ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದಾಗಿ ಸ್ಪೋಟಕ ಮಾಹಿತಿ ನೀಡಿ, ಆ ಬಳಿಕ ಅದು ಸುಳ್ಳು ಎಂಬುದಾಗಿ ಬುರುಡೆ ಬಿಟ್ಟಿದ್ದಂತ ಬುರುಡೆ ಚಿನ್ನಯ್ಯನ ಹಿಂದಿನ ಸತ್ಯ ಬಟಾ ಬಯಲಾಗಿತ್ತು. ಇದೀಗ ಮಾಡೋದೆಲ್ಲ ಮಾಡಿ ಬುರುಡೆ ಚಿನ್ನಯ್ಯ ಸಹೋದರನ ಮುಂದೆ ಕಣ್ಣೀರಿಟ್ಟಿರುವುದಾಗಿ ತಿಳಿದು ಬಂದಿದೆ.
ಹೌದು ಬುರುಡೆ ಚಿನ್ನಯ್ಯ ಸಹೋದರ ತಾನಾಸಿ ಮುಂದೆ ಮಾಡೋದೆಲ್ಲ ಮಾಡಿ ಕಣ್ಣೀರಿಟ್ಟಿದ್ದಾರೆ. ಸಹೋದರನಿಗೆ ಕರೆ ಮಾಡಿ ಗೋಳಾಡಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ಚಿನ್ನಯ್ಯನನ್ನು ಬಂಧಿಸಿದ್ದ ದಿನವೇ ತಾನಾಸಿಯನ್ನು ಎಸ್ಐಟಿ ಕರೆಸಿತ್ತು. ಮೊನ್ನೆ ಚಿನ್ನಯ್ಯನ ಜೊತೆ ಅಣ್ಣ ತಾನಾಸಿ ಮಾತನಾಡಿದ್ದರು. ಅಂದು ನನ್ನ ಎದುರು ಕಣ್ಣೀರಿಟ್ಟಿದ್ದ ಎಂಬುದಾಗಿ ತಾನಾಸಿ ಹೇಳಿದ್ದಾರೆ.
ಎಲ್ಲಾ ಸತ್ಯವನ್ನೂ ಎಸ್ಐಟಿಗೆ ಹೇಳಿದ್ದೇನೆ ಎಂಬುದಾಗಿ ಚಿನ್ನಯ್ಯ ಕಣ್ಣೀರಿಟ್ಟಿದ್ದರಂತೆ. ಆ ವೇಳೆಯಲ್ಲಿ ಅಣ್ಣ ತಾನಾಸಿ ಮಣ್ಣು ತಿನ್ನುವ ಕೆಲಸ ಮಾಡಿದೆ ಎಂಬುದಾಗಿ ಬೈದಿದ್ದರಂತೆ.
ಶಾಲೆಗಳಿಗೆ ‘ಸ್ಥಳೀಯ ರಜೆ’ ನೀಡುವ ಕುರಿತಂತೆ ‘ಶಾಲಾ ಶಿಕ್ಷಣ ಇಲಾಖೆ’ಯಿಂದ ಮಹತ್ವದ ಸೂಚನೆ
BIG NEWS : ಧರ್ಮಸ್ಥಳ ಕೇಸ್ ಶೇ.90ರಷ್ಟು ತನಿಖೆ ಮುಗಿದಿದೆ, ‘NIA, CBI’ ಅಗತ್ಯವಿಲ್ಲ: ಸಚಿವ ರಾಮಲಿಂಗಾರೆಡ್ಡಿ