ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನಿಮ್ಮ ಭಿಕ್ಷುಕರನ್ನ ನಮ್ಮ ದೇಶಕ್ಕೆ ಕಳುಹಿಸಬೇಡಿ. ಅವರು ಹಜ್ ಯಾತ್ರೆಯ ಸೋಗಿನಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಇದು ನಿಮ್ಮ ದೇಶದ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂದು ಸೌದಿ ಅರೇಬಿಯಾ ತನ್ನ ನೆರೆಯ ದೇಶ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಪಾಕಿಸ್ತಾನಿ ಭಿಕ್ಷುಕರು ಯಾತ್ರಾರ್ಥಿಗಳಾಗಿ ದೇಶವನ್ನು ಪ್ರವೇಶಿಸುವ ಬಗ್ಗೆ ಸೌದಿ ಅರೇಬಿಯಾ ಕಳವಳ ವ್ಯಕ್ತಪಡಿಸಿದೆ. ಆದ್ದರಿಂದ, ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಎಚ್ಚರಿಕೆಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಇಂತಹ ಚಟುವಟಿಕೆಗಳನ್ನ ನಿಲ್ಲಿಸುವಂತೆ ಟ್ರಾವೆಲ್ ಏಜೆನ್ಸಿಗಳಿಗೆ ಸೂಚನೆ ನೀಡಿದೆ ಮತ್ತು ‘ಉಮ್ರಾ ಕಾಯ್ದೆ’ಯನ್ನು ಯೋಜಿಸಿದೆ. ಹಜ್ ಯಾತ್ರೆಯ ನೆಪದಲ್ಲಿ ಸೌದಿ ಅರೇಬಿಯಾಕ್ಕೆ ಭಿಕ್ಷುಕರನ್ನ ಕಳುಹಿಸುವ ಜಾಲದ ವಿರುದ್ಧವೂ ಕೇಂದ್ರ ತನಿಖಾ ಸಂಸ್ಥೆ ಕ್ರಮ ಕೈಗೊಳ್ಳಲಿದ್ದು, ಯಾವುದೇ ಕಾರಣಕ್ಕೂ ಯಾತ್ರಾರ್ಥಿಗಳಿಗೆ ಧಕ್ಕೆಯಾಗದಂತೆ ಹಾಗೂ ಪಾಕಿಸ್ತಾನದ ವರ್ಚಸ್ಸಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಉದ್ದೇಶ ಹೊಂದಿದೆ.
ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸರ್ಕಾರ ಆದೇಶ ಹೊರಡಿಸಿದೆ.!
ಮಾಧ್ಯಮ ವರದಿಯ ಪ್ರಕಾರ, ಧಾರ್ಮಿಕ ಯಾತ್ರೆಯ ನೆಪದಲ್ಲಿ ಬರುತ್ತಿರುವ ಪಾಕಿಸ್ತಾನಿ ಭಿಕ್ಷುಕರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸೌದಿ ಅರೇಬಿಯಾ ಕಳವಳ ವ್ಯಕ್ತಪಡಿಸಿದೆ. ಈ ಭಿಕ್ಷುಕರನ್ನ ತಡೆಯಲು ಕ್ರಮ ಕೈಗೊಳ್ಳುವಂತೆ ಸೌದಿ ಅರೇಬಿಯಾ ಅಧಿಕಾರಿಗಳು ಇಸ್ಲಾಮಾಬಾದ್’ಗೆ ಮನವಿ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸದಿದ್ದರೆ, ಪಾಕಿಸ್ತಾನಿ ಉಮ್ರಾ ಮತ್ತು ಹಜ್ ಯಾತ್ರಿಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದೆ.
ಸೌದಿ ಹಜ್ ಸಚಿವಾಲಯ ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಟ್ರಾವೆಲ್ ಏಜೆನ್ಸಿಗಳು ಮತ್ತು ಕೇಂದ್ರ ತನಿಖಾ ಸಂಸ್ಥೆಗೆ ಆದೇಶಗಳನ್ನು ನೀಡಿದೆ. ಸೌದಿ ಅರೇಬಿಯಾದ ರಾಯಭಾರಿ ನವಾಫ್ ಬಿನ್ ಸಯೀದ್ ಅಹ್ಮದ್ ಅಲ್-ಮಲ್ಕಿ ಅವರನ್ನು ಭೇಟಿ ಮಾಡಿದ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ಸೌದಿ ಅರೇಬಿಯಾಕ್ಕೆ ಭಿಕ್ಷುಕರನ್ನ ಕಳುಹಿಸುವ ಮಾಫಿಯಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕೇಂದ್ರೀಯ ತನಿಖಾ ಸಂಸ್ಥೆ (FIA)ಗೆ ಈ ಜಾಲವನ್ನ ಹತ್ತಿಕ್ಕುವ ಹೊಣೆಗಾರಿಕೆ ವಹಿಸಲಾಗಿದ್ದು, ಪಾಕಿಸ್ತಾನದ ಇಮೇಜ್’ಗೆ ಧಕ್ಕೆಯಾಗುತ್ತಿದೆ ಎಂದು ಮೊಹ್ಸಿನ್ ಹೇಳಿದ್ದಾರೆ.
ಸಿಕ್ಕಿಬಿದ್ದ ಭಿಕ್ಷುಕರು ಬಹುತೇಕ ಪಾಕಿಸ್ತಾನಿ ಪ್ರಜೆಗಳು.!
ಪಾಕಿಸ್ತಾನಿ ಭಿಕ್ಷುಕರು ತೀರ್ಥಯಾತ್ರೆಯ ನೆಪದಲ್ಲಿ ಮಧ್ಯಪ್ರಾಚ್ಯ ದೇಶಕ್ಕೆ ಪ್ರಯಾಣಿಸುತ್ತಾರೆ, ಅವರಲ್ಲಿ ಹೆಚ್ಚಿನವರು ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಹೋಗಿ ಅಲ್ಲಿ ಭಿಕ್ಷೆ ಬೇಡಲು ಪ್ರಾರಂಭಿಸುತ್ತಾರೆ ಎಂದು ಸಾಗರೋತ್ತರ ಪಾಕಿಸ್ತಾನಿಗಳ ಕಾರ್ಯದರ್ಶಿ ಜೀಶನ್ ಖಾನ್ಜಾಡಾ ಹೇಳುತ್ತಾರೆ. ಯಾಕಂದ್ರೆ, ಸಿಕ್ಕಿಬಿದ್ದ ಭಿಕ್ಷುಕರಲ್ಲಿ ಶೇಕಡಾ 90ರಷ್ಟು ಪಾಕಿಸ್ತಾನಿ ನಾಗರಿಕ. ಇತ್ತೀಚೆಗೆ, FIA ಕರಾಚಿ ವಿಮಾನ ನಿಲ್ದಾಣದಲ್ಲಿ ಸೌದಿ ಅರೇಬಿಯಾಕ್ಕೆ ವಿಮಾನದಿಂದ 11 ಭಿಕ್ಷುಕರನ್ನ ಡಿಬೋರ್ಡ್ ಮಾಡಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಯಾತ್ರಿಕರ ವೇಷದಲ್ಲಿದ್ದ 16 ಭಿಕ್ಷುಕರನ್ನು ಬಂಧಿಸಲಾಗಿತ್ತು. ಮೆಕ್ಕಾದ ಗ್ರ್ಯಾಂಡ್ ಮಸೀದಿಯೊಳಗೆ ಬಂಧಿಸಲಾದ ಹೆಚ್ಚಿನ ಜೇಬುಗಳ್ಳರು ಪಾಕಿಸ್ತಾನಿ ಪ್ರಜೆಗಳು.
ಈ 6 ‘ಎಣ್ಣೆ’ಗಳನ್ನ ಅಡುಗೆಮನೆಯಿಂದ ತಕ್ಷಣ ತೆಗೆದುಹಾಕಿ, ರಕ್ತನಾಳದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತೆ.!
BREAKING : ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಸೇರಿ ಇಬ್ಬರ ಶವ ಪತ್ತೆ!
“ಭಾರತದ ಯಾವುದೇ ಭಾಗವನ್ನ ಪಾಕಿಸ್ತಾನಕ್ಕೆ ಹೋಲಿಸುವಂತಿಲ್ಲ ” : ಹೈಕೋರ್ಟ್ ಜಡ್ಜ್ ಹೇಳಿಕೆಗೆ ‘CJI’ ಗರಂ