ಬೆಂಗಳೂರು; ರಾಜ್ಯದ ಜನರು ಯಾವುದೇ ಎಸ್ಕಾಂ ವಿಭಾಗದಿಂದ ವಿದ್ಯುತ್ ಸಂಪರ್ಕ ಪಡೆದಿದ್ದರೂ, ಅವರ ಮೀಟರ್ ದೋಷಪೂರಿತವಾಗಿದ್ದರೇ, ಬದಲಾವಣೆಗೆ ಅವಕಾಶವಿದೆ. ಕೇವಲ 8 ಕೆಲಸದ ದಿನಗಳಲ್ಲಿ ಬದಲಾವಣೆ ಮಾಡುವುದು ಕಡ್ಡಾಯವಾಗಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಇ-ಆಡಳಿತ) ಸಕಾಲ ಮಿಷನ್ ಮಾಹಿತಿ ಹಂಚಿಕೊಂಡಿದ್ದು, ಸಕಾಲ ಕಾಯ್ದೆಯಡಿ ಅಧಿಸೂಚನೆಗೊಂಡಿರುವ ದೋಷಪೂರಿತ ಮೀಟರ್ ಬದಲಾವಣೆ ಸೇವೆಯನ್ನು 8 ಕೆಲಸದ ದಿನಗಳಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದೆ.
ದೋಷಪೂರಿತ ಮೀಟರ್ ಬದಲಾವಣೆಗೆ ಹೀಗೆ ಅರ್ಜಿ ಸಲ್ಲಿಸಿ
https://kuwsdb.karnataka.gov.in ಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಿಗದಿತ ಅವಧಿಯಲ್ಲಿ ಸೇವೆ ದೊರಕದಿದ್ದಲ್ಲಿ, ಮೇಲ್ಮನವಿ ಸಲ್ಲಿಸಲು https://sakala.kar.nic.in/Online_Appeal/Online/Appeal-I.aspx ಗೆ ಭೇಟಿ ನೀಡಿ, ಸಲ್ಲಿಸುವಂತೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 080-44554455 ಸಂಖ್ಯೆಗೆ ಸಂಪರ್ಕಿಸಿ ಪಡೆಯಬಹುದಾಗಿದೆ.
ಸಕಾಲ ಕಾಯ್ದೆಯಡಿ ಅಧಿಸೂಚನೆಗೊಂಡಿರುವ ರುವ, ದೋಷಪೂರಿತ ಮೀಟರ್ ಬದಲಾವಣೆ
ಸೇವೆಯನ್ನು 8 ಕೆಲಸದ ದಿನಗಳಲ್ಲಿ ಪಡೆಯಿರಿ.#karnataka #sakalamission #sakalahelpline #citizen #services #citizenservices #govtofkarnataka #government #youthrights #sakala pic.twitter.com/HaWxQwyT2k— SAKALA- Government of Karnataka (@SakalaMission) September 6, 2024
SC, ST ಸಮುದಾಯದ ರೈತರಿಗೆ ಗುಡ್ ನ್ಯೂಸ್: ರಿಯಾಯಿತಿ ದರದಲ್ಲಿ ಕೃಷಿ ಉಪಕರಣಗಳ ವಿತರಣೆಗೆ ಅರ್ಜಿ ಆಹ್ವಾನ