ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಏರೋಬಿಕ್ಸ್ ಕೂಡ ವ್ಯಾಯಾಮದ ಒಂದು ಬಗೆ. ಸಿಟಿ ಜನ ಈ ವ್ಯಾಯಾಮವನ್ನು ಹೆಚ್ಚಾಗಿ ಮೈಗೂಡಿಸಿಕೊಂಡಿದ್ದಾರೆ. ಅದರಲ್ಲೂ ಮಹಿಳೆಯರು ಇದನ್ನು ಹೆಚ್ಚು ಇಷ್ಟ ಪಡುತ್ತಾರೆ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಸಾಮೂಹಿಕವಾಗಿ ವ್ಯಾಯಾಮ ಮಾಡುವ ಬಗೆ ಇದು. ಜಿಮ್‌ಗಳಲ್ಲಿ, ಹೆಲ್ತ್ ಸೆಂಟರ್‌ಗಳಲ್ಲಿ ಇದನ್ನು ಹೇಳಿಕೊಡುತ್ತಾರೆ. ಇದರಲ್ಲಿ ಡ್ಯಾನ್ಸ್, ನಡಿಗೆ, ಓಟ, ಸೈಕ್ಲಿಂಗ್, ಸ್ಕಿಪ್ಪಿಂಗ್, ಫುಟ್‌ಬಾಲ್ ನಂತಹ ಆಟಗಳು ಎಲ್ಲವೂ ಒಳಗೊಂಡಿರುತ್ತವೆ. ಏರೋಬಿಕ್ಸ್ ವ್ಯಾಯಾಮವೊಂದನ್ನು ಮಾಡಿದರೆ ದೇಹಕ್ಕೆ ಈ ಎಲ್ಲಾ ಆಯಾಮಗಳು ಮಾಡಿದಂತಾಗುತ್ತದೆ. ಈ ವ್ಯಾಯಾಮ ಸ್ನಾಯುಗಳಿಗೆ ಹೆಚ್ಚು ಕೆಲಸ ಕೊಡುತ್ತದೆ. ಇದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಏರೋಬಿಕ್ ವ್ಯಾಯಾಮವನ್ನು ಕಾರ್ಡಿಯೋ ವ್ಯಾಯಾಮ ಎಂತಲೂ ಕರೆಯುತ್ತಾರೆ.
ಏರೋಬಿಕ್ಸ್ ವ್ಯಾಯಾಮ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ : ಏರೋಬಿಕ್ಸ್ ಮಾಡಿದರೆ ಹೃದಯ ಪಂಪ್ ಆಗುತ್ತದೆ. ಹೃದಯ ಬಲಗೊಂಡು ಹೃದಯದ ಎಲ್ಲಾ ಬಗೆಯ ಕಾಯಿಲೆಗಳಿಂದ ದೂರವಿರಬಹುದು. ಇದನ್ನು ಮಾಡುವುದರಿಂದ ಬ್ಯಾಡ್ ಕೊಲೆಸ್ಟ್ರಾಲ್ ಕರಗುತ್ತದೆ. ರಕ್ತದೊತ್ತೆ ನಿಯಂತ್ರಣದಲ್ಲಿರುತ್ತದೆ.
ಏರೋಬಿಕ್ಸ್ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅತ್ಯಂತ ಉತ್ತಮ ಹಾಗು ಪರಿಣಾಮಕಾರಿಯಾದ ಮಾರ್ಗವಾಗಿದೆ. ನಿರಂತರವಾಗಿ ನಿಯಮಿತವಾಗಿ ಏರೋಬಿಕ್ ವ್ಯಾಯಾಮ ಮಾಡಿದರೆ ಅತ್ಯಂತ ತ್ವರಿತಗತಿಯಲ್ಲಿ ದೇಹದ ತೂಕ ಇಳಿಸಿಕೊಳ್ಳಬಹುದು ಎಂದು ಸಂಶೋಧನೆ ಹೇಳುತ್ತದೆ. ಮಹಿಳೆಯರ ತೂಕ ಬೇಗನೇ ಏರುತ್ತದೆ. ಹಾಗಾಗಿ ಮಹಿಳೆಯರು ತೂಕ ಅದೇ ವೇಗದಲ್ಲಿ ಇಳಿಸಿಕೊಳ್ಳಲು ಏರೋಬಿಕ್ಸ್ ಮಾಡಿದರೆ ಉತ್ತಮ ಪರಿಣಾಮ ಕಂಡುಕೊಳ್ಳಬಹುದು.
ನಿಯಮಿತವಾಗಿ ಏರೋಬಿಕ್ ವ್ಯಾಯಾಮ ಮಾಡಿದರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದು. ಏರೋಬಿಕ್ಸ್ ಮಧುಮೇಹಿಗಳಿಗೆ ಹೇಳಿ ಮಾಡಿಸಿದ ವ್ಯಾಯಾಮ. ಈ ವ್ಯಾಯಾಮ ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಏರೋಬಿಕ್ಸ್ ಮಾಡುವುದರಿಂದ ಅಸ್ತಮಾದಂತೆ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಇನ್ನು ಶ್ವಾಸಕೋಶ ಹಾಗು ಉಸಿರಾಟದಂತದ ದೀರ್ಘಕಾಲದ ಸಮಸ್ಯೆಗಳಿಗೆ ಈ ವ್ಯಾಯಾಮ ಪರಿಹಾರ ನೀಡುತ್ತದೆ. ಆದರೆ ಹೆಚ್ಚು ಏರೋಬಿಕ್ಸ್ ವ್ಯಾಯಾಮ ಕೆಲವೊಮ್ಮೆ ಹೃದಯಕ್ಕೆ ಹೆಚ್ಚು ಒತ್ತು ನೀಡಿ ಹೃದಯದ ಆರೋಗ್ಯಕ್ಕೆ ತೊಂದರೆಯುಂಟು ಮಾಡಬಹುದು. ವಾರದಲ್ಲಿ ಹೆಚ್ಚೆಂದರೆ ಮೂರು ಬಾರಿ ಈ ವ್ಯಾಯಾಮ ಮಾಡಲು ತಜ್ಞರು ಸಲಹೆ ನೀಡುತ್ತಾರೆ.
ನಿದ್ರಾಹೀನತೆ ಸಮಸ್ಯೆ ಇದ್ದವರು ಏರೋಬಿಕ್ಸ್ ವ್ಯಾಯಾಮ ಮಾಡಬಹುದು. ಈ ವ್ಯಾಯಾಮ ಮಾಡಿದರೆ ದೇಹ ಸಂಪೂರ್ಣವಾಗಿ ದಣಿಯುತ್ತದೆ. ದೇಹದ ಸ್ನಾಯುಗಳು ಹೆಚ್ಚು ಶ್ರಮ ಪಡುತ್ತವೆ. ದೇಹ ಚೆನ್ನಾಗಿ ದಣಿದಾಗ ಉತ್ತಮ ನಿದ್ರೆ ಬರುತ್ತದೆ. ಹಾಗಾಗಿ ನಿದ್ರಾಹೀನತೆ ಸಮಸ್ಯೆ ಇದ್ದರು ಏರೋಬಿಕ್ಸ್ ಮಾಡಿ ಚೆನ್ನಾಗಿ ನಿದ್ರೆ ಮಾಡಿ.
ಏರೋಬಿಕ್ಸ್ ವ್ಯಾಯಾಮ ಪ್ರತಿರಕ್ಷನಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈ ಮೂಲಕ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಏರೋಬಿಕ್ಸ್ ತುಂಬಾ ಪ್ರಯೋಜನಕಾರಿಯಾಗಿದೆ. ಕೆಲಸದ ಒತ್ತಡ, ಇನ್ನಿತರ ಯಾವುದೇ ಮಾನಸಿಕ ಒತ್ತಡದಲ್ಲಿದ್ದವರು ಸಾಮೂಹಿಕವಾಗಿ ನೃತ್ಯ ವ್ಯಾಯಾಮ ಮಾಡಿದರೆ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಡುತ್ತಾರೆ.