ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಟೀ ಸೇವನೆ ಹಿತಮಿತವಾಗಿದ್ದರೆ ಒಳ್ಳೆಯದು. ಕೆಲವೊಬ್ಬರು ದಿನಕ್ಕೆ ಏಳೆಂಟು ಬಾರಿ ಟೀ ಸೇವಿಸುತ್ತಾರೆ. ಇದು ದೇಹಕ್ಕೆ ತುಂಬಾ ತೊಂದರೆ ಉಂಟು ಮಾಡಬಹುದು. ಆದರೆ ಇನ್ನೂ ಕೆಲವರು ಟೀಗೆ ಸಕ್ಕರೆ ಬದಲು ಬೆಲ್ಲ ಬಳಸುತ್ತಾರೆ. ಬೆಲ್ಲದ ಟೀ ಸಹ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಆದರೆ ಇದೇ ಬೆಲ್ಲದಿಂದ ಮಾಡಿದ ಟೀ ಅನ್ನು ಹೆಚ್ಚು ಸೇವಿಸಿದರೆ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಹೆಚ್ಚು ಎಂದು ಆಹಾರ ತಜ್ಞರು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಈ ಕುರಿತಾದ ಒಂದು ಬರಹ ನಿಮಗಾಗಿ.
ಬೆಲ್ಲದ ಟೀ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಸರಿ. ಆದರೆ ಇದನ್ನೇ ದಿನಕ್ಕೆ ಮೂರು ಬಾರಿಗಿಂತ ಹೆಚ್ಚು ಸೇವಿಸಿದರೆ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಬೆಲ್ಲದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಇರುತ್ತದೆ. ಇದನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅತ್ಯಂತ ವೇಗವಾಗಿ ದೇಹದ ತೂಕ ಹೆಚ್ಚಾಗುತ್ತಾಹೋಗುತ್ತದೆ. ಎಚ್ಚರ.
ಶುಗರ್ ಇದ್ದವರು ಟೀಗೆ ಸಕ್ಕರೆಯ ಬದಲಾಗಿ ಬೆಲ್ಲ ಬಳಸುತ್ತಾರೆ. ಆದರೆ ಈ ಬೆಲ್ಲದ ಟೀ ದಿನಕ್ಕೆ ಎರಡು ಬಾರಿ ಮಾತ್ರ ಸೇವಿಸಲು ಅಡ್ಡಿಯಿಲ್ಲ. ದಿನಕ್ಕೆ ಎರಡು ಬಾರಿಗಿಂತ ಹೆಚ್ಚು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ ಶುಗರ್ ಇದ್ದವರು ಈ ಕುರಿತಾಗಿ ತುಂಬಾ ಜಾಗರೂಕರಾಗಿರಬೇಕು. ಪದೇ ಪದೇ ಟೀ ಸೇವಿಸುವ ಅಭ್ಯಾಸ ಕಡಿಮೆ ಮಾಡಿಕೊಳ್ಳಿ.
ಮಿತಿಯಿಲ್ಲದ ಬೆಲ್ಲ ಸೇವನೆ ದೇಹಕ್ಕೆ ಊಷ್ಣ ಪ್ರಮಾಣವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಊಷ್ಣ ಹೆಚ್ಚಾದರೆ ಮೂಗಿನಿಂದ ರಕ್ತಸ್ರಾವ ಆಗಬಹುದು.
ಅತಿಯಾದ ಬೆಲ್ಲದ ಟೀ ಗ್ಯಾಸ್ಟ್ರಿಕ್ ಸಮಸ್ಯೆ ಉಂಟು ಮಾಡುತ್ತದೆ. ದಿನಕ್ಕೆ ಎರಡು ಕಪ್‌ಗಿಂತ ಹೆಚ್ಚು ಬೆಲ್ಲದ ಟೀ ಸೇವಿಸದರೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡು ಹೊಟ್ಟೆ ಊದಿದಂತೆ ಹಾಗು ಗ್ಯಾಸ್ಟ್ರಿಕ್ ಕೂಡ ಶುರುವಾಗುತ್ತದೆ. ಒಟ್ಟಾರೆ ಅತಿಯಾದ ಬೆಲ್ಲದ ಟೀ ಸೇವನೆ ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ. ಅತಿಯಾದ ಬೆಲ್ಲ ಸೇವನೆ ಚರ್ಮದ ಆರೋಗ್ಯವನ್ನು ಹಾಳು ಮಾಡುತ್ತದೆ.
ಇನ್ನು ಬೆಲ್ಲ ತಯಾರಿಸುವಾಗ ಕೆಲ ರಾಸಾಯನಿಕ ಬಳಸುತ್ತಾರೆ. ಇಂತಹ ರಾಸಾಯನಿಕಯುಕ್ತ ಬೆಲ್ಲ ಬಳಸಿ ಟೀ ಮಾಡಿ ಕುಡಿದರೆ ದೇಹದ ಆರೋಗ್ಯ ಹಾಳಾಗದೇ ಇರದು. ಇದರಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ. ಬೆಲ್ಲದ ಟೀಯನ್ನು ಆದಷ್ಟು ಅವೈಡ್ ಮಾಡಿ. ದಿನಕ್ಕೆ ಎರಡು ಕಪ್ ಬೆಲ್ಲದ ಟೀ ಸೇವಿಸಲು ಅಡ್ಡಿಯಿಲ್ಲ, ಆದರೆ ಅದಕ್ಕಿಂತ ಹೆಚ್ಚಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆಹಾರ ತಜ್ಞರು ಸೂಚಿಸುತ್ತಾರೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.