ಬೇಸಿಗೆ ಸಮಯದಲ್ಲಿ ಶೂ ಧರಿಸೋದು ತುಂಬಾ ಕಷ್ಟ. ಪಾದ ಉರಿ ಬರುವ ಜೊತೆಗೆ ವಾಸನೆ ಬರಲು ಆರಂಭವಾಗುತ್ತದೆ. ಮನೆಯಲ್ಲಿಯೇ ಇರುವ ಕೆಲ ಸುಲಭ ಉಪಾಯದ ಮೂಲಕ ಶೂ ವಾಸನೆ ಬರದಂತೆ ಮಾಡಬಹುದು.
ಶೂ ಮತ್ತು ಸಾಕ್ಸ್ ನ್ನು ಆಗಾಗ ತೊಳೆಯುತ್ತಿರಬೇಕು. ಶೂ ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ.ಹಾಗೆ ಪ್ರತಿ ದಿನ ಸಾಕ್ಸ್ ಕೂಡ ತೊಳೆಯುತ್ತಿರಬೇಕು.
ಶೂ ತೊಳೆಯುತ್ತಿದ್ದರೆ ಅದು ಯಾವಾಗಲೂ ಫ್ರೆಶ್ ಆಗಿರುತ್ತದೆ. ಇದರಿಂದ ವಾಸನೆಯನ್ನು ತಡೆಯಬಹುದು. ಶೂವನ್ನು ತಣ್ಣನೆಯ ನೀರು ಹಾಗೂ ಕೈನಿಂದ ತೊಳೆಯುವುದು ಒಳ್ಳೆಯದು.
ಸೋಪ್ ಪುಡಿಯನ್ನು ಬಳಸುದಾದರೆ ಲೈಸೋಲ್ ಅಥವಾ ಪೈನ್ ಸೋಲ್ ನಂತಹ ಸೋಂಕುನಿವಾರಕವನ್ನು ಹೆಚ್ಚಾಗಿ ಬಳಸಬಹುದು. ಶೂ ವಾಶ್ ಮಾಡಿದ ನಂತರ ಅದನ್ನು ಗಾಳಿಯಾಡುವ ಜಾಗದಲ್ಲಿ ಇಟ್ಟು ಚೆನ್ನಾಗಿ ಒಣಗಿಸಬೇಕು.
ಕೆಲವೊಂದು ಹಣ್ಣಿನ ಸಿಪ್ಪೆಯಿಂದ ಶೂ ಮತ್ತು ಸಾಕ್ಸ್ ನ ದುರ್ವಾಸನೆ ತೆಗೆಯಬಹುದು. ವಾಸನೆ ತೆಗೆಯಲು ಹಣ್ಣಿನ ಸಿಪ್ಪೆ ತುಂಬಾ ಪ್ರಯೋಜನಕಾರಿ.
ಇದಕ್ಕಾಗಿ ನೀವು ಕಿತ್ತಳೆ, ನಿಂಬೆ ಹಣ್ಣನ್ನು ಬಳಸಬಹುದು. ಕಿತ್ತಳೆ ಮತ್ತು ನಿಂಬೆ ಹಣ್ಣಿನ ಸಿಪ್ಪೆ ತೆಗೆದು ಅದನ್ನು ಶೂ ಒಳಗೆ ಹಾಕಿ ರಾತ್ರಿ ಪೂರ್ತಿ ಹಾಗೆ ಇಡಬೇಕು. ಬೆಳಿ ಗ್ಗೆ ಈ ಸಿಪ್ಪೆಗಳನ್ನು ಶೂನಿಂದ ಹೊರಗೆ ತೆಗೆಯಬೇಕು. ಹೀಗೆ ಮಾಡಿದ್ರೆ ಶೂನಿಂದ ಬರುವ ವಾಸನೆಯನ್ನು ತಡೆಯಬಹುದು.
ಕಾಲಿಗೆ ಡಿಯೋಡರೆಂಟ್ ಹಾಕುವುದರಿಂದ ಶೂನಿಂದ ಬರುವಂತಹ ವಾಸನೆ ತೆಗೆಯಬಹುದು. ಕಾಲಿಗೆ ಡಿಯೋಡರೆಂಟ್ ಹಾಕಬೇಕು.ಇದರಿಂದ ವಾಸನೆ ಕಡಿಮೆಯಾಗುತ್ತದೆ.
ಕಾಪರ್ ಫೈಬರ್ ಅಥವಾ ಹತ್ತಿ ಸಾಕ್ಸ್ ಹೆಚ್ಚಾಗಿ ಧರಿಸಬೇಕು. ಟೈಟ್ ಶೂ ಧರಿಸಿದರೆ ಅದರಲ್ಲಿ ಸ್ವಲ್ಪವೂ ಕೂಡ ಗಾಳಿಯಾಡುವುದಿಲ್ಲ ಹಾಗಾಗಿ ಕಾಪರ್ ಫೈಬರ್ ಅಥವಾ ಹತ್ತಿ ಸಾಕ್ಸ್ ಧರಿಸಬೇಕು.ಇದನ್ನು ಧರಿಸುವುದರಿಂದ ಇದು ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆಯುತ್ತದೆ. ಇದರಿಂದ ವಾಸನೆ ಕೂಡ ಬರುವುದಿಲ್ಲ.
ಶೂಗೆ ಹಾಕುವ ಸೋಂಕುನಿವಾರಕ ಸ್ಪ್ರೇಯನ್ನು ಬಳಸಬೇಕು ಇದರಿಂದ ಶೂ ನಲ್ಲಿರುವ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಇದ್ರಿಂದ ಶೂ ಫ್ರೆಶ್ ಆಗಿರುತ್ತದೆ. ಹಾಗೇ ಶೂ ನಿಂದ ಬರುವ ಕೆಟ್ಟ ವಾಸನೆಯನ್ನು ತಡೆಯಬಹುದು.
ದೇವದಾರು ಮರದಲ್ಲಿ ಎಂಟಿಫಂಗಲ್ ಗುಣವನ್ನು ಹೊಂದಿದೆ. ಶೂನಲ್ಲಿರುವ ಬ್ಯಾಕ್ಟೀರಿಯಗಳನ್ನು ತೆಗೆಯಲು ಹಾಗೇ ವಾಸನೆ ಬರದಂತೆ ತಡೆಯಲು ಶೂ ಒಳಗೆ ದೇವದಾರು ಮರದ ತುಂಡನ್ನು ರಾತ್ರಿ ಪೂರ್ತಿ ಹಾಗೇ ಇಟ್ಟು ಬಿಡಬೇಕು. ಇದರಿಂದ ಶೂ ನಿಂದ ಬರುವ ವಾಸನೆಯನ್ನು ತಡೆಯಬಹುದು.