ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಾವು ಸೇವಿಸುವ ಆಹಾರದಲ್ಲಿರುವಂತಹ ತ್ಯಾಜ್ಯ ಹಾಗೂ ಕಲ್ಮಶವನ್ನು ಹೊರಗೆ ಹಾಕುವ ಪ್ರಕ್ರಿಯೆಯೇ ಮಲ ಹಾಗೂ ಮೂತ್ರ ವಿಸರ್ಜನೆ. ಇದು ಒಂದು ನೈಸರ್ಗಿಕ ಕ್ರಿಯೆಯಾಗಿದೆ ಬಂದಾಗ ಮಾಡಲೆಬೇಕು. ಇಲ್ಲವಾದರೆ ಅನೇಕ ಸಮಸ್ಯೆಗಳು ಉಂಟಾಗಬಹುದು ಆದರೆ ಹೆಚ್ಚಿನವರು ಮೂತ್ರವನ್ನು ತುಂಬಾ ಹೊತ್ತು ಹಿಡಿದುಕೊಂಡು ಇಡುವರು ಇದ್ದಾರೆ.
ನಿರಂತರವಾಗಿ ಮೂತ್ರ ಮಾಡದೆ ಹಾಗೆ ಇಟ್ಟುಕೊಂಡರೆ ಖಂಡಿತವಾಗಿಯೂ ಬೇರೆ ಸಮಸ್ಯೆಗಳು ಕಾಡಬಹುದು. ಆರೋಗ್ಯಕರ ವ್ಯಕ್ತಿಯ ಮೂತ್ರಕೋಶವು ಸುಮಾರು 400-500 ಮಿಲಿ ಲೀಟರ್ ತನಕ ಮೂತ್ರವನ್ನು ಹಿಡಿದಿಟ್ಟು ಕೊಳ್ಳಬಹುದು ಅಥವಾ. ಮೂತ್ರಕೋಶವು ಹಿಗ್ಗುವಂತಹ ಅಂಗಾಂಗವಾದರೂ ಅತಿಯಾಗಿ ಮೂತ್ರ ಹಿಡಿದಿಟ್ಟುಕೊಂಡರೆ ಅನೇಕ ಸಮಸ್ಯೆ ಎದುರಾಗುತ್ತದೆ.
ಮೂತ್ರ ಬಂದಾಗ ಅದನ್ನು ಹೊರಹಾಕಿದರೆ ಅದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಮೂತ್ರ ಹಿಡಿದಿಟ್ಟುಕೊಂಡರೆ ಅದು ಮೂತ್ರಕೋಶದ ಮೇಲೆ ಗಂಭಿರ ವಾದ ತೊಂದರೆ ಮಾಡಬಹುದು. ಮೂತ್ರವನ್ನು ಹೆಚ್ಚು ಸಮಯ ಹಿಡಿದಿಟ್ಟುಕೊಂಡರೆ ಅದರಿಂದ ಮೂತ್ರಕೋಶದ ಸ್ನಾಯುಗಳು ದುರ್ಬಲವಾಗುತ್ತ ಹೋಗುತ್ತದೆ.
ಮೂತ್ರವನ್ನು ಹಿಡಿದಿಟ್ಟು ಕೊಂಡರೆ ಮೂತ್ರಕೋಶದ ಸೋಂಕು ಉಂಟಾಗುತ್ತದೆ ನಿರಂತರವಾಗಿ ಮೂತ್ರ ವಿಸರ್ಜನೆ ಹಿಡಿದಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿ ಕೊಂಡಿದ್ದರೆ ಆಗ ಇದರು ಮೂತ್ರಕೋಶದ ಸೋಂಕಿಗೆ ಕಾರಣವಾಗಬಹುದು. ಬ್ಯಾಕ್ಟೀರಿಯಾವು ದ್ವಿಗುಣವಾಗುತ್ತಾ ಹೋಗುವ ಸಾಧ್ಯತೆ ಹೆಚ್ಚಿದೆ ಇದರಿಂದ ಸೋಂಕು ಹೆಚ್ಚಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯದೆ ಇದ್ದರೂ ಕೂಡ ಅದು ಮೂತ್ರಕೋಶದ ಸೋಂಕನ್ನು ಹೆಚ್ಚು ಮಾಡುತ್ತದೆ.
ಮೂತ್ರ ವಿಸರ್ಜನೆ ಮಾಡದೆ ಹಾಗೆ ಪದೇ ಪದೇ ಹಿಡಿದಿಟ್ಟುಕೊಂಡರೆ ಇದರಿಂದ ಮೂತ್ರಕೋಶವು ಹಿಗ್ಗಬಹುದು. ಮೂತ್ರಕೋಶವು ಹಿಗ್ಗಿದಾಗ ಮೂತ್ರ ವಿಸರ್ಜನೆ ಮಾಡಲು ತುಂಬಾ ಕಷ್ಟವಾಗಬಹುದು ಮತ್ತು ಪದೇ ಪದೇ ಮೂತ್ರ ವಿಸರ್ಜನೆ ಬರುವ ಸಾಧ್ಯತೆ ಇರುವುದು. ಇದರಿಂದ ಮೂತ್ರ ವಿಸರ್ಜನೆ ಅಸಹಿಷ್ಣುತೆ ಉಂಟಾಗುತ್ತದೆ.
ಸಾಮಾನ್ಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಮೂತ್ರ ವಿಸರ್ಜನೆ ಮಾಡುವ ನಿರಂತರತೆ ಬೇರೆ ಬೇರೆ ಇರುತ್ತದೆ ಆರೋಗ್ಯಕರ ವ್ಯಕ್ತಿಯು ದಿನದಲ್ಲಿ ನಾಲ್ಕರಿಂದ ಹತ್ತು ಸಲ ಕೂಡ ಮೂತ್ರ ವಿಸರ್ಜನೆ ಮಾಡಬಹುದು. ಅದೇ ಆರರಿಂದ ಎಂಟು ಸಲ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ ಎಂದು ಪರಿಗಣಿಸಲಾಗಿದೆ. ಹೀಗಾಗಿ ನೀವು ಮೂತ್ರ ವಿಸರ್ಜನೆ ಬಂದರೆ ತಕ್ಷಣವೇ ಖಾಲಿ ಮಾಡಿಕೊಳ್ಳಬೇಕು ಇಲ್ಲವಾದರೆ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.