Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜನಸಾಮಾನ್ಯರಿಗೆ ಬಿಗ್ ಶಾಕ್ : ಪೆಟ್ರೋಲ್ ಜೊತೆ ಅಡುಗೆ ಎಣ್ಣೆ, ಅಕ್ಕಿ ಬೆಲೆಯೂ ಏರಿಕೆ | Rice Cooking oil prices Hike

ಮೋದಿ ಯುಎಇ ಪ್ರವಾಸ ಯಶಸ್ವಿ: ಭಾರತದಲ್ಲಿ ₹41,000 ಕೋಟಿಗೂ ಅಧಿಕ ಹೂಡಿಕೆಗೆ ಯುಎಇ ಮುದ್ರೆ, ರಕ್ಷಣೆ ಮತ್ತು ಇಂಧನ ವಲಯದಲ್ಲಿ ಮಹತ್ವದ ಒಪ್ಪಂದ!

​ಚೀನಾ ಪ್ರವಾಸ ಅಭೂತಪೂರ್ವ ಯಶಸ್ಸು, ಇದೊಂದು ಐತಿಹಾಸಿಕ ಕ್ಷಣ: ಶ್ವೇತಭವನಕ್ಕೆ ಮರಳಿದ ಡೊನಾಲ್ಡ್ ಟ್ರಂಪ್ ಹರ್ಷ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮತ್ತೆ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ಬಿಡುಗಡೆಯಲ್ಲಿ ಅನ್ಯಾಯ: ಕನ್ನಡಿಗರನ್ನು ಕೆಣಕುತ್ತಿದೆ: ಡಿ.ಕೆ ಸುರೇಶ್ ಆಕ್ರೋಶ
KARNATAKA

ಮತ್ತೆ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ಬಿಡುಗಡೆಯಲ್ಲಿ ಅನ್ಯಾಯ: ಕನ್ನಡಿಗರನ್ನು ಕೆಣಕುತ್ತಿದೆ: ಡಿ.ಕೆ ಸುರೇಶ್ ಆಕ್ರೋಶ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: “ಪದೇ, ಪದೇ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಪಾಲಿನಲ್ಲಿ ಮೋಸವಾಗುತ್ತಿದೆ. ಕನ್ನಡಿಗರು ಹಾಗೂ ದಕ್ಷಿಣ ಭಾರತೀಯರ ಮನಸ್ಸನ್ನು ಕೇಂದ್ರ ಸರ್ಕಾರ ಕೆಣಕುತ್ತಿದೆ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು.

ರಾಜ್ಯಗಳಿಗೆ ತೆರಿಗೆ ಹಂಚಿಕೆ ಬಗ್ಗೆ ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದ ಪಟ್ಟಿಯ ಬಗ್ಗೆ ಮಾಧ್ಯಮದವರು ಸದಾಶಿವನಗರ ನಿವಾಸದ ಬಳಿ ಶುಕ್ರವಾರ ಕೇಳಿದಾಗ ಸುರೇಶ್ ಅವರು ಹೀಗೆ ಉತ್ತರಿಸಿದರು.

“ಕನ್ನಡಿಗರಿಗೆ ಆಗುತ್ತಿರುವ ಮೋಸವನ್ನು ಬಹಳ ದುಃಖದಿಂದ ಹೇಳುತ್ತಿದ್ದೇನೆ. ದೇಶದಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ ಕರ್ನಾಟಕಕ್ಕೆ 6,498 ಕೋಟಿ ರೂಪಾಯಿ ಕೊಡಲಾಗಿದೆ. ದಕ್ಷಿಣ ಭಾರತ ರಾಜ್ಯಗಳಿಗೆ ಒಟ್ಟಾರೆ 28,152 ಕೋಟಿ ರೂಪಾಯಿ ತೆರಿಗೆ ಪಾಲು ಕೊಡಲಾಗಿದೆ. ಆದರೆ ಉತ್ತರ ಪ್ರದೇಶ ರಾಜ್ಯವೊಂದಕ್ಕೆ 31,962 ಕೋಟಿ ರೂಪಾಯಿ ನೀಡಲಾಗಿದೆ. ನಮಗೆ ಈಗಾಗಲೇ ಆಗಿರುವ ಅನ್ಯಾಯವನ್ನಾದರೂ ಕನಿಷ್ಠ ಪಕ್ಷ ಸರಿದೂಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬಹುದಿತ್ತು. 2022 ರ ಕೇಂದ್ರ ಬಜೆಟ್ ಸಂದರ್ಭದಲ್ಲಿಯೇ ರಾಜ್ಯಗಳ ತೆರಿಗೆ ಪಾಲಿನ ತಾರತಮ್ಯದ ಬಗ್ಗೆ ನಾನು ದನಿಯೆತ್ತಿದ್ದೆ. ಅದರಲ್ಲೂ ಕರ್ನಾಟಕಕ್ಕೆ ಮತ್ತು ದಕ್ಷಿಣ ಭಾರತ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದೆ” ಎಂದು ಹೇಳಿದರು.

“ಉತ್ತರ ಭಾರತ ರಾಜ್ಯಗಳಂತೆ, ದಕ್ಷಿಣ ಭಾರತದ ರಾಜ್ಯಗಳನ್ನು ಕೇಂದ್ರ ಸರ್ಕಾರ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ನಮ್ಮ ರಾಜ್ಯಗಳ ಅಭಿವೃದ್ದಿಗೆ ಪೂರಕವಾಗಿ ನಿಲ್ಲಬೇಕು ಎನ್ನುವ ಆಲೋಚನೆ ಕೇಂದ್ರ ಸರ್ಕಾರಕ್ಕೆ ಬರಬೇಕು.

ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಏಕೆ?

“ಬಿಜೆಪಿ ಹಾಗೂ ಮಿತ್ರಪಕ್ಷದ 19 ಮಂದಿ ಸಂಸತ್ ಸದಸ್ಯರನ್ನು ಕರ್ನಾಟಕದಿಂದ ಕಳುಹಿಸಲಾಗಿದೆ. ಕಳೆದ 5 ಚುನಾವಣೆಗಳಲ್ಲಿ ಅತಿ ಹೆಚ್ಚು ಸಂಸದರನ್ನು ಕರ್ನಾಟಕದಿಂದ ಕಳುಹಿಸಿದರೂ ಏಕೆ ಈ ಧೋರಣೆ? ಕರ್ನಾಟಕದ ಜನರ ಮೇಲೆ ಮಲತಾಯಿ ಮತ್ಸರವೇಕೆ? ವಿಜಯದಶಮಿಯ ದಿನ ಕರ್ನಾಟಕಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಹಕ್ಕೋತ್ತಾಯ ಮಾಡುತ್ತಿದ್ದೇನೆ” ಎಂದು ಹೇಳಿದರು.

ನನ್ನ ಹಿಂದಿನ ಹೇಳಿಕೆ ತಿರುಚಲಾಗಿತ್ತು

ತೆರಿಗೆ ಅನ್ಯಾಯ ಮುಂದುವರೆದರೆ ದಕ್ಷಿಣ ಭಾರತ ಬೇರೆಯಾಗುವ ಪರಿಸ್ಥಿತಿ ಬರುತ್ತದೆ ಎನ್ನುವ ಹಿಂದಿನ ಹೇಳಿಕೆ ಬಗ್ಗೆ ಕೇಳಿದಾಗ, ” ನಾನು ಹೇಳಿದ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ತಿರುಚಿತ್ತು. ಮತ್ತೆ, ಮತ್ತೆ ಇದೇ ರೀತಿಯ ಕೆಲಸವನ್ನು ಮಾಡಲಾಗುತ್ತಿದೆ” ಎಂದರು.

ತಮಿಳುನಾಡು ಪ್ರತ್ಯೇಕ ದೇಶದ ದನಿ ಎತ್ತಿತ್ತು

“ಈ ಹಿಂದೆಯೇ ತಮಿಳುನಾಡಿನವರು ಪ್ರತ್ಯೇಕ ರಾಷ್ಟ್ರದ ದನಿ ಎತ್ತಿದ್ದರು. ನಾನು ರಾಜ್ಯಗಳ ಹಿತಾಸಕ್ತಿಗೆ ಧಕ್ಕೆ ತರಬಾರದು ಎಂದು ಮನವಿ ಮಾಡಿದ್ದೆ. ಕೇಂದ್ರ ಸರ್ಕಾರದ ಧೋರಣೆ ಸರಿಯಿಲ್ಲ. ಎಂದಿಗೂ ಕರ್ನಾಟಕವನ್ನು , ದಕ್ಷಿಣ ಭಾರತೀಯರನ್ನು ಕಡೆಗಣಿಸಬೇಡಿ. ನಾವು ಕೂಡ ಭಾರತ ಮಾತೆಯ ಮಕ್ಕಳು. ನಮ್ಮ ಮೇಲೆ ಮಲತಾಯಿ ಧೋರಣೆ ಸರಿಯಲ್ಲ” ಎಂದರು.

ಕರ್ನಾಟಕಕ್ಕೆ ಎಲ್ಲಾ ವಿಚಾರಗಳಲ್ಲಿ ವಿಜಯ ದೊರಕಲಿ

“ಮುಂದಿನ ದಿನಗಳಲ್ಲಿ ಕರ್ನಾಟಕ ಎಲ್ಲಾ ವಿಚಾರಗಳಲ್ಲೂ ವಿಜಯ ಸಾಧಿಸಲಿ. ತಾಯಿ ಭಾರತಾಂಬೆಯ ಮಡಿಲಲ್ಲಿ ನಾವಿದ್ದೇವೆ. ನಮ್ಮ ಕನ್ನಡಾಂಬೆ ಎಂದೆಂದಿಗೂ ವಿಜಯಪತಾಕೆಯನ್ನು ಹಾರಿಸಲಿ” ಎಂದು ಆಶಿಸುತ್ತೇನೆ” ಎಂದರು.

“ತಾಯಿ ಚಾಮುಂಡೇಶ್ವರಿ ಕರ್ನಾಟಕದ ಜನರ ಆಶೋತ್ತರಗಳನ್ನು ಈಡೇರಿಸುವ ಮುಖಾಂತರ ಭವಿಷ್ಯದಲ್ಲಿ ನಮ್ಮದು ಅಭಿವೃದ್ಧಿ ಹೊಂದಿದ ರಾಜ್ಯವಾಗಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯದ ಸಮಸ್ತ ಜನರಿಗೆ ವಿಜಯದಶಮಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ” ಎಂದರು.

Who is Noel Tata: ‘ಟಾಟಾ ಸಾಮ್ರಾಜ್ಯ’ದ ನೂತನ ಅಧ್ಯಕ್ಷರಾದ ‘ನೋಯೆಲ್ ಟಾಟಾ’ ಯಾರು? ಹಿನ್ನಲೆ ಏನು? ಇಲ್ಲಿದೆ ಡೀಟೆಲ್ಸ್ | New Tata Trusts Chairman

BREAKING: ಜಪಾನ್ ನ ‘ನಿಹಾನ್ ಹಿಡಾಂಕ್ಯೊ’ಗೆ ಪ್ರತಿಷ್ಠಿತ ‘2024ರ ನೊಬೆಲ್ ಶಾಂತಿ ಪ್ರಶಸ್ತಿ’ ಘೋಷಣೆ | 2024 Nobel Peace Prize

Share. Facebook Twitter LinkedIn WhatsApp Email

Related Posts

ಜನಸಾಮಾನ್ಯರಿಗೆ ಬಿಗ್ ಶಾಕ್ : ಪೆಟ್ರೋಲ್ ಜೊತೆ ಅಡುಗೆ ಎಣ್ಣೆ, ಅಕ್ಕಿ ಬೆಲೆಯೂ ಏರಿಕೆ | Rice Cooking oil prices Hike

2 Mins Read

ರಾಜ್ಯದ SC, ST ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಉಚಿತ ವಿಶೇಷ ತರಬೇತಿಗೆ ಅರ್ಜಿ ಆಹ್ವಾನ

2 Mins Read

GOOD NEWS : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ: ಸೌರಶಕ್ತಿ ಅಳವಡಿಸಿ, ಮಾಸಿಕ `ಕರೆಂಟ್ ಬಿಲ್’ ನಿಂದ ಮುಕ್ತಿ ಪಡೆಯಿರಿ!

1 Min Read
Recent News

ಜನಸಾಮಾನ್ಯರಿಗೆ ಬಿಗ್ ಶಾಕ್ : ಪೆಟ್ರೋಲ್ ಜೊತೆ ಅಡುಗೆ ಎಣ್ಣೆ, ಅಕ್ಕಿ ಬೆಲೆಯೂ ಏರಿಕೆ | Rice Cooking oil prices Hike

ಮೋದಿ ಯುಎಇ ಪ್ರವಾಸ ಯಶಸ್ವಿ: ಭಾರತದಲ್ಲಿ ₹41,000 ಕೋಟಿಗೂ ಅಧಿಕ ಹೂಡಿಕೆಗೆ ಯುಎಇ ಮುದ್ರೆ, ರಕ್ಷಣೆ ಮತ್ತು ಇಂಧನ ವಲಯದಲ್ಲಿ ಮಹತ್ವದ ಒಪ್ಪಂದ!

​ಚೀನಾ ಪ್ರವಾಸ ಅಭೂತಪೂರ್ವ ಯಶಸ್ಸು, ಇದೊಂದು ಐತಿಹಾಸಿಕ ಕ್ಷಣ: ಶ್ವೇತಭವನಕ್ಕೆ ಮರಳಿದ ಡೊನಾಲ್ಡ್ ಟ್ರಂಪ್ ಹರ್ಷ!

ರಾಜ್ಯದ SC, ST ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಉಚಿತ ವಿಶೇಷ ತರಬೇತಿಗೆ ಅರ್ಜಿ ಆಹ್ವಾನ

State News
KARNATAKA

ಜನಸಾಮಾನ್ಯರಿಗೆ ಬಿಗ್ ಶಾಕ್ : ಪೆಟ್ರೋಲ್ ಜೊತೆ ಅಡುಗೆ ಎಣ್ಣೆ, ಅಕ್ಕಿ ಬೆಲೆಯೂ ಏರಿಕೆ | Rice Cooking oil prices Hike

By kannadanewsnow57 KARNATAKA 2 Mins Read

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಬೆನ್ನಲ್ಲೇ…

ರಾಜ್ಯದ SC, ST ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಉಚಿತ ವಿಶೇಷ ತರಬೇತಿಗೆ ಅರ್ಜಿ ಆಹ್ವಾನ

GOOD NEWS : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ: ಸೌರಶಕ್ತಿ ಅಳವಡಿಸಿ, ಮಾಸಿಕ `ಕರೆಂಟ್ ಬಿಲ್’ ನಿಂದ ಮುಕ್ತಿ ಪಡೆಯಿರಿ!

ಡಿ.ಕೆ. ಶಿವಕುಮಾರ್ ಗೆ ಸ್ಪೆಷಲ್ ಬರ್ತ್ಡೇ ಗಿಫ್ಟ್ : ಡಿಸಿಎಂ ಕಲೆಕ್ಷನ್ ಸೇರಿತು ಹೊಚ್ಚಹೊಸ ‘ಯೆಜ್ಡಿ ರೋಡ್ಸ್ಟರ್’

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.