ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಇಂದಿಗೆ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದೆ. ಇದೇ ಸಂದರ್ಭದಲ್ಲಿ ಜನರಿಗಾಗಿ ಜಾರಿಗೊಳಿಸಿದಂತ ಪಂಚ ಗ್ಯಾರಂಟಿ ಯೋಜನೆಗಳಿಗೆ ಖರ್ಚಾದ ಹಣದ ವಿವರವನ್ನು ಹಂಚಿಕೊಂಡಿದೆ. ಹಾಗಾದ್ರೇ ಗ್ಯಾರಂಟಿ ಯೋಜನೆಗಳಿಗೆ ಖರ್ಚಾದ ಹಣ ಎಷ್ಟು ಅಂತ ಮುಂದೆ ಓದಿ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಗೃಹ ಲಕ್ಷ್ಮೀ ಯೋಜನೆಗೆ ದಿನಾಂಕ 19-05-2024ರವರೆಗೆ ರೂ.23,098 ಕೋಟಿ ವೆಚ್ಚವಾಗಿದೆ ಎಂದು ತಿಳಿಸಿದೆ.
ಇನ್ನೂ ಗೃಹ ಜ್ಯೋತಿ ಯೋಜನೆಗೆ ರೂ.10,207 ಕೋಟಿ, ಶಕ್ತಿ ಯೋಜನೆ ರೂ.4,054 ಕೋಟಿ, ಅನ್ನಭಾಗ್ಯ ಯೋಜನೆಗೆ ರೂ.7,364 ಕೋಟಿ ಹಾಗೂ ಯುವನಿಧಿಗೆ 93 ಕೋಟಿ ಹಣವನ್ನು ವೆಚ್ಚ ಮಾಡಿರುವುದಾಗಿ ತಿಳಿಸಿದೆ.
ಶಕ್ತಿ ಯೋಜನೆಗೆ 211.5 ಕೋಟಿ ಟ್ರಿಪ್ಪುಗಳಲ್ಲಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ ಎಂಬುದಾಗಿ ಮಾಹಿತಿ ನೀಡಿದೆ.
ಒಟ್ಟಾರೆಯಾಗಿ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ ರೂ.44,816 ಕೋಟಿ ದಿನಾಂಕ 19-05-2024ರವರೆಗೆ ವೆಚ್ಚವಾಗಿದೆಯಂತೆ.
‘ಸ್ಮೋಕ್ ಪಾನ್’ ಪ್ರಿಯರೇ ಎಚ್ಚರ ; ಪಾನ್ ತಿಂದು 12 ವರ್ಷದ ಬಾಲಕಿ ಹೊಟ್ಟೆಯಲ್ಲಿ ರಂಧ್ರ, ಶಸ್ತ್ರಚಿಕಿತ್ಸ
ರಾಜ್ಯ ಸರ್ಕಾರದಿಂದ ಹುಬ್ಬಳ್ಳಿ-ಧಾರವಾಡ ಡಿಸಿಪಿಯಾಗಿ ‘ಕುಶಾಲ್ ಚೌಕ್ಸೆ’ ನೇಮಿಸಿ ಆದೇಶ