ಬೆಂಗಳೂರು: ನಾನು ಹೇಳ್ತಾ ಇದ್ದೀನಿ ಬಾಯಿಗೆ ಬೀಗ ಹಾಕೊಂಡು ಇದ್ದರೇ ಎಲ್ಲವು ಸರಿ ಇರುತ್ತದೆ ಅಂತ ಡಿ.ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ನಾವು ಮಾಡಿರುವ ಕೆಲಸಕ್ಕೆ ನಮಗೆ ಎಲ್ಲಾ ಸ್ಥಾನ ಮಾನಗಳು ಸಿಗಲಿದೆ ಅಂತ ಹೇಳಿದರು. ಇನ್ನೂ ಇಲ್ಲಿಗೆ ಎಲ್ಲವೂ ಮುಗಿಯಬೇಕು, ಸಿಎಂ, ಡಿಸಿಎಂ ಬಗ್ಗೆ ಮಾತನಾಡಿದರೆ ಅವರಿಗೆ ನೋಟಿಸ್ ನೀಡಲಾಗುತ್ತದೆ ಅಂಥ ಹೇಳಿದರು. ಇದಲ್ಲದೇ ಶಿಸ್ತಿನ ಕ್ರಮವನ್ನು ಕೈಗೊಳ್ಳಲಾಗುವುದು ಅಂಥ ಹೇಳಿದರು. ಪಾರ್ಟಿ ಅಧಿಕಾರಕ್ಕೆ ಬರಲು ಏನೆಲ್ಲ ಆಗಿದೆ ಅಂಥ ಅವರು ಹೇಳಿದರು.