ರಾಯಚೂರು: ಡಿಸಿಎಂ ಡಿ.ಕೆ ಶಿವಕುಮಾರ್ ಟೆಂಪಲ್ ರನ್ ನಡೆಸುತ್ತಿದ್ದಾರೆ. ಈ ನಡುವೆ ಸಿಎಂ ಹುದ್ದೆಗಾಗಿ ಡಿ.ಕೆ ಶಿವಕುಮಾರ್ ಸಂಕಲ್ಪ ಮಾಡಿದ್ದಾರೆ ಎಂಬುದಾಗಿ ರಾಯಚೂರಿನ ಪಂಚಮುಖಿ ಆಂಜನೇಯ ದೇಗುಲದ ಅರ್ಚಕರೊಬ್ಬರು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಹುದ್ದೆಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಹುದ್ದೆಗಾಗಿ ಸಂಕಲ್ಪ ಮಾಡಿದ್ದಾರೆ ಎಂಬುದಾಗಿ ರಾಯಚೂರಿನ ಪಂಚಮುಖಿ ಆಂಜನೇಯ ದೇಗುಲದ ಅರ್ಚಕ ಶಾರ್ಮಾಚಾರ್ಯ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ನಾನು ಆಂಜನೇಯನ ಭಕ್ತ. ರಾಮನ ತಂದೆ ದಶರಥ ಮಹಾರಾಜ. ಎಲ್ಲೂ ದಶರಥ ಮಹಾರಾಜನ ದೇಗುಲ ಇಲ್ಲ. ಆದರೇ ರಾಮನ ಬಂಟ ಆಂಜನೇಯ. ಆಂಜನೇಯ ಸಮಾಜದ ಒಬ್ಬ ದೊಡ್ಡ ಸೇವಕ. ಸೇವಕನ ಪಾದಕ್ಕೆ ಪ್ರಾರ್ಥಿಸುವ ಅವಕಾಶ ಸಿಕ್ಕಿದೆ ಎಂದರು.