ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮೆಟ್ಟಿಲು ಹತ್ತಿ ಇಳಿಯುವುದು ಒಂದು ವ್ಯಾಯಾಮ. ಹಾಗಾಗಿ ಮಾಲ್‌ಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ, ಮೆಟ್ರೋ ಸ್ಟೇಷನ್‌ಗಳಲ್ಲಿ ಇನ್ನುಳಿದ ಪಬ್ಲಿಕ್ ಜಾಗಗಳಲ್ಲಿ ಆದಷ್ಟು ಮೆಟ್ಟುಗಳನ್ನೇ ಬಳಸಿ ಇದರಿಂದ ನಿಮ್ಮ ದೇಹಕ್ಕೆ ಉತ್ತಮ ವ್ಯಾಯಾಮವಾಗುತ್ತದೆ. ಇನ್ನುಳಿದ ವ್ಯಾಯಾಮ ಮಾಡಲು ಬೇಜಾರಾದಾಗ ನೀವು ಮೆಟ್ಟುಗಳನ್ನು ಹತ್ತಿ ಇಳಿದು ವ್ಯಾಯಾಮ ಮಾಡಬಹುದು. ನೆನಪಿರಲಿ ಮೆಟ್ಟಿಲು ವ್ಯಾಯಾಮಕ್ಕೂ ಕೆಲ ಸೂಕ್ಷ್ಮ ನಿಯಮಗಳಿವೆ. ಅವುಗಳನ್ನು ತಿಳಿದುಕೊಳ್ಳಿ. ಹಾಗು ನಿಮ್ಮ ವಯಸ್ಸಿಗೆ ತಕ್ಕ ಹಾಗೆ ಈ ವ್ಯಾಯಾಮ ಮಾಡಿ. ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಇಳಿದರೆ ಹೃದಯಕ್ಕೆ ಅಪಾಯ ಉಂಟಾಗಬಹುದು. ನಿಯಮಿತವಾಗಿ ಈ ವ್ಯಾಯಾಮ ಮಾಡಿದರೆ ದೇಹ ಸದೃಢವಾಗಿರುತ್ತದೆ.
ಮೆಟ್ಟಿಲುಗಳನ್ನು ಹತ್ತಿ ಇಳಿಯುವುದರಿಂದ ತೂಕ ಬೇಗನೆ ಇಳಿಯುತ್ತದೆ. ಸ್ನಾಯುಗಳಿಗೆ ಹೆಚ್ಚು ಶಕ್ತಿ ದೊರೆಯುತ್ತದೆ. ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗು ಇದರಿಂದ ದೈಹಿಕ ಆರೋಗ್ಯವಲ್ಲದೇ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.
ಸಮತಟ್ಟಾದ ನೆಲದ ಮೇಲೆ ವ್ಯಾಯಾಮ ಮಾಡುವುದಕ್ಕಿಂತ ಹೀಗೆ ಮೆಟ್ಟಿಲು ವ್ಯಾಯಾಮ ಮಾಡಿದರೆ ಸ್ನಾಯುಗಳಿಗೆ ಹೆಚ್ಚು ಶಕ್ತಿ ದೊರೆಯುತ್ತದೆ. ವಾಕಿಂಗ್ ಜಾಗಿಂಗ್ ಮಾಡುವುದಕ್ಕಿಂತ ಹೆಚ್ಚು ಇಲ್ಲಿ ಸ್ನಾಯುಗಳು ಬಲಗೊಳ್ಳುತ್ತವೆ.
ಮೆಟ್ಟಿಲು ಹತ್ತಿ ಇಳಿಯುವುದರಿಂದ ಕ್ಯಾಲೋರಿ ಹೆಚ್ಚು ಬರ್ನ್ ಆಗುತ್ತದೆ. ಇದರಿಂದ ಬೇಗನೇ ತೂಕ ಇಳಿಸಿಕೊಳ್ಳಬಯಸುವವರು ಈ ವ್ಯಾಯಾಮವನ್ನು ನಿಯಮಿತವಾಗಿ ಮಾಡಲು ಅಡ್ಡಿಯಿಲ್ಲ.
ಮೆಟ್ಟಲು ವ್ಯಾಯಾಮ ಪ್ರಾರಂಭಿಸಲು ಕೆಲ ನಿಯಮಗಳಿವೆ. ಸರಿಯಾದ ಭಂಗಿಯಲ್ಲಿ ಹತ್ತಿ ಇಳಿಯಬೇಕು. ಪ್ರಾರಂಬದಲ್ಲಿ ನಿಧಾನವಾಗಿ ಹತ್ತಬೇಕು. ಕಾಲುಗಳಿಗೆ ಸೂಕ್ತವಾಗುವ ಹಾಗು ಕಂಫರ್ಟ್ ಇರುವ ಶೂಗಳನ್ನು ಧರಿಸಬೇಕು. ಉಸಿರಾಟದ ಮೇಲೆ ನಿಮ್ಮ ಗಮನವಿರಲಿ ಹಾಗು ನಿಮ್ಮ ಉಸಿರಾಟವನ್ನು ನಿಯಂತ್ರಿಸಿಕೊಳ್ಳಿ. ನಿಧಾನವಾದ ಉಸಿರಾಟದ ಕ್ರಿಯೆ ಇರಲಿ. ತೀರಾ ಸುಸ್ತು ಅಥವಾ ಹೃದಯ ಬಡಿತಾ ತೀರಾ ಜೋರಾದಾಗ ಮೆಟ್ಟಿಲು ವ್ಯಾಯಾಮವನ್ನು ಅರ್ಧಕ್ಕೆ ನಿಲ್ಲಿಸಿಬಿಡಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ವ್ಯಾಯಾಮ ಮಾಡಿ.
ಈ ವ್ಯಾಯಾಮವನ್ನು ನಿಧಾನವಾಗಿ ಪ್ರಾರಂಭಿಸಿ ಮೊದಲು ಬರೀ ಹತ್ತು ನಿಮಿಷಗಳ ಕಾಲ ಮಾತ್ರ ಮಾಡಿ. ವಾರದಲ್ಲಿ ಎರಡು ಬಾರಿ ಮಾಡುತ್ತಾ ಹಂತ ಹಂತವನ್ನು ಸಮಯವನ್ನು ಜಾಸ್ತಿ ಮಾಡುತ್ತಾ ಹೋಗಿ.