ಮಂಗಳೂರು: ಪ್ರತೇಕ ರಾಷ್ಟ್ರ ಹೇಳಿಕೆ ನೀಡಿದಂತ ಸಂಸದ ಡಿ.ಕೆ ಸುರೇಶ್ ಗೆ ಈಗ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ವಕೀಲರೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.
ಈ ಸಂಬಂಧ ಮಂಗಳೂರಿನ 2ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಬಿಜೆಪಿ ಮುಖಂಡ ಹಾಗೂ ವಕೀಲ ಪಿ.ವಿಕಾಸ್ ಎಂಬುವರು ಅರ್ಜಿ ಸಲ್ಲಿಸಿದ್ದಾರೆ. ಪ್ರತ್ಯೇಕ ರಾಷ್ಟ್ರದ ಹೇಳಿಕೆಯನ್ನು ನೀಡಿದಂತ ಸಂಸದ ಡಿ.ಕೆ ಸುರೇಶ್ ವಿರುದ್ಧ ದೂರು ದಾಖಲಿಸೋದಕ್ಕೆ ಪೊಲೀಸರಿಗೆ ಸೂಚಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.
ಡಿಕೆ ಸುರೇಶ್ ಅವರ ಹೇಳಿಕೆ ದೇಶದ್ರೋಹದ, ಕುಮ್ಮಕ್ಕಿಗೆ ಕಾರಣವಾಗುವಂತ ಹೇಳಿಕೆಯಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋ ನಿಟ್ಟಿನಲ್ಲಿ ಕ್ರಮವಾಗಬೇಕಿದೆ. ಆ ನಿಟ್ಟಿನಲ್ಲಿ ಘನ ನ್ಯಾಯಾಲಯವು ಸೂಚಿಸಬೇಕು ಎಂಬುದಾಗಿ ಅರ್ಜಿಯಲ್ಲಿ ಕೋರಿದ್ದಾರೆ.
ಇದಷ್ಟೇ ಅಲ್ಲದೇ ಐಪಿಸಿ ಸೆಕ್ಷನ್ 124ಎ ಅಡಿಯಲ್ಲಿ ಸಂಸದ ಡಿ.ಕೆ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳೋದಕ್ಕೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಅಲ್ಲದೇ ಪೊಲೀಸ್ ಆಯುಕ್ತ, ಮಂಗಳೂರು ಉತ್ತರ ಪೊಲೀಸ್ ಠಾಣೆಗೂ ದೂರು ದಾಖಲಿಸಿಕೊಳ್ಳೋದಕ್ಕೆ ಸೂಚಿಸುವಂತೆ ಮನವಿ ಮಾಡಲಾಗಿದೆ.
ಈ ಹಿನ್ನಲೆಯಲ್ಲಿ ಉತ್ತರ ಭಾರತಕ್ಕೆ ಹಣ ಖರ್ಚು ಮಾಡೋದನ್ನು ಖಂಡಿಸಿ, ದಕ್ಷಿಣ ಭಾರತದ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದಂತ ಸಂಸದ ಡಿ.ಕೆ ಸುರೇಶ್ ಗೆ ಸಂಕಷ್ಟ ಎದುರಾದಂತೆ ಆಗಿದೆ.
BREAKING: ಬೆಂಗಳೂರಲ್ಲಿ ‘ED ಅಧಿಕಾರಿ’ಗಳ ವಿರುದ್ಧದ ‘FIR’: ಪೊಲೀಸರ ತನಿಖೆಗೆ ‘ಹೈಕೋರ್ಟ್’ ತಡೆ