ಬೆಂಗಳೂರು: ನಗರದಲ್ಲಿ ವಿಜೃಂಭಣೆಯಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಮೊದಲ ದಿನವೇ ಗಣೇಶ ಮೂರ್ತಿಯನ್ನು ಕೂರಿಸಿ, ವಿಸರ್ಜಿಸಿದ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದ್ದು, ಬರೋಬ್ಬರಿ 2.17 ಲಕ್ಷ ಗಣೇಶ ಮೂರ್ತಿಯನ್ನು ನಿನ್ನೆ ಒಂದೇ ಒಂದು ದಿನ ವಿಸರ್ಜಿಸಲಾಗಿದೆ.
ಈ ಕುರಿತಂತೆ ಬಿಬಿಎಂಪಿ ಮಾಹಿತಿ ಹಂಚಿಕೊಂಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ: 07/09/2024 ರಂದು ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವಾತ/ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 217006 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿರುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ:
ಪೂರ್ವ ವಲಯ: 40791
ಪಶ್ಚಿಮ ವಲಯ: 52429
ದಕ್ಷಿಣ ವಲಯ: 84149
ಬೊಮ್ಮನಹಳ್ಳಿ ವಲಯ: 3915
ದಾಸರಹಳ್ಳಿ ವಲಯ: 1719
ಮಹದೇವಪುರ ವಲಯ: 7229
ಆರ್.ಆರ್.ನಗರ ವಲಯ: 12680
ಯಲಹಂಕ ವಲಯ: 14094
ಒಟ್ಟು: 217006 ಗಣೇಶ ಮೂರ್ತಿಯನ್ನು ದಿನಾಂಕ 07-09-2024ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಸರ್ಜಿಸಲಾಗಿದೆ.
Shocking News: ಯೂಟ್ಯೂಬ್ ವೀಡಿಯೋ ನೋಡಿ ಸರ್ಜರಿ ಮಾಡಿದ ನಕಲಿ ವೈದ್ಯ: 15 ವರ್ಷದ ಬಾಲಕ ಸಾವು
ALERT : ಅತಿಯಾಗಿ ಮೊಬೈಲ್ ಬಳಸುವವರೇ ಎಚ್ಚರ : ಈ ಅಪಾಯಕಾರಿ ರೋಗ ನಿಮ್ಮನ್ನು ಕಾಡಬಹುದು!