ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನಿಂದ 10, 20, 50, 100, 200 ಹಾಗೂ 500 ಮಾದರಿಯ ನೋಟುಗಳನ್ನು ಚಲಾವಣೆಗೆ ಪರಿಚಯಿಸಲಾಗಿದೆ. ಈ ಎಲ್ಲಾ ಬಗೆಯ ನೋಟುಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ದೇಶದ ವೈವಿದ್ಯತೆಯನ್ನು ಸಾರುವಂತ ವಿಶೇಷತೆಗಳಿಂದ ಕೂಡಿವೆ. ಹಾಗಾದ್ರೇ ಏನೆಲ್ಲಾ ವಿಶೇಷತೆಗಳಿವೆ ಅನ್ನುವ ಬಗ್ಗೆ ಮುಂದೆ ಓದಿ.
ಆರ್ ಬಿ ಐ ಚಲಾವಣೆಗೆ ತಂದಿರುವಂತ ಹತ್ತು ರೂಪಾಯಿಯ ನೋಟಿನಿಂದ ಹಿಡಿದು, 500 ರೂ.ಗಳ ನೋಟಿನವರೆಗೆ ಭಾರತದ ನೋಟಿನಲ್ಲಿ ವಿಶೇಷತೆಗಳಿವೆ. ಭಾರತದ ಅತೀ ಹೆಚ್ಚು ಮುಖಬೆಲೆಯ ನೋಟಾದಂತ 2000 ರೂಪಾಯಿಗಳನ್ನು ಆರ್ ಬಿ ಐ ಹಿಂಪಡೆದಿತ್ತು. ಈಗ 10, 20, 50, 100 ಹಾಗೂ 500 ರೂ.ಗಳ ನೋಟುಗಳು ಮಾತ್ರ ಚಲಾವಣೆಯಲ್ಲಿದ್ದಾವೆ. ಈ ಒಂದೊಂದು ನೋಟಿನಲ್ಲಿರುವಂತ ವಿಶೇಷತೆ ಈ ಕೆಳಗಿನಂತಿದೆ.
10 ರೂ.ಗಳ ನೋಟಿನ ವಿಶೇಷತೆಗಳು
10 ರೂಪಾಯಿ ನೋಟಿನ ರಚನೆಯು ಕೋನಾರ್ಕ್ ಸೂರ್ಯ ದೇವಸ್ಥಾನದಿಂದ ಕೂಡಿದೆ. ಕೋನಾರ್ಕ್ ಸೂರ್ಯ ದೇವಸ್ಥಾನವನ್ನು ಕ್ರಿ.ಶ 13ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದಾಗಿದೆ. ಪೂರ್ವ ಗಂಗಾ ರಾಜವಂಶದವರ ಸಾಮ್ರಾಜ್ಯದ ವೇಳೆಯಾಗಿದೆ.
24 ಚಕ್ರಗಳು ದಿನದ 24 ಗಂಟೆಗಳನ್ನು ಮತ್ತು 7 ಕುದುರೆಗಳು ವಾರದ 7 ದಿನಗಳ್ನು ಸೂಚಿಸುತ್ತವೆ. ಕೋನಾರ್ಕ್ ಸೂರ್ಯ ದೇವಸ್ಥಾನವನ್ನು ಯುನೆಸ್ಕೋ 1984ರಲ್ಲಿ ಭಾರತದ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತ್ತು.
20 ರೂಪಾಯಿ ನೋಟಿನ ವಿಶೇಷತೆಗಳು
20 ರೂ ನೋಟಿನ ರಚನೆ ಎಲ್ಲೋರಾ ಗುಹೆಗಳ ರಚನೆಯನ್ನು ಒಳಗೊಂಡಿದೆ. ಇದರ ನಿರ್ಮಾಣ ಕ್ರಿಸ್ತ ಶಕ 600 ರಿಂದ 1000 ಆಗಿದೆ. ರಾಷ್ಟ್ರಕೂಟರು ಮತ್ತು ಯಾದವ ರಾಜವಂಶಜರ ಕಾಲದ್ದಾಗಿದೆ.
ಎಲ್ಲೋರಾ ಗುಹೆಗಳು 34 ಕಲ್ಲಿನ ಗುಹೆಗಳ ಸರಣಿಯಾಗಿದೆ. 6 ರಿಂದ 8ನೇ ಶತಮಾನದಲ್ಲಿ ಕೆತ್ತಲಾದ ಈ ಗುಹೆಗಳು ಹಿಂದೂ, ಬೌದ್ಧ ಮತ್ತು ಜೈನ ದೇವಾಲಯಗಳ ನೆಲೆಯಾಗಿವೆ. ಎಲ್ಲೋರಾ ಗುಹೆಗಳನ್ನು 1983ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತ್ತು. ಈ ಎಲ್ಲಾ ವೈಶಿಷ್ಯತೆಗಳನ್ನು 20 ರೂ.ಗಳ ನೋಟು ಒಳ ಗೊಂಡಿದೆ.
50 ರೂ.ಗಳ ನೋಟಿನ ವಿಶೇಷತೆಗಳು
50 ರೂ.ಗಳ ನೋಟಿನ ರಚನೆಯು ಹಂಪಿಯ ಕಲ್ಲಿನ ರಥವನ್ನು ಒಳಗೊಂಡಿದೆ. ಕ್ರಿ.ಶ 14ನೇ ಶತಮಾನದಲ್ಲಿ ಹಂಪಿಯ ಕಲ್ಲಿನ ರಥ ನಿರ್ಮಿಸಲಾಗಿದ್ದು ಎನ್ನಲಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ನಿರ್ಮಿಸಿದ್ದು.
ಈ ಪ್ರಸಿದ್ಧ ಕಲ್ಲಿನ ರಥವನ್ನು 14 ರಿಂದ 16ನೇ ಶತಮಾನದ ನಡುವೆ ವಿಜಯನಗರ ಸಾಮ್ರಾಜ್ಯದಲ್ಲಿ ನಿರ್ಮಿಸಲಾಗಿತ್ತು. ಇದನ್ನು 1986ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಗಿತ್ತು. ಇದರ ಚಿತ್ರವನ್ನು 50 ರೂ.ಗಳ ನೋಟಿನಲ್ಲಿ ಇದೆ.
100 ರೂ.ಗಳ ನೋಟಿನ ವಿಶೇಷತೆಗಳು
100 ರೂಪಾಯಿ ನೋಟಿನಲ್ಲಿ ರಾಣಿ ಕಿ ವಾವ್ ಚಿತ್ರವನ್ನು ಕಾಣಬಹುದಾಗಿದೆ. ಇದು ಕ್ರಿ.ಶ 11ನೇ ಶತಮಾನದ್ದು. ಸೋಲಂಕಿ ರಾಜವಂಶರ ಕಾಲದ್ದಾಗಿದೆ. ಗುಜರಾತ್ ನ ಪಟಾನ್ ನಲ್ಲಿರುವ ಮೆಟ್ಟಿಲು ಬಾವಿಯನ್ನು ಯುನೆಸ್ಕೋ 2014ರಲ್ಲಿ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತ್ತು. ಇದನ್ನು 11ನೇ ಶತಮಾನದಲ್ಲಿ ಸೋಲಂಕಿ ರಾಣಿ ಉದಯಮತಿ ತನ್ನ ಪತಿಯ ಪ್ರೀತಿಯ ಸಂಕೇತವಾಗಿ ನಿರ್ಮಿಸಿದ್ದರು.
200 ರೂ.ಗಳ ನೋಟಿನ ವಿಶೇಷತೆಗಳು
ಈ ನೋಟಿನಲ್ಲಿ ಸಾಂಚಿ ಸ್ತೂಪದ ರಚನೆ ಒಳಗೊಂಡಿದೆ. ಕ್ರಿ.ಪೂ 3ನೇ ಶತಮಾನದ್ದಾಗಿದೆ. ಮೌರ್ಯ ಸಾಮ್ರಾಜ್ಯದ ಕಾಲದ್ದು ಸಾಂಚಿ ಸ್ತೂಪವಾಗಿದೆ.
ಮೊದಲ ಬಾರಿಗೆ 200 ರೂ ಮುಖಬೆಲೆಯ ನೋಟನ್ನು ಆಗಸ್ಟ್ 2017ರಲ್ಲಿ ಪರಿಚಯಿಸಲಾಯಿತು. ಇದರಲ್ಲಿ ಬೌದ್ಧ ಸ್ಮಾರಕವಾದ ಮಧ್ಯಪ್ರದೇಶದಲ್ಲಿರುವ ಸಾಂಚಿ ಸ್ತೂಪವಿದೆ. ಇದನ್ನು ಕ್ರಿ.ಪೂ 2ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. 1989ರಲ್ಲಿ ಇದು ಕೂಡ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ.
500 ರೂ.ಗಳ ನೋಟಿನ ವಿಶೇಷತೆಗಳು
ಈ ನೋಟಿನಲ್ಲಿ ಕೆಂಪು ಕೋಟೆಯ ರಚನೆಯನ್ನು ಕಾಣಬಹುದಾಗಿದೆ. ಇದರ ನಿರ್ಮಾಣ ಮೇ.12, 1693 ರಿಂದ ಏಪ್ರಿಲ್.6, 1648 ಆಗಿದೆ. ಮೊಘಲ್ ಸಾಮ್ರಾಜ್ಯದ ಕಾಲಾವಧಿಯಲ್ಲಿ ನಿರ್ಮಾಣವಾಗಿತ್ತು.
2016ರ ನವೆಂಬರ್ ನಲ್ಲಿ ಹೊಸ 500 ರೂ ನೋಟುಗಳನ್ನು ಪರಿಚಯಿಸಲಾಗಿತ್ತು. ಈ ನೋಟುಗಳ ಮೇಲೆ ದೆಹಲಿಯ ಕೆಂಪು ಕೋಟೆಯ ಭಾಗಗಳನ್ನು ಪ್ರಕಟಿಸಲಾಗಿದೆ. ಈ ಐತಿಹಾಸಿಕ ಕೋಟೆಯನ್ನು 17ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಇದನ್ನು 2007ರಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು.
1 ವರ್ಷದೊಳಗೆ ತುಂಗಭದ್ರಾ ಜಲಾಶಯಕ್ಕೆ ನೂತನ ‘ಕ್ರಸ್ಟ್ ಗೇಟ್’ಗಳ ಅಳವಡಿಕೆಗೆ ಕ್ರಮ: ಡಿಸಿಎಂ ಡಿಕೆಶಿ
ಇತಿಹಾಸದಲ್ಲಿ ಮೊದಲ ಬಾರಿಗೆ ‘ಚೆಸ್ ಒಲಿಂಪಿಯಾಡ್’ನಲ್ಲಿ ಭಾರತಕ್ಕೆ ಚಿನ್ನ ಗೆಲುವು | 45th Chess Olympiad