ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮನೆಯ ಮೂಲೆ ಮೂಲೆಗಳಲ್ಲಿ ಜೇಡ ಬಲೆಯನ್ನು ಕಟ್ಟಿದರೆ ಮನೆಯ ಅಂದವೇ ಹಾಳಾಗುತ್ತದೆ. ಮನೆ ನೆಲವನ್ನು ಶುಚಿಯಾಗಿಟ್ಟುಕೊಂಡು ಛಾವಣಿ ಮೇಲೆ ಜೇಡ ಬಲೆ ಇದ್ದರೆ ಮನೆಗೆ ಒಳ್ಳೆಯದಲ್ಲ. ಮನೆಯ ಛಾವಣಿ ಕೂಡ ಶುಚಿಯಾಗಿರಬೇಕು. ಛಾವಣಿಯಲ್ಲಿ ಜೇಡ ಹಾಕಿದ ಬಲೆಯನ್ನು ಶುಚುಗೊಳಿಸಿ ಅವುಗಳನ್ನು ಹೋಗಲಾಡಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ. ಹೀಗಾಗಿ ಜೇಡಗಳನ್ನು ಓಡಿಸಲು ಏನು ಮಾಡಬೇಕು? ಇವುಗಳನ್ನು ಓಡಿಸಲು ಏನು ಮನೆಮದ್ದುಗಳಿವೆ ಎಂದು ತಿಳಿದುಕೊಳ್ಳೋಣ.
ಪುದಿನಾ ಎಣ್ಣೆಯನ್ನು ಅಷ್ಟೇ ಸಮಪ್ರಮಾಣದ ನೀರಿಗೆ ಬೆರಸಿ ಚಿಕ್ಕ ಸ್ಪ್ರೇ ಬಾಟಲ್‌ನಲ್ಲಿ ಹಾಕಿಕೊಂಡು, ಬಲೆ ಇದ್ದ ಜಾಗಕ್ಕೆ ಸ್ಪ್ರೇ ಮಾಡಿದರೆ ಜೇಡಗಳು ಮತ್ತೇ ಆ ಜಾಗದ ಹತ್ತಿರ ಸುಳಿಯುವುದಿಲ್ಲ.
ಜೇಡಗಳಿಗೆ ಘಾಟಿ ವಾಸನೆ ಆಗಿಬರುವುದಿಲ್ಲ. ಸಿಟ್ರಿಕ್ ಹಣ್ಣುಗಳಲ್ಲಿ ತುಂಬಾ ಘಾಟಿನ ವಾಸನೆ ಇರುತ್ತದೆ. ಹಾಗಾಗಿ ಸಿಟ್ರಿಕ್ ಇರುವ ನಿಂಬೆ ಹಣ್ಣು, ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಜೇಡ ಇರುವ ಜಾಗಕ್ಕೆ ಉಜ್ಜಿದರೆ ಜೇಡಗಳು ಅಲ್ಲಿಂದ ಮಾಯವಾಗುತ್ತವೆ.
ಗೊಂಡಂಬಿ ವಾಸನೆ ಜೇಡಗಳಿಗೆ ಒಗ್ಗುವುದಿಲ್ಲವಂತೆ, ಹಾಗಾಗಿ ಗೋಡಂಬಿ ಬೀಜಗಳನ್ನು ಮನೆಯ ಅಲ್ಲಲ್ಲಿ ಮೂಲೆಗಳಲ್ಲಿ ಇರಿಸಿದರೆ ಜೇಡಗಳು ಮನೆಯೊಳಗೆ ಪ್ರವೇಶ ಮಾಡುವುದಿಲ್ಲವಂತೆ.
ಬೆಳ್ಳುಳ್ಳಿ ಸಹ ಜೇಡ ಹುಳಿಗಳನ್ನು ಹೋಗಲಾಡಿಸಲು ಅತ್ಯಂತ ಉತ್ತಮ ಸಾಧನವಾಗಿದೆ. ಬೆಳ್ಳುಳ್ಳಿ ಜಜ್ಜಿ ಜೇಡ ಕಾಣಿಸಿಕೊಳ್ಳುವ ಜಾಗಕ್ಕೆ ಇಟ್ಟರೆ ಜೇಡಗಳು ಆ ಕಡೆ ಸುಳಿಯುವುದಿಲ್ಲ. ಹಾಗು ನೀರಿಗೆ ಬೆಳ್ಳುಳ್ಳಿ ಜಜ್ಜಿ ಹಾಕಿ ಛಾವಣಿಗೆ ಸ್ಪ್ರೇ ಮಾಡಿದರೆ ಜೇಡ ಬಲೆ ಕಟ್ಟೋದನ್ನು ನಿಲ್ಲಿಸಿಬಿಡುತ್ತದೆ.
ಕೆವೊಂದು ಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದ ಜೇಡಗಳು ನಿಯಂತ್ರಣಕ್ಕೆ ಬರುತ್ತವೆ. ಹಾಗಾಗಿ ಮನೆ ಸುತ್ತಮುತ್ತ ಪುದಿನಾ, ತುಳಸಿ ಯಂತಹ ಗಿಡಗಳನ್ನು ನೆಟ್ಟು ಈ ಹುಳುಗಳಿಂದ ದೂರವಿರಬಹುದು. ಈ ಉಪಾಯಗಳ ಜೊತೆ ಮನೆಯ ನೆಲವನ್ನು ಶುಚಿಗೊಳಿಸುವಾಗ ಮನೆಯ ಮಾಲ್ಛಾವಣಿಯನ್ನೂ ಉದ್ದನೆಯ ಪೊರಕೆಯ ಸಹಾಯದಿಂದ ಆಗಾಗ ಸ್ವಚ್ಛ ಮಾಡಿಕೊಳ್ಳುತ್ತಿರಬೇಕು.