ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ರಾತ್ರಿ ನೆನಸಿಟ್ಟ ಒಣದ್ರಾಕ್ಷಿ ಮರುದಿನ ಸೇವಿಸುವುದ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇದು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರೂ ದಿನವೂ ಸೇವಿಸಬಹುದು. ಹೀಗೆ ತಜ್ಞರು ಹೇಳುವ ಪ್ರಕಾರ ಒಣದ್ರಾಕ್ಷಿ ನೀರಿನಲ್ಲಿ ನೆನಸಿಟ್ಟು ಬೆಳಗ್ಗೆ ಸೇವಿಸಿದರೆ ದೇಹಕ್ಕೆ ಆಗುವ ಲಾಭಗಳ ಪಟ್ಟಿ ತಿಳಿದುಕೊಳ್ಳೋಣ. ಬೆಳಗ್ಗೆ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಖಾಲಿ ಹೊಟ್ಟೆಯಲ್ಲಿ ನೆನಸಿಟ್ಟ ಒಣದ್ರಾಕ್ಷಿ ಸೇವಿಸಿದರೆ ಆರೋಗ್ಯಕ್ಕೆ ದುಪ್ಪಟ್ಟು ಒಳ್ಳೆಯದು.
ನೀರಿನಲ್ಲಿ ನೆನಸಿಟ್ಟ ಒಣದ್ರಾಕ್ಷಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿರೆ ಹೃದಯ ಹಾಗು ಯಕೃತ್‌ನ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ.
ಆಹಾರ ತಜ್ಞರ ಪ್ರಕಾರ ದಿನಂಪ್ರತಿ ನೆನಸಿದ ಒಣದ್ರಾಕ್ಷಿ ಸೇವಿಸಿದರೆ ಕರುಳು ಸ್ವಚ್ಛವಾಗುತ್ತದೆ. ಹಾಗು ಕರುಳಿಗೆ ಸಂಬಂಧಸಿದ ಯಾವುದೇ ತೊಂದರೆಯಾಗುವುದಿಲ್ಲ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಹಾಗು ಮಲಬದ್ಧತೆಯಂತಹ ಸಮಸ್ಯೆ ಕೂಡ ಇರುವುದಿಲ್ಲ.
ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ನೆನಸಿಟ್ಟ ಒಣದ್ರಾಕ್ಷಿ ತುಂಬಾ ಸಹಾಯ ಮಾಡುತ್ತದೆ. ಹೀಗೆ ಪ್ರತಿ ದಿನ ನೆನಸಿಟ್ಟ ಒಣದ್ರಾಕ್ಷಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹಿಮೋಗ್ಲೋಬಿನ್ ಮಟ್ಟ ಸಮಪ್ರಮಾಣದಲ್ಲಿರಿಸಿ ಜೊತೆಗೆ ರಕ್ತವನ್ನು ಶುದ್ಧೀಕರಣ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ನಿತ್ಯವೂ ಒಣ ದ್ರಾಕ್ಷಿ ಸೇವಿಸಿದರೆ ಜೀರ್ಣಕ್ರಿಯೆಗೆ ಯಾವುದೇ ತೊಂದರೆಯಾಗುವುದಿಲ್ಲ. ಹಾಗು ಇದು ಕಣ್ಣಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ನಿರಂತರವಾಗಿ ಒಣ ದ್ರಾಕ್ಷಿ ಸೇವಿಸಿದರೆ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಕಣ್ಣಿನ ದೃಷ್ಟಿದೋಷ ಕ್ರಮೇಣ ವಾಸಿಯಾಗುತ್ತದೆ.