ಹಾವೇರಿ: ಈ ಬಾರಿ ದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಬ್ ಕೀ ಬಾರ್ 50 ಪಾರ್ ಅಂತಾ ಹೇಳೋ ದೈರ್ಯ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದ್ದೇಯಾ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ಹಾನಗಲ್ಲನಲ್ಲಿ ಕುಮಾರಸ್ವಾಮಿ ಮಠದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗಾಗಿ ಇಟ್ಟ ಹಣವನ್ನ ಗ್ಯಾರಂಟಿಗೆ ಹಾಕಿದ್ದಾರೆ. ಮತ್ತೆ ಸಿಎಂ ಸಿದ್ದರಾಮಯ್ಯ ಅವರು ದೊಡ್ಡ ಭಾಷಣ ಮಾಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಜಾತಿ ಗಣತಿ ಬಹಿರಂಗ ಪಡಿಸ್ತೇನೆ ಅಂತ ಹೇಳಿದರು. ಹೊರಗಡೆ ಬಂತಾ ? ಕಾತರಾಜ್ ವರದಿ ತೆಗೆದುಕೊಂಡಿದ್ದಾರೆ. ಬಹಿರಂಗ ಪಡಿಸಿ. ಚುನಾವಣೆ ಲಾಭಕ್ಕಾಗಿ ವರದಿ ತೆಗೆದುಕೊಂಡಿದ್ದು ಜನರಿಗೆ ಗೊತ್ತಿದೆ. ಮೇಲವರ್ಗದ ಜನರು ಕಾತರಾಜ್ ವರದಿ ವಿರೋಧ ಮಾಡಿದರು. ಈಗ ಆ ವರದಿ ರಾಜ್ಯ ಸರ್ಕಾರ ಬಹಿರಂಗ ಪಡಿಸ್ತಿಲ್ಲ. ಜಾತಿಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಎಸಿ ಎಸ್ಟಿ ಜನರಿಗೆ ಮೀಸಲಾತಿ ಹೆಚ್ಚು ಮಾಡಿದ್ದು ನಾನು ಸಿಎಂ ಇದ್ದಾಗ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಒಂದು ವಾರಿ ಮೋಸ ಮಾಡಬಹುದು. ಪದೆ ಪದೆ ಜನರಿಗೆ ಮತದಾತರಿಗೆ ಮೋಸ ಮಾಡಲು ಸಾಧ್ಯವಿಲ್ಲ. ಸಬ್ ಕಾ ಸಾಥ್ ಬಸ್ ಕಾ ವಿಕಾಸ ಅಂತಾ ನಾವೂ ಇದ್ದೇವೆ. ಕರ್ನಾಟಕದ 57 ಲಕ್ಷ ಕುಟುಂಬಗಳಿಗೆ 14 ಸಾವಿರ ಕೋಟಿ ರೈತರ ಕುಟುಂಬಕ್ಕೆ ಕಿಸಾನ್ ಸಮ್ಮಾನ್ ಹಣ ಕೇಂದ್ರ ಸರ್ಕಾರ ನೀಡಿದೆ. ಅನ್ನಭಾಗ್ಯ ಅಂತ ಹೇಳುತ್ತಾರೆ. ಒಂದು ಕಾಳು ಅಕ್ಕಿಯನ್ನೂ ರಾಜ್ಯ ಸರ್ಕಾರ ನೀಡುತ್ತಿಲ್ಲ. 1 ಕೋಟಿ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ 5 ಕೆಜೆ ಅಕ್ಕಿ ಬರುತ್ತಿದೆ. 11 ಲಕ್ಷ ಮನೆಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ನೀಡಲಾಗಿದೆ. ಕೇಂದ್ರ ಸರ್ಕಾರ ನಾಲ್ಕು ವರ್ಷದಲ್ಲಿ ಜನರಿಗೆ ವಿವಿಧ ಯೋಜನೆ ನೀಡಿದೆ. 30 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಯೋಜನೆ ನೀಡಿದೆ. ದೇಶದಲ್ಲಿ ಶರವೇಗದಲ್ಲಿ ನ್ಯಾಷನಲ್ ಹೈವೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು
ಪ್ರತಿ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ. ಕೊಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ. ಬೋಗಸ್ ಗ್ಯಾರಂಟಿ ಕಾಂಗ್ರೆಸ್ ನಾಯಕರು ನೀಡುತ್ತಾರೆ. ಅವರು ಅಧಿಕಾರಕ್ಕೆ ಬರುವುದಿಲ್ಲ ಅದಕ್ಕೆ ಈ ರೀತಿ ಯೋಜನೆ ಘೋಷಣೆ ಮಾಡುತ್ತಾರೆ ಎಂದರು.
ನಾವು ಇಡೀ ದೇಶದಲ್ಲಿ 400 ಸ್ಥಾನಕ್ಕೂ ಹೆಚ್ವು ಗೇಲ್ಲುತ್ತೇವೆ. ಹಾನಗಲ್ ತಾಲೂಕಿನಿಂದ ಬದಲಾವಣೆ ಪ್ರಾರಂಭವಾಗಲಿ. ಸಿ.ಎಂ. ಉದಾಸಿ ಅವರು ಈ ಕ್ಷೇತ್ರದಲ್ಲಿ ತುಂಬಾ ಕೆಲಸ ಮಾಡಿದ್ದಾರೆ. ಸಿ.ಎಂ. ಉದಾಸಿ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತಿದ್ದೇವೆ ಎಂದರು.
ಅಭಿವೃದ್ದಿ ಶೂನ್ಯ
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ನಾಯಕರು, ಶಾಸಕರು ಜನರಿಗೆ ಮುಖಾ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. ಬರಗಾಲ ಬಂದಿದೆ ಕುಡಿಯುವ ನೀರಿಗೆ ಒಂದಾದರೂ ಯೋಜನೆ ಮಾಡಿದ್ದಾರಾ ? 800 ಜನರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅವರ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಜನರು ಈಗ ಕುಡಿಯುವ ನೀರಿನ ಗ್ಯಾರಂಟಿ ಕೊಡಿ ಅಂತ ಕೇಳುತ್ತಿದ್ದಾರೆ. ನೀರು ನೀಡದ ಸರ್ಕಾರದ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಜನ ಉತ್ತರ ನೀಡುತ್ತಾರೆ. ಸಿಎಂ ಸಿದ್ದರಾಮಯ್ಯ ಅವರು 1 ಲಕ್ಷ 5 ಸಾವಿರ ಕೋಟಿ ಸಾಲ ಮಾಡಿದ್ದಾರೆ ಅದುವೇ ಇವರ ಸಾಧನೆ. ರೊಟ್ಟಿ ಹೇಗೆ ಸ್ತ್ರೀಯರು ತಿರುಗಿಸುತ್ತಾರೆ ಹಾಗೇ ಹಾನಗಲ್ ಜನ ಈ ಬಾರಿ ಇವರನ್ನ ತಿರುಸಿಗಬೇಕು. ಕಾಂಗ್ರೆಸ್ ನವರ ಹಣದ ಆಮಿಷ ನಡೆಯುವುದಿಲ್ಲ. ಜನ ತಿರ್ಮಾಣ ಮಾಡಿದ್ದಾರೆ. ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ಮಾಡುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್, ಮಾಜಿ ಸಚಿವ ಮನೊಹರ್ ತಹಸೀಲ್ದಾರ್, ಶಿವರಾಜ್ ಸಜ್ಜನ್ ಮತ್ತಿತರರು ಹಾಜರಿದ್ದರು.
‘ವೋಟರ್ ಲೀಸ್ಟ್’ನಲ್ಲಿ ನಿಮ್ಮ ಹೆಸರು ತೆಗೆದು ಹಾಕಲಾಗಿದೆಯೇ? ಜಸ್ಟ್ ಹೀಗೆ ಮಾಡಿ, ಮತ್ತೆ ಸೇರಿಸಿ
‘ಚುನಾವಣಾ ಬಾಂಡ್’ ಅಂಕಿಅಂಶ ಬಹಿರಂಗ: ಯಾವ ಪಕ್ಷ? ಎಷ್ಟು ‘ದೇಣಿ’ಗೆ ಸ್ವೀಕಾರ? ಇಲ್ಲಿದೆ ಮಾಹಿತಿ | Electoral bonds