉರಿ, ಗಂಟಲು ಕೆರೆತ, ಉಬ್ಬಸ ಸೇರಿದಂತೆ ವಿವಿಧ ಬಗೆಯ ಉಸಿರಾಟದ ತೊಂದರೆಗಳು ಜನರನ್ನು ಬಾಧಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅಷ್ಟೆ ಅಲ್ಲ ಅಸ್ತಮಾ, ಸೈನೋಸೈಟಸ್ ಸೇರಿದಂತೆ ಹೊಸಹೊಸ ಬಗೆಯ ಶ್ವಾಸಕೋಶ ಸಂಬಂಧಿ ಸೋಂಕುಗಳು ಕಂಡುಬರುತ್ತಿರುವುದು ಆತಂಕವನ್ನು ಉಂಟುಮಾಡುತ್ತಿವೆ.

ಅಲರ್ಜಿಗೆ ಹೋಮಿಯೋಪತಿ ವೈದ್ಯಪದ್ದತಿಯಿಂದ ಶಾಶ್ವತ ಪರಿಹಾರ

ಕೂದಲು ಉದುರುವಿಕೆ ( Hair Falling ), ಡ್ಯಾಂಡ್ರಫ್ ಮತ್ತು ಚರ್ಮದ ತುರಿಕೆ ಸೇರಿದಂತೆ ಹಲವು ರೀತಿಯ ಅಲರ್ಜಿಗಳು ಜನಸಾಮಾನ್ಯರನ್ನು ಕಾಡುತ್ತಿವೆ. ಜಲ ಮತ್ತು ವಾಯುಮಾಲಿನ್ಯ, ವಾಹನಗಳ ಹೊಗೆ, ಕಟ್ಟಡನಿರ್ಮಾಣ ಧೂಳು, ತಂಬಾಕು ಉತ್ಪನ್ನಗಳ ಸೇವನೆ, ನಾಯಿ, ಬೆಕ್ಕು ಸೇರಿದಂತೆ ಸಾಕು ಪ್ರಾಣಿಗಳು ಮತ್ತು ಹಲ್ಲಿ, ಜಿರಳೆ, ಸೊಳ್ಳೆ ಸೇರಿದಂತೆ ವಿವಿಧ ರೀತಿಯ ಕ್ರಿಮಿಕೀಟಗಳು ಹಲವು ಬಗೆಯ ಹೂಗಿಡ –ಮರಗಳು ಹಲವಾರು ರೀತಿಯ ಅಲರ್ಜಿಗಳಿಗೆ ಕಾರಣವಾಗಿವೆ.

ಈಗಾಗಿ ಈ ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಜನಸಾಮಾನ್ಯರು ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸಿ ಆರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಂಡು ಶಾಶ್ವತವಾಗಿ ಗುಣಮುಖರಾಗುವುದು ಉತ್ತಮ.

ಎಲ್ಲಾ ರೀತಿಯ ಅಲರ್ಜಿಗಳಿಗೆ ( Allergy ) ಹೋಮಿಯೋಪತಿ ವೈದ್ಯಪದ್ದತಿಯಲ್ಲಿ ಶಾಶ್ವತ ಪರಿಹಾರವಿದ್ದು ಮಾನವನ ದೇಹದ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಎಂದು ತಜ್ಙ ವೈದ್ಯರು ಹೇಳುತ್ತಾರೆ.

ಅಷ್ಟೆ ಅಲ್ಲ ಕೋವಿಡ್ ಅನಂತರದ ಆರೋಗ್ಯ ಸಮಸ್ಯೆಗಳು, ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆ, ಥೈರಾಯಿಡ್ ( Thyroid Problem ), ಅನಿಯಮಿತ ಋತುಚಕ್ರ, ಸ್ತ್ರಿರೋಗಗಳು, ಡಯಟ್ಸೇರಿದಂತೆ ಮಹಿಳೆ ಹಾಗೂ ಪುರುಷರ ಧೀರ್ಘಕಾಲದ ಆರೋಗ್ಯಸಮಸ್ಯೆಗಳಿಗೆ ಹೋಮಿಯೋಪತಿ ಚಿಕಿತ್ಸೆಯಲ್ಲಿ ಶಾಶ್ವತ ಪರಿಹಾರವಿದ್ದು ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಗಿಗಳು ಚಿಕಿತ್ಸೆ ಪಡೆಯಬಹುದು ಎಂದು ಬೆಂಗಳೂರಿನ ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿರುವ ನಂದಿ ಹೋಮಿಯೋಪತಿ ತಜ್ಞ ವೈದ್ಯೆ ಡಾ.ಸಂಜೀವಿನಿ ಹೂಗಾರ್ ಹೇಳುತ್ತಾರೆ.

ಬಂಜೆತನ ನಿವಾರಣೆಗೆ ಚಿಕಿತ್ಸೆ

ರಕ್ತದೊತ್ತಡ, ಮಧುಮೇಹ, ಮಲಬದ್ದತೆ ಸಂಬಂಧಿ ಕಾಯಿಲೆ ಐಬಿಎಸ್, ಟಾನ್ಸಿಲಿಟೀಸ್ಹಾಗೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಪಿಸಿಒಡಿಗೆ ( PCOD ) ಸಹ ಹಲವಾರು ಮಂದಿ ಚಿಕಿತ್ಸೆ ಪಡೆದಿದ್ದು ಗುಣಮುಖರಾಗಿದ್ದಾರೆ.

ಭವಿಷ್ಯದಲ್ಲಿ ಯಾವುದೆ ರೀತಿಯ ಸಾಮಾನ್ಯ ರೋಗಗಳು ಜನಸಾಮಾನ್ಯರನ್ನು ಬಾಧಿಸದಂತೆ ಪ್ರತಿರೋಧ ಶಕ್ತಿ ಹೆಚ್ಚಿಸಲೂ ಸಹ ಹೋಮಿಯೋಪತಿಯಲ್ಲಿ ಗಿಡಮೂಲಿಕೆಗಳಿಂದ ತಯಾರಿಸಿರುವ ಔಷಧಗಳಿವೆ ಎಂದು ಹೇಳಿದ್ದಾರೆ.

ಕಳೆದ 15 ವರ್ಷಗಳಿಂದ ಸಾವಿರಾರು ಮಂದಿ ಹಲವಾರು ಕಾಯಿಲೆಗಳಿಗೆ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿದ್ದು ಆರೋಗ್ಯಕರ ಜೀವನ ನಡೆಸುತ್ತಿದ್ದಾರೆಂದು ವೈದ್ಯೆ ಸಂಜೀವಿನಿ ಹರ್ಷ ವ್ಯಕ್ತ ಪಡಿಸುತ್ತಾರೆ.

ನಂದಿ ಹೋಮಿಯೋಪತಿಯಲ್ಲಿ ( Nandi Homeopathy ) ಅತಿದೊಡ್ಡ ನಂದಿ ಹೋಮಿಯೋಪತಿ ಔಷಧಾಲಯವಿದ್ದು ಒಂದೇ ಸೂರಿನಡಿ ರೋಗಿಗಳಿಗೆ ಅಗತ್ಯವಿರುವ ಎಲ್ಲಾ ಔಷದಿಗಳು ರಿಯಾಯಿತಿ ದರದಲ್ಲಿ ಹಾಗೂ ತಯಾರಿಕ ವೆಚ್ಚದಲ್ಲಿ ದೊರೆಯುವ ಸೌಲಭ್ಯವು ಸಹ ಇದೆ.

ಮೂತ್ರ ಪಿಂಡದಲ್ಲಿನ ಕಲ್ಲಿಗೂ ಚಿಕಿತ್ಸೆ ಲಭ್ಯ

ನಗರದ ಉದ್ಯೋಗಸ್ಥರು ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದ ದೇಹಕ್ಕೆ ಅಗತ್ಯವಿರುವ ಪ್ರಮಾಣಕ್ಕಿಂತ ಕಡಿಮೆ ನೀರನ್ನು ಕುಡಿಯುತ್ತಿದ್ದು ಮೂತ್ರಪಿಂಡದಲ್ಲಿ ಕಲ್ಲುಸೃಷ್ಟಿಯಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಹೋಮಿಯೋಪತಿ ಚಿಕಿತ್ಸೆಯಲ್ಲಿ ಅತ್ಯಂತ ಸರಳ ವಿಧಾನದಲ್ಲಿ ಮೂತ್ರಪಿಂಡದಲ್ಲಿರುವ ಕಲ್ಲನ್ನು ಕರಗಿಸಲಾಗುವುದು ಎಂದು ಡಾ.ಶ್ರೀಕಾಂತ್ ಹೂಗಾರ್ ಹೇಳುತ್ತಾರೆ.

ಮೂತ್ರ ಪಿಂಡದಲ್ಲಿನ ಕ್ರಿಯೆಟಿನ್ ಸಮತೋಲನ ಹಾಗೂ ಮೂತ್ರ ನಾಳ ಸೋಂಕಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಯಶಸ್ವಿ ಚಿಕಿತ್ಸೆ ನೀಡಿರುವುದಾಗಿ ಡಾ.ಶ್ರೀಕಾಂತ್ ಹೇಳುತ್ತಾರೆ.

ಇನ್ನೂ ಬೆಂಗಳೂರಿನ ಬಿಟಿಎಂ ಎರಡನೇ ಹಂತದ ಮೈಕೋಲೇಔಟ್  ಬಡಾವಣೆಯಲ್ಲಿರುವ ನಂದಿ ಹೋಮಿಯೋಪತಿ ಕೇಂದ್ರದಲ್ಲಿ ( Homeopathy Center ) ತಜ್ಞೆ ವೈದ್ಯೆ ಡಾ.ಸರಿತಾ ಹಲವಾರು ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದಾರೆ.

ಮಕ್ಕಳ ನೆಗಡಿ, ಶೀತ, ಕೆಮ್ಮಿಗೆ ಶಾಶ್ವತ ಪರಿಹಾರ

ಸಾಮಾನ್ಯವಾಗಿ ಮಳೆಗಾಲದಲ್ಲಿ ವೈರಸ್ ಸೋಂಕಿನಿಂದ ಶಾಲಾಮಕ್ಕಳು, ಪೋಷಕರು, ಉದ್ಯೋಗಸ್ಥರು ಹಾಗೂ ಜನ ಸಾಮಾನ್ಯರು ನೆಗಡಿ, ಶೀತ, ಕೆಮ್ಮು, ಜ್ವರ, ತಲೆನೋವು, ಮೈಕೈನೋವು ಸೇರಿದಂತೆ ಹಲವು ಹತ್ತು ಬಗೆಯ ವೈರಾಣು ಕಾಯಿಲೆಗಳಿಂದ ತೊಂದರೆಗೀಡಾಗುತ್ತಾರೆ. ತಕ್ಷಣ ಚಿಕಿತ್ಸೆ ಪಡೆಯುವ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗು ತ್ವರಿತವಾಗಿ ವೈರಾಣು ಸೋಂಕಿನಿಂದ ಗುಣಮುಖರಾಗಬಹುದು ಎಂದು ಡಾ.ಸರಿತಾ ಸಲಹೆ ನೀಡಿದ್ದಾರೆ.

ಇನ್ನೂ ಮಹಿಳೆಯರಲ್ಲಿ ಕಂಡು ಬರುವ ಹಾರ್ಮೋನ್ ಗಳ ವ್ಯತ್ಯಾಸವನ್ನು ಮೂರರಿಂದ ಆರು ತಿಂಗಳೊಳಗೆ ಸರಿದಾರಿಗೆ ತರುವುದಾಗಿ ಹಾಗು ಶಾಶ್ವತವಾಗಿ ಪರಿಹಾರ ದೊರಕಿಸಿಕೊಡುವುದಾಗಿ ಹೇಳುತ್ತಾರೆ.

ಸೊರಿಯಾಸಿಸ್ ಗೂ ಚಿಕಿತ್ಸೆ ಲಭ್ಯ

ಹೋಮಿ ಯೋಪತಿ ಔಷಧಗಳನ್ನು ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತಿದ್ದು ರೋಗಿಗಳಿಗೆ ಅತ್ಯಂತ ಸುರಕ್ಷಿತ ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದ ಅತಿ ಉತ್ತಮವಾದ ಚಿಕಿತ್ಸೆಯನ್ನು ನಂದಿ ಹೋಮಿಯೋಪತಿನಲ್ಲಿ ನೀಡಲಾಗುತ್ತಿದೆ ಎಂದು ವಿಶ್ವಾಸದಿಂದ ಹೇಳುತ್ತಾರೆ. ಸೊರಿಯಾಸಿಸ್ ಸಮಸ್ಯೆಗೂ ಸಹಹೋಮಿಯೋಪತಿಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವುದಾಗಿ ಸರಿತಾ ಹೇಳಿದ್ದಾರೆ .

ಪ್ರಚಲಿತ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಹುತೇಕ ಸೌಂದರ್ಯ ವರ್ಧಕಗಳಿಗೆ ಸಮನಾದ ಸೌಂದರ್ಯ ವರ್ಧಕಗಳು ಹೋಮಿಯೋಪತಿ ಕೇಂದ್ರದಲ್ಲಿ ಲಭ್ಯವಿದ್ದು ಜನಸಾಮಾನ್ಯರು ಬಳಸಬಹುದಾಗಿದೆ ಎಂದಿದ್ದಾರೆ.

ಅನುವಂಶಿಕ ಕಾಯಿಲೆಗಳ ಅಧ್ಯಯನ ಮಾಡಿ ಚಿಕಿತ್ಸೆ

ರೋಗಿಗಳ ಹಿಂದಿನ ವೈದ್ಯಕೀಯ ವರದಿಗಳು ಹಾಗೂ ಅನುವಂಶಿಕ ಕಾಯಿಲೆಗಳ ಸಂಪೂರ್ಣ ವಿವರಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲಾಗುವುದು. ರೋಗಲಕ್ಷಣ ಮತ್ತು ರೋಗಿಯ ಮಾನಸಿಕ ಹಾಗು ದೈಹಿಕಸ್ಥಿತಿ ಅಧ್ಯಯನ ಮಾಡಿ ಔಷದಿಗಳ ಕಾಂಪೋಸಿಶನ್ ಸಿದ್ದಪಡಿಸಿ ಯಾವುದೇ ರೀತಿಯ ಅಡ್ಡಪರಿಣಾಮಗಳಾಗದಂತ ಹಚಿಕಿತ್ಸೆ ನೀಡುವಲ್ಲಿ ನಂದಿ ಹೋಮಿಯೋಪತಿ ಹೆಸರುವಾಸಿಯಾಗಿದೆ.

ಇದೇ ನಂದಿ ಹೋಮಿಯೋಪತಿಗೆ ( Nandi Homeopathy ) ಭೇಟಿ ನೀಡಿ

ನಂದಿ ಹೋಮಿಯೋಪತಿ, ನಂ.89/1, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು-04, ಪೋನ್: 080-26603328, 9886920678.

ನಂದಿ ಹೋಮಿಯೋಪತಿ, ನಂ.381, 7ನೇ ಕ್ರಾಸ್, 2ನೇ ಹಂತ, ಬಿಟಿಎಂ ಲೇಔಟ್, ಬೆಂಗಳೂರು-76, ಪೋನ್: 080-42161666, 9886920789

ನೇರವಾಗಿ ವೈದ್ಯರಿಂದ ಚಿಕಿತ್ಸೆಯ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ ಶಿವಾನಂದ ಹೂಗಾರ್, ನಂದಿ ಹೋಮಿಯೋಪತಿ, ಗಾಂಧಿ ಬಜಾರ್, ಬಿಟಿಎಂ ಲೇಔಟ್, ಮೊಬೈಲ್: 9886920723, 9886920889. ಇದಲ್ಲದೇ www.nandihomeopathy.com ಈ ಜಾಲತಾಣಕ್ಕೂ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

Share.
Exit mobile version