2024ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಮೊದಲ ಬಾರಿಗೆ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ರೋಹನ್ ಬೋಪಣ್ಣ ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ 43 ವರ್ಷದ ಬೋಪಣ್ಣ ಮತ್ತು ಎಬ್ಡೆನ್ ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸರಿ ಅವರನ್ನು 7-6 (0), 7-5 ಸೆಟ್ ಗಳಿಂದ ಸೋಲಿಸಿ ಕಿರೀಟವನ್ನು ತಮ್ಮದಾಗಿಸಿಕೊಂಡರು.
ಈ ಗೆಲುವಿನೊಂದಿಗೆ ಬೋಪಣ್ಣ ಮತ್ತು ಎಬ್ಡೆನ್ 7,30,000 ಆಸ್ಟ್ರೇಲಿಯನ್ ಡಾಲರ್ ಬಹುಮಾನದ ಮೊತ್ತವನ್ನು ಪಡೆದರು. ಬೋಪಣ್ಣ ಅವರ ಪಾಲು 365,000 ಆಸ್ಟ್ರೇಲಿಯನ್ ಡಾಲರ್ ಆಗಿರುತ್ತದೆ, ಇದು ₹1.99 ಕೋಟಿಗೆ ಸಮಾನವಾಗಿದೆ. ರನ್ನರ್ ಅಪ್ ಬೊಲೆಲ್ಲಿ ಮತ್ತು ವಾವಾಸ್ಸೊರಿ ತಂಡವಾಗಿ 400,000 ಆಸ್ಟ್ರೇಲಿಯನ್ ಡಾಲರ್ ಪಡೆದರು.
2017ರ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಸಾಧನೆಯ ನಂತರ ಬೋಪಣ್ಣ ಅವ್ರ ವೃತ್ತಿಜೀವನದ ಎರಡನೇ ಸ್ಲಾಮ್ ಇದಾಗಿದ್ದರೆ, ಎಬ್ಡೆನ್ಗೆ ಇದು ಅವರ ಎರಡನೇ ಪುರುಷರ ಡಬಲ್ಸ್ ಟ್ರೋಫಿ ಮತ್ತು ಒಟ್ಟಾರೆ ಮೂರನೇ ಪ್ರಶಸ್ತಿಯಾಗಿದೆ.
“ವಯಸ್ಸು ಅಡ್ಡಿಯಲ್ಲ” : ‘ಆಸ್ಟ್ರೇಲಿಯನ್ ಓಪನ್ ಟೈಟಲ್’ ಗೆದ್ದ ಕನ್ನಡಿಗ ‘ಬೋಪಣ್ಣ’ಗೆ ‘ಪ್ರಧಾನಿ ಮೋದಿ’ ಅಭಿನಂದನೆ
‘ಸುಕನ್ಯಾ ಸಮೃದ್ಧಿ ಯೋಜನೆ’ ಖಾತೆ ತೆರೆಯುವುದು ಹೇಗೆ.? ಆನ್ಲೈನ್ ಆಯ್ಕೆ ಇದ್ಯಾ? ಇಲ್ಲಿದೆ ಮಾಹಿತಿ
ಗವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ: ನನ್ನ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟದ ಜಾತ್ರೆ ನೋಡಿಲ್ಲ- ಡಿಸಿಎಂ ಡಿಕೆಶಿ