Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಐಟಿ ದೈತ್ಯ ‘ಕಾಗ್ನಿಜೆಂಟ್’ ನಲ್ಲಿ 25,000 ಹುದ್ದೆಗಳ ನೇಮಕಾತಿ.!

05/02/2026 12:03 PM

ಅಮ್ಮ ಬೈದರೆಂದು ಮನೆಬಿಟ್ಟ ಅಕ್ಕ-ತಮ್ಮ: ಆಧಾರ್ ಕಾರ್ಡ್ ಹಿಡಿದು ಫ್ರೀ ಬಸ್‌ನಲ್ಲಿ ಊರೂರು ಸುತ್ತಿದ ಬಾಲಕಿ!

05/02/2026 11:59 AM

BIG NEWS : ಮಹಿಳೆ ಕಿಡ್ನಾಪ್ ಕೇಸ್ : HD ರೇವಣ್ಣ ವಿರುದ್ಧ ದೋಷಾರೋಪ ಹೊರಿಸದಂತೆ ನೀಡಿದ್ದ ಮಧ್ಯಂತರ ತಡೆ ತೆರವು

05/02/2026 11:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರದಿಂದ ‘ಬಸ್ ಖರೀದಿ’ ಅಲ್ಲ, ಖಾಸಗಿ ಸಂಸ್ಥೆಗಳ ಮೂಲಕ ‘ಬಸ್ ಬಾಡಿಗೆಗೆ’: ಕರ್ನಾಟಕ ಕಾಂಗ್ರೆಸ್ ಸ್ಪಷ್ಟನೆ
KARNATAKA

ಕೇಂದ್ರದಿಂದ ‘ಬಸ್ ಖರೀದಿ’ ಅಲ್ಲ, ಖಾಸಗಿ ಸಂಸ್ಥೆಗಳ ಮೂಲಕ ‘ಬಸ್ ಬಾಡಿಗೆಗೆ’: ಕರ್ನಾಟಕ ಕಾಂಗ್ರೆಸ್ ಸ್ಪಷ್ಟನೆ

By kannadanewsnow0909/09/2025 2:56 PM

ಬೆಂಗಳೂರು: ಕೇಂದ್ರದಿಂದ ಬಿಗ್ ಗಿಫ್ಟ್, ರಾಜ್ಯಕ್ಕೆ ಶೀಘ್ರ 5250 ಹೊಸ ಎಲೆಕ್ಟ್ರಿಕ್ ಬಸ್ ಎಂಬುದು ಸುಳ್ಳು. ಕೇಂದ್ರ ಸರ್ಕಾರ ಬಸ್ ಖರೀದಿ ಮಾಡಿ ಸಾರಿಗೆ ಸಂಸ್ಥೆಗಳಿಗೆ ನೀಡಿದೆ ಎಂದು ತಪ್ಪಾಗಿ ಅರ್ಥೈಸಿ ಬೊಬ್ಬೆ ಹೊಡೆಯುವುದನ್ನು ಬಿಟ್ಟು ಬಾಡಿಗೆ, ಲೀಸ್ ಮತ್ತು ಖರೀದಿಯ ವ್ಯತ್ಯಾಸವನ್ನಾದರೂ ತಿಳಿಯಬೇಡವೇ. ಕೇಂದ್ರ ಸರ್ಕಾರದಿಂದ ಬಸ್ ಖರೀದಿ ಅಲ್ಲ, ಖಾಸಗಿ ಸಂಸ್ಥೆಗಳ ಮೂಲಕ ಬಸ್ ಬಾಡಿಗೆಗೆ ವ್ಯವಸ್ಥೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ತಿರುಗೇಟು ನೀಡಿದೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ಪಕ್ಷವು ‘ಬಿಜೆಪಿ ಕರ್ನಾಟಕ ಎಲೆಕ್ಟ್ರಿಕ್ ಬಸ್ಸುಗಳನ್ನು ಖಾಸಗಿಯವರಿಂದ ಬಾಡಿಗೆಗೆ ಪಡೆದು ಸಾರಿಗೆ ಸಂಸ್ಥೆಗಳಿಗೆ ನೀಡಿರುವುದನ್ನು ಕೇಂದ್ರ ಸರ್ಕಾರ ಬಸ್ ಖರೀದಿ ಮಾಡಿ ಸಾರಿಗೆ ಸಂಸ್ಥೆಗಳಿಗೆ ನೀಡಿದೆ ಎಂದು ತಪ್ಪಾಗಿ ಅರ್ಥೈಸಿ ಬೊಬ್ಬೆ ಹೊಡೆಯುವುದನ್ನು ಬಿಟ್ಟು ಬಾಡಿಗೆ/ಲೀಸ್ ಮತ್ತು ಖರೀದಿಯ ವ್ಯತ್ಯಾಸವನ್ನಾದರೂ ತಿಳಿಯಬೇಡವೇ? ಒಂದಷ್ಟಾದರೂ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಿ, ನಿಮ್ಮ ಮಾಹಿತಿಗಾಗಿ ಓದಿಕೊಳ್ಳಿ ಎಂದಿದೆ.

PM e-Drive / PM e-Seva ಯೋಜನೆಗಳಡಿಯಲ್ಲಿ ಸಾರಿಗೆ ಸಂಸ್ಥೆಗಳಿಗೆ 5250 ಎಲೆಕ್ಟ್ರಿಕ್ ಬಸ್ಸುಗಳನ್ನು‌ ಕೇಂದ್ರ ಸರ್ಕಾರ ಖರೀದಿಸಿ ನೀಡಿದೆ ಎಂಬ ಭ್ರಮೆಯಲ್ಲಿ‌ ತಪ್ಪು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ನೀವು ಹಂಚಿಕೊಂಡು ಸಂಭ್ರಮಿಸಿದ ವಾಸ್ತವ ಸತ್ಯ ಏನೆಂದರೆ..

ನಿಮ್ಮ ಕೇಂದ್ರ‌ ಸರ್ಕಾರ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು ಖಾಸಗಿ ಕಂಪನಿಗಳಿಗೆ ಅಂದರೆ ಒಲೆಕ್ಟ್ರಾ, ಜೆ.ಬಿ.ಎಂ, ಟಾಟಾ, ಸ್ವಿಪ್ಟ್ ಮೊಬಿಲಿಟಿ ಅವರಿಗೆ ಅನುದಾನ ನೀಡಿ, ಖಾಸಗಿಯವರು ಸಾರಿಗೆ ಸಂಸ್ಥೆಗಳಿಗೆ ಆ ಬಸ್ಸುಗಳನ್ನು ಬಾಡಿಗೆಗೆ/ಲೀಸ್ ಆಧಾರದಲ್ಲಿ ಇಂತಿಷ್ಟು ವರ್ಷಗಳಿಗೆ ಎಂದು ನೀಡುತ್ತಿದ್ದಾರೆ ಎಂಬುದು ತಮಗೆ ತಿಳಿದಿದೆಯೇ?ಕೇಂದ್ರ ಸರ್ಕಾರವು ಅನುದಾನವನ್ನು ಖಾಸಗಿಯವರಿಗೆ ನೀಡಿ, ಸಾರಿಗೆ ಸಂಸ್ಥೆಗಳಿಗೆ ಶೂನ್ಯ ಅನುದಾನ ನೀಡುತ್ತಿರುವ ಬಗ್ಗೆ ಅರಿವಿದೆಯೇ ?

ಕೇಂದ್ರ ಸರ್ಕಾರವು ಅನುದಾನವನ್ನು ಖಾಸಗಿಯವರಿಗೆ ನೀಡಿ, ಸಾರಿಗೆ ಸಂಸ್ಥೆಗಳಿಗೆ ಶೂನ್ಯ ಅನುದಾನ ನೀಡುತ್ತಿರುವ ಬಗ್ಗೆ ಅರಿವಿದೆಯೇ ?

ಎಲೆಕ್ಟ್ರಿಕ್ ಬಸ್ಸುಗಳ ಚಾಲಕರು ಖಾಸಗಿಯವರು, ಬಸ್ಸುಗಳ ನಿರ್ವಹಣೆ ಖಾಸಗಿಯವರದ್ದು, ಸಾರಿಗೆ ಸಂಸ್ಥೆಗಳವರದ್ದಲ್ಲ ಎಂಬುದರ ಬಗ್ಗೆ ಏನಾದರೂ ಮಾಹಿತಿಯಿದೆಯೇ?

ಎಲೆಕ್ಟ್ರಿಕ್ ಬಸ್ ಘಟಕ‌ ಮತ್ತು ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಯಾವುದೇ ಆರ್ಥಿಕ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂಬುದು ನಿಮಗೆ ಗೊತ್ತೇ?

ರಾಜ್ಯದಲ್ಲಿರುವ ಕೌಶಲ್ಯಪೂರ್ಣ ಮಾನವಶಕ್ತಿಯನ್ನು ಬಳಸಿಕೊಳ್ಳಲು, ಸಂಪನ್ಮೂಲಗಳನ್ನು ಅತ್ಯುತ್ತಮವಾಗಿಸಲು, ಸಾರಿಗೆ ಸಂಸ್ಥೆಗಳನ್ನು ಬಲಗೊಳಿಸಲು ಕೇಂದ್ರ ಸರ್ಕಾರ ಯೋಜನೆ‌ ರೂಪಿಸದೆ ಖಾಸಗೀಕರಣದೆಡೆಗೆ ಮುಖ ಮಾಡಿದೆ ಇದನ್ನು ನೀವು ಒಪ್ಪುತ್ತೀರಾ?

ದೇಶದ್ಯಾದಂತ ಎಲ್ಲ ನಗರಗಳಿಗೆ ಸೇರಿ PM e- Drive ನಲ್ಲಿ 10900 ಎಲೆಕ್ಟ್ರಿಕ್ ಬಸ್ಸುಗಳನ್ನು ಘೋಷಣೆ‌ ಮಾಡಲಾಗಿದೆ. ಅದರಲ್ಲಿ ನಮ್ಮ ರಾಜ್ಯಕ್ಕೆ 4500 ಬಸ್ಸುಗಳನ್ನು ನೀಡಿರುವುದು (PM e -Seva ಹೊರತುಪಡಿಸಿ) ನಮ್ಮ ರಾಜ್ಯದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಆಸಕ್ತಿ ಮತ್ತು ನಿರಂತರ ಪ್ರಯತ್ನದ ಫಲ ಎಂಬ ಅರಿವಿದೆಯೇ?

ಇದರೊಂದಿಗೆ ಪ್ರಮುಖ‌‌ ಮಾಹಿತಿ‌ ಗಮನದಲ್ಲಿಟ್ಟುಕೊಳ್ಳಿ. ದೇಶದ ಬೇರೆ ಯಾವುದೇ ರಾಜ್ಯಗಳು ಎಲೆಕ್ಟ್ರಿಕ್ ಬಸ್ಸುಗಳ‌ ಕಾರ್ಯಾಚರಣೆ‌ ಬಗ್ಗೆ ಆಸಕ್ತಿ ತೋರದಿರುವುದರಿಂದ ಕರ್ನಾಟಕ‌ ರಾಜ್ಯಕ್ಕೆ ಹೆಚ್ಚಿನ‌‌ ಎಲೆಕ್ಟ್ರಿಕ್ ಬಸ್ಸುಗಳ ಘೋಷಣೆಯಾಗಿದೆ.

UPA ಸರ್ಕಾರದ ಹತ್ತು ವರ್ಷಗಳ ಆಡಳಿತದಲ್ಲಿ (2004-2014) ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ಸಾರಿಗೆ ಸಂಸ್ಥೆಗಳನ್ನು ಸದೃಢಗೊಳಿಸಲು ತೆಗೆದುಕೊಂಡ‌ ಕ್ರಮಗಳ ಬಗ್ಗೆ ಕೆಲವೊಂದು ವಿಷಯಗಳನ್ನು ನೆನಪಿಸುವುದು ಸಮಂಜಸ ಎನಿಸುತ್ತದೆ.

ಬೆಂಗಳೂರು ನಗರದಾದ್ಯಂತ 10 ಮತ್ತು ಮೈಸೂರು ನಗರದಲ್ಲಿ 7 ಟಿ.ಟಿ.ಎಂ.ಸಿ ಗಳನ್ನು ನಿರ್ಮಿಸಲು ಅನುದಾನವನ್ನು ನೀಡಿದ್ದರು. ಇಂದು ಅವುಗಳ ಮೌಲ್ಯ ರೂ. 10,000 ಸಾವಿರ ಕೋಟಿ ದಾಟುತ್ತದೆ.

ದೇಶದ್ಯಾಂತ ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ನಗರ ಸಾರಿಗೆ ಬಸ್ಸುಗಳ‌ ಕಾರ್ಯಾಚರಣೆ ಪ್ರಾರಂಭಗೊಂಡಿದ್ದೇ ಮನಮೋಹನ ಸಿಂಗ್ ರವರ ಸರ್ಕಾರದ ಅವಧಿಯಲ್ಲಿ ಎಂಬುದು ನೆನಪಿದೆಯೇ?

ಅಂದು ಕೆಎಸ್ ಆರ್ ಟಿ ಸಿ, ಬಿ.ಎಂ.ಟಿ.ಸಿ, ವಾಯವ್ಯ ಸಾರಿಗೆ ಹಾಗೂ ಕಲ್ಯಾಣ‌ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ‌ ಒಟ್ಟು 2685 ನಗರ ಸಾರಿಗೆ ಬಸ್ಸುಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಶೇ.80ರ ವರೆಗೆ ಅನುದಾನ ನೀಡಿತ್ತು.

ಇದರ ಫಲವಾಗಿ ಇಂದು ರಾಜ್ಯದ 31 ಜಿಲ್ಲೆಗಳಲ್ಲೂ ಉದಾಹರಣೆಗೆ ಕಲಬುರಗಿ, ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ಹಾಸನ,ಬೆಳಗಾವಿ, ತುಮಕೂರು, ದಾವಣಗೆರೆ, ಶಿವಮೊಗ್ಗ ‌ಹಾಗೂ ಇತರೆ ಪಟ್ಟಣಗಳಲ್ಲಿ ನೂರಾರು ಸಂಖ್ಯೆಯಲ್ಲಿ ನಗರ ಸಾರಿಗೆ ಬಸ್ಸುಗಳನ್ನು ನೋಡಬಹುದಾಗಿದೆ.

ಯಾವುದೇ ಮಾಹಿತಿಯನ್ನು ನಿಖರವಾಗಿ ತಿಳಿದುಕೊಳ್ಳದೇ, ವೃಥಾ ಪ್ರಚಾರ ಪಡೆಯುವ ಮನಸ್ಥಿತಿಯಿಂದ, ಅಪಪ್ರಚಾರದಲ್ಲಿ ತೊಡಗಿರುವ ನಿಮ್ಮ ದುರ್ಬುದ್ದಿಗೆ ಆದಷ್ಟು ಬೇಗ ಸರಿಯಾದ ಔಷಧ ಹುಡುಕಿಕೊಳ್ಳಿ!

'@BJP4Karnataka ಎಲೆಕ್ಟ್ರಿಕ್ ಬಸ್ಸುಗಳನ್ನು ಖಾಸಗಿಯವರಿಂದ ಬಾಡಿಗೆಗೆ ಪಡೆದು ಸಾರಿಗೆ ಸಂಸ್ಥೆಗಳಿಗೆ ನೀಡಿರುವುದನ್ನು ಕೇಂದ್ರ ಸರ್ಕಾರ ಬಸ್ ಖರೀದಿ ಮಾಡಿ ಸಾರಿಗೆ ಸಂಸ್ಥೆಗಳಿಗೆ ನೀಡಿದೆ ಎಂದು ತಪ್ಪಾಗಿ ಅರ್ಥೈಸಿ ಬೊಬ್ಬೆ ಹೊಡೆಯುವುದನ್ನು ಬಿಟ್ಟು ಬಾಡಿಗೆ/ಲೀಸ್ ಮತ್ತು ಖರೀದಿಯ ವ್ಯತ್ಯಾಸವನ್ನಾದರೂ ತಿಳಿಯಬೇಡವೇ?
ಒಂದಷ್ಟಾದರೂ ಸಾಮಾನ್ಯ… pic.twitter.com/UMwqPGA1FJ

— Karnataka Congress (@INCKarnataka) September 8, 2025

Share. Facebook Twitter LinkedIn WhatsApp Email

Related Posts

ಅಮ್ಮ ಬೈದರೆಂದು ಮನೆಬಿಟ್ಟ ಅಕ್ಕ-ತಮ್ಮ: ಆಧಾರ್ ಕಾರ್ಡ್ ಹಿಡಿದು ಫ್ರೀ ಬಸ್‌ನಲ್ಲಿ ಊರೂರು ಸುತ್ತಿದ ಬಾಲಕಿ!

05/02/2026 11:59 AM2 Mins Read

BIG NEWS : ಮಹಿಳೆ ಕಿಡ್ನಾಪ್ ಕೇಸ್ : HD ರೇವಣ್ಣ ವಿರುದ್ಧ ದೋಷಾರೋಪ ಹೊರಿಸದಂತೆ ನೀಡಿದ್ದ ಮಧ್ಯಂತರ ತಡೆ ತೆರವು

05/02/2026 11:49 AM1 Min Read

BREAKING : `UGC NET-2025’ ಪರೀಕ್ಷೆಯ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ | UGC NET Result 2025

05/02/2026 11:47 AM2 Mins Read
Recent News

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಐಟಿ ದೈತ್ಯ ‘ಕಾಗ್ನಿಜೆಂಟ್’ ನಲ್ಲಿ 25,000 ಹುದ್ದೆಗಳ ನೇಮಕಾತಿ.!

05/02/2026 12:03 PM

ಅಮ್ಮ ಬೈದರೆಂದು ಮನೆಬಿಟ್ಟ ಅಕ್ಕ-ತಮ್ಮ: ಆಧಾರ್ ಕಾರ್ಡ್ ಹಿಡಿದು ಫ್ರೀ ಬಸ್‌ನಲ್ಲಿ ಊರೂರು ಸುತ್ತಿದ ಬಾಲಕಿ!

05/02/2026 11:59 AM

BIG NEWS : ಮಹಿಳೆ ಕಿಡ್ನಾಪ್ ಕೇಸ್ : HD ರೇವಣ್ಣ ವಿರುದ್ಧ ದೋಷಾರೋಪ ಹೊರಿಸದಂತೆ ನೀಡಿದ್ದ ಮಧ್ಯಂತರ ತಡೆ ತೆರವು

05/02/2026 11:49 AM

BREAKING : `UGC NET-2025’ ಪರೀಕ್ಷೆಯ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ | UGC NET Result 2025

05/02/2026 11:47 AM
State News
KARNATAKA

ಅಮ್ಮ ಬೈದರೆಂದು ಮನೆಬಿಟ್ಟ ಅಕ್ಕ-ತಮ್ಮ: ಆಧಾರ್ ಕಾರ್ಡ್ ಹಿಡಿದು ಫ್ರೀ ಬಸ್‌ನಲ್ಲಿ ಊರೂರು ಸುತ್ತಿದ ಬಾಲಕಿ!

By kannadanewsnow8905/02/2026 11:59 AM KARNATAKA 2 Mins Read

ಬೆಂಗಳೂರಿನಲ್ಲಿ 13 ವರ್ಷದ ಬಾಲಕಿಯೊಬ್ಬಳು ಟ್ಯೂಷನ್ ತರಗತಿಗಳನ್ನು ತಪ್ಪಿಸಿದ್ದಕ್ಕಾಗಿ ಪೋಷಕರು ಬೈದಿದ್ದರಿಂದ ತನ್ನ ಕಿರಿಯ ಸಹೋದರನೊಂದಿಗೆ ಮನೆಯಿಂದ ಹೊರಬಂದ ಘಟನೆ…

BIG NEWS : ಮಹಿಳೆ ಕಿಡ್ನಾಪ್ ಕೇಸ್ : HD ರೇವಣ್ಣ ವಿರುದ್ಧ ದೋಷಾರೋಪ ಹೊರಿಸದಂತೆ ನೀಡಿದ್ದ ಮಧ್ಯಂತರ ತಡೆ ತೆರವು

05/02/2026 11:49 AM

BREAKING : `UGC NET-2025’ ಪರೀಕ್ಷೆಯ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ | UGC NET Result 2025

05/02/2026 11:47 AM

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳ ಮೊಬೈಲ್ ನಲ್ಲಿ ಈ 5 `ಗೇಮ್’ಗಳಿದ್ರೆ ತಕ್ಷಣ ಡಿಲೀಟ್ ಮಾಡಿ.!

05/02/2026 11:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.