ಬೆಂಗಳೂರು: ವನ್ಯಜೀವಿ ಪದಾರ್ಥಗಳನ್ನು ಇಟ್ಟುಕೊಳ್ಳೋದು ಅಪರಾಧ. ಹೀಗಿದ್ದೂ ಗೊತ್ತಿಲ್ಲದೇ ಮನೆಯಲ್ಲಿ ಇಟ್ಟಿಕೊಂಡಿರೋರು ವಾಪಾಸ್ ಮಾಡೋದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ನೀವು ಮನೆಯಲ್ಲಿ ವನ್ಯಜೀವಿ ಪದಾರ್ಥ ಇಟ್ಟುಕೊಂಡಿದ್ರೇ ಸರ್ಕಾರ ನೀಡಿರುವಂತ ವಿಧಾನದಂತೆ ವಾಪಾಸ್ ನೀಡಿದ್ರೆ ನಿಮ್ಮ ವಿರುದ್ಧ ಕೇಸ್ ಆಗೋದಿಲ್ಲ. ಅದು ಹೇಗೆ ಅಂತ ಮುಂದೆ ಓದಿ.
ಈ ಕುರಿತಂತೆ ರಾಜ್ಯ ಅರಣ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ಅರಣ್ಯ ಇಲಾಖೆಯು, ವನ್ಯಜೀವಿ, ಅಘೋಷಿತ ವನ್ಯಜೀವಿ/ ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಏ.11 ರೊಳಗೆ ಅಧ್ಯರ್ಪಿಸಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದೆ.
ಈ ವಸ್ತುಗಳನ್ನು ಹೊಂದಿರುವ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು(ಪ್ರಾದೇಶಿಕ/ವನ್ಯಜೀವಿ), ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು(ಪ್ರಾದೇಶಿಕ/ವನ್ಯಜೀವಿ), ವಲಯ ಅರಣ್ಯಾಧಿಕಾರಿಗಳು(ಪ್ರಾದೇಶಿಕ/ವನ್ಯಜೀವಿ), ಅಥವಾ ಹತ್ತಿರದ ಪೊಲೀಸ್ ಠಾಣೆ ಮುಖ್ಯಸ್ಥರುಗಳಲ್ಲಿ ನಮೂನೆ-1ನ್ನು ಪಡೆದು ರೂ.100/-ಗಳ ಛಾಪಾ ಕಾಗದದಲ್ಲಿ ಅಫಿಡವಿಟ್ ಮುದ್ರಿಸಿ ನೋಟರಿ ಮಾಡಿಸಿ ಅಧ್ಯರ್ಪಿಸುವಂತೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಯಾವುದೇ ಅರಣ್ಯ ಇಲಾಖೆಯ ಕಚೇರಿಗೆ ಬೇಟಿ ನೀಡಿ, ಮಾಹಿತಿ ಪಡೆಯಬಹುದು. ನಿಮ್ಮ ಬಳಿ ವನ್ಯ ಜೀವಿ ಪದಾರ್ಥಗಳು ಇದ್ರೇ ಅಲ್ಲಿ ವಾಪಾಸ್ ಹಿಂದಿರುಗಿಸಿ ಅಂತ ಸೂಚಿಸಿದೆ.
BIG NEWS: ಬಿಜೆಪಿಯಿಂದಲೇ ‘ಮಂಡ್ಯ’ ಲೋಕಸಭಾ ಚುನಾವಣೆಗೆ ಸ್ಪರ್ಧೆ: ಸುಳಿವು ನೀಡಿದ ‘ಸಂಸದೆ ಸುಮಲತಾ ಅಂಬರೀಶ್’
ರಾಜ್ಯ ಸರ್ಕಾರದಿಂದ OPS ಹೆಸರಿನಲ್ಲಿ ನೌಕರರಿಗೆ ‘ಮಕ್ಮಲ್ ಟೋಪಿ’ : ಮಾಜಿ ಸಿಎಂ ಹೆಚ್‌ಡಿಕೆ ಆಕ್ರೋಶ