ಬೆಂಗಳೂರು: ಖಾಸಗಿ ಕಾರ್ಯಕ್ರಮವೊಂದರಲ್ಲಿ ಡಿಸಿಎಂ ಶಿವಕುಮಾರ್ ಅವರು ಹೇಳಿದ್ದ ಹೇಳಿಕೆಗೆ ಸಂಬಂಧಪಟ್ಟತೆ ಹೇಳಿರುವ ಹೇಳಿಕೆಗೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ತಾಯಿಯ ಮೇಲೆ ಕಣ್ಣಿಡಬೇಕು ಅಂಥ ಹೇಳಿರುವ ಪರಮನೀಚನ ಬಗ್ಗೆ ನಾನು ಯಾಕೆ ಚರ್ಚೆ ಮಾಡಬೇಕು ಅಂತ ಹೇಳಿದರು. ಖಾಸಗಿ ವಾಹಿನಿಯೊಂದರಲ್ಲಿ ಭಾಗವಹಿಸಿದ್ದ ಮಾತನಾಡಿದ್ದ ಡಿಸಿಎಂ ಶಿವಕುಮಾರ್ ತಾಯಿ, ಹೆಂಡ್ತಿ ಮಕ್ಕಳ ಮೂರು ಜನರಲ್ಲಿ ಯವ್ವನ ಇದ್ದರೇ ಅವರ ಮೇಲೆ ಕಣ್ಣು ಇಡಬೇಕು ಅಂತ ಹೇಳಿದ್ದರು. ಇದು ಈಗ ಮತ್ತೆ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.