ರಾಮನಗರ: ಡಿ.ಕೆ.ಶಿವಕುಮಾರ್ ಅವರೇ.. ನಿಮ್ಮ ಹಾಗೆ ಕಂಡ ಕಂಡ ಕಂಡ ಕಂಡಿದ್ದೆಲ್ಲವನ್ನೂ ಲೂಟಿ ಹೊಡೆದಿಲ್ಲ. ನಿಮ್ಮ ಹಾಗೆ ನಾನು ಎಲ್ಲಿಯೂ ಲೂಟಿ ಮಾಡಿಲ್ಲ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಮೈಸೂರು ಚಲೋ ಪಾದಯಾತ್ರೆಯ ಬೃಹತ್ ರೋಡ್ ಶೋ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಡದಿಯ ಕೇತಿಗಾನಹಳ್ಳಿ ಗ್ರಾಮದಲ್ಲಿರುವ ತಮ್ಮ ಜಮೀನು ಬಗ್ಗೆ ಉಲ್ಲೇಖ ಮಾಡಿದ ಕೇಂದ್ರ ಸಚಿವರು; ನಾನು ಚಲನಚಿತ್ರ ಡಿಸ್ಟ್ರಿಬ್ಯೂಟರ್ ಆಗಿದ್ದಾಗ ಚೈನಾ ಸಾಬ್ರು ಅಂತ ಇಬ್ಬರು ಇದ್ದರು. ನೀನು ದೇವೆಗೌಡರ ಮಗ, ಬೇಸಾಯ ಮಾಡಬೇಕು. ನೀನು ರೈತನಾಗಿ ಬಾಳಿ ಬದುಕಬೇಕು ಎಂದು ಹೇಳಿ ಕರೆದುಕೊಂಡು ಹೋಗಿ ಈ ಜಾಮೀನು ತೋರಿಸಿದರು. ಆ ಜಾಗ ನೋಡಿ ನಾನು. ನೀವು ನೋಡಿದ್ರೆ ಕಲ್ಲು ಹೊಡೆಯುವ ಜಾಗ ತೋರಿಸ್ತಿದ್ದೀರಲ್ಲ ಅಂದೆ. ಆಮೇಲೆ ಕಷ್ಟಪಟ್ಟು ಒಳ್ಳೆಯ ತೋಟ ಮಾಡಿದ್ದೇನೆ. ಯಾರು ಬೇಕಾದರೂ ಬಂದು ನೋಡಬಹುದು. ನನಗೆ ಆ ಜಾಮೀನು ಮಾರಿದ ಯಾರನ್ನು ನಾನು ಕೊಟ್ಟವರನ್ನು ಯಾರನ್ನು ಮರೆತಿಲ್ಲ, ಡಿ.ಕೆ.ಶಿವಕುಮಾರ್ ಅವರೇ.. ನಿಮ್ಮ ಹಾಗೆ ಕಂಡ ಕಂಡ ಕಂಡ ಕಂಡಿದ್ದೆಲ್ಲವನ್ನೂ ಲೂಟಿ ಹೊಡೆದಿಲ್ಲ ಅಂತ ಗುಡುಗಿದರು.
ಬೆಂಗಳೂರು ದಕ್ಷಿಣ ಎಂದು ಹೇಳಿಕೊಂಡು ಜನರನ್ನು ದಾರಿ ತಪ್ಪಿಸುವ ಕೆಲಸ ಸುರಿದಿದ್ದಾರೆ. ರಾಮನಗರ ಹೆಸರು ಕಿತ್ತು ಹಾಕಿದಾಕ್ಷಣ ಭೂಮಿ ಬೆಲೆ ಜಾಸ್ತಿ ಆಗುತ್ತದೆಯೇ? ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿಕೊಂಡು ಏನೆಲ್ಲಾ ಮಾಡುತ್ತೀದ್ದೀರಿ ಎನ್ನುವುದು ನನಗೆ ಗೊತ್ತಿದೆ. ಕನಕಪುರದಲ್ಲಿ ನೀವು ಲೋಕಸಭೆ ಚುನಾವಣೆಯಲ್ಲಿ ಎಷ್ಟು ಮತ ಪಡೆದಿರಿ. ಅಷ್ಟು ಮತ ಪಡೆಯೋಕೆ ನೀವು ಜನರಿಗೆ ಎಷ್ಟು ಹಿಂಸೆ ಕೊಟ್ಟಿದ್ದೀರಿ? ಎಲ್ಲರಿಗೂ ಗೊತ್ತಿದೆ ಎಂದು ನುಡಿದರು.
ನನ್ನ ತೆರಿಗೆ ನನ್ನ ಹಕ್ಕು; ಸಚಿವರ ಲೇವಡಿ
ಕೇಂದ್ರದಿಂದ ಏನೂ ಅನುದಾನ, ತೆರಿಗೆ ಪಾಲು ಕೊಡಲಿಲ್ಲ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದೀರಿ. ನನ್ನ ತೆರಿಗೆ, ನನ್ನ ಹಕ್ಕು ಅಂತ ಕೂಗಾಡಿದ್ದೂ, ಕೂಗಾಡಿದ್ದೆ. ಆದರೆ, ವಾಲ್ಮೀಕಿ ನಿಗಮದ ಹಣ ಏನು ಮಾಡಿದ್ರಪ್ಪಾ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
BREAKING: ನಾಪತ್ತೆಯಾಗಿದ್ದ ಕಾಂಗ್ರೆಸ್ ‘ಶಾಸಕ ಚನ್ನಾರೆಡ್ಡಿ’ ಸಿಎಂ ಕಾವೇರಿ ನಿವಾಸದಲ್ಲಿ ಪ್ರತ್ಯಕ್ಷ