ಬೆಂಗಳೂರು: ನಗರದಲ್ಲಿ ಗಣೇಶ ಚತುರ್ಥಿ ಆಚರಿಸುವ ( Ganesh Festival ) ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತರಾದಂತ ತುಷಾರ್ ಗಿರಿನಾತ್ ಅವರು ಏನ್ ಹೇಳಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ.. 

‘ಪವಿತ್ರ ಗ್ರಂಥ’ ಕಂಠಪಾಠ ಮಾಡಿದ್ರೆ ಜೈಲು ಶಿಕ್ಷೆಯಿಂದ ವಿನಾಯ್ತಿ ; ‘ಪಾಕ್‌ ಪಂಜಾಬ್ ಸರ್ಕಾರ’ದಿಂದ ವಿಶಿಷ್ಟ ಪ್ರಸ್ತಾಪ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷ ವಾರ್ಡ್ಗೆ ಒಂದೇ ಗಣೇಶ ಮೂರ್ತಿ ಇಡಲು ಜಾರಿಗೊಳಿಸಿದ್ದ ನಿಯಮಗಳಂತೆ ಈ ವರ್ಷವೂ ಅದೇ ನಿಯಮಗಳನ್ನು ಜಾರಿಗೊಳಿಸುತ್ತಾ? ಎಂಬುದರ ಬಗ್ಗೆ ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಮಾನ್ಯ ಮುಖ್ಯ ಆಯುಕ್ತರು ಪ್ರತಿಕ್ರಿಯಿಸುತ್ತಾ, ‘ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷ ರೂಪಿಸಿರುವ ನಿಯಮಗಳನ್ನು ಪರಿಶೀಲಿಸುತ್ತೇವೆ. ಅದಕ್ಕಾಗಿ ರಾಜ್ಯಮಟ್ಟದಲ್ಲಿ ಸಭೆ ನಡೆದು ಸರ್ಕಾರ ನೀಡುವ ನಿರ್ದೇಶನಗಳೇ ಅಂತಿಮ ತೀರ್ಮಾನವಾಗಿರುತ್ತದೆ. ಅದರನುಸಾರ ಪಾಲಿಕೆ ಯೋಜನೆಗಳನ್ನು ರೂಪಿಸಿಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಈಗ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ’ ಎಂದು ಉತ್ತರಿಸಿರುತ್ತಾರೆ.

ನನ್ನ ಕಂಡ್ರೇ.. ಬಿಜೆಪಿಯವರಿಗೆ ಭಯವೋ ಭಯ – ಮಾಜಿ ಸಿಎಂ ಸಿದ್ಧರಾಮಯ್ಯ

ಆದರೆ, ಮಾನ್ಯ ಮುಖ್ಯ ಆಯುಕ್ತರು ನೀಡಿರುವ ಮಾಹಿತಿಯನ್ನು ‘ಈ ವರ್ಷವೂ ವಾರ್ಡ್ ಗೆ ಒಂದೇ ಗಣಪತಿ? – ಮುಖ್ಯ ಆಯುಕ್ತರು’ ಎಂದು ಕೆಲ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಸದರಿ ವರದಿಯು ನಿರಾಧಾರವಾಗಿದ್ದು, ಮಾನ್ಯ ಮುಖ್ಯ ಆಯುಕ್ತರು ನೀಡಿರುವ ಮಾಹಿತಿಯನ್ನು ತಿರುಚಿ ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ರವಾನಿಸಲಾಗಿರುತ್ತದೆ. ಈ ರೀತಿ ತಪ್ಪು ಮಾಹಿತಿಯನ್ನು ನೀಡುತ್ತಿರುವ ಕೆಲ ಮಾಧ್ಯಮಗಳಿಗೆ ಶೋಭೆ ತರುವಂತಹದ್ದಲ್ಲ ಎಂದು ಹೇಳಿದ್ದಾರೆ.

Railway Jobs : ಉದ್ಯೋಗ ನಿರೀಕ್ಷಿತರಿಗೆ ಗುಡ್‌ ನ್ಯೂಸ್‌ : ‘1.4 ಲಕ್ಷ ಹುದ್ದೆ’ಗಳ ಭರ್ತಿಗೆ ಮುಂದಾದ ಭಾರತೀಯ ರೈಲ್ವೆ

Share.
Exit mobile version