ಬೆಂಗಳೂರು :ಪೊಲೀಸ್ ಇಲಾಖೆಯ ಪಿಸಿ ಹಾಗೂ ಹೆಚ್‌ಸಿ ರವರುಗಳಿಗೆ NAVY BLUE PEAK CAP ಗಳನ್ನು ವಿತರಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸೆಬಲ್ ಮತ್ತು ಹೆಡ್ ಕಾನ್ಸಬಲ್ ರವರುಗಳಿಗೆ ನೀಡಲಾಗುತ್ತಿರುವ ಖಾಕಿ ಗ್ಲೋಚ್ ಹ್ಯಾಟ್ ಬದಲಿಗೆ NAVY BLUE PEAK CAP ಗಳನ್ನು ವಿತರಿಸುವ ಕುರಿತು ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಸಹಮತಿ ನೀಡಿ ಆದೇಶಿಸಲಾಗಿದೆ. ಅದರಂತೆ, ದಿನಾಂಕ: 28.10.2025 ರಂದು ನಡೆದ ಪೊಲೀಸ್ ಸಿಬ್ಬಂದಿಗಳ ಪೀಕ್-ಕ್ಯಾಪ್ ಪರಿಚಯಮತ್ತು ವಿತರಣೆ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಹಾಗೂ ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ NAVY BLUE PEAK CAP ಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. “ಸದರಿ ಸಮಾರಂಭದಲ್ಲಿ ಪೊಲೀಸ್ ಪ್ರಧಾನ ಕಛೇರಿ ವತಿಯಿಂದ 600 ಸಂಖ್ಯೆಯ ಪೀಕ್ ಕ್ಯಾಪ್ ಗಳನ್ನು ತಲಾ ಒಂದಕ್ಕೆ ರೂ.226/-(ತೆರಿಗೆ ಸೇರಿ) ಗಳ ವೆಚ್ಚದಲ್ಲಿ ಖರೀದಿಸಿ ವಿತರಿಸಲಾಗಿರುತ್ತದೆ.
ಸರ್ಕಾರದ ವತಿಯಿಂದ ನೀಡಿಲಾದ ಆದೇಶದಂತೆ, ಇಲಾಖೆಯ ಎಲ್ಲಾ ಪೊಲೀಸ್ ಕಾನ್ಸಬಲ್ ಮತ್ತು ಹೆಡ್ ಕಾನ್ಸೆಬಲ್ (ಪುರುಷ ಮತ್ತು ಮಹಿಳಾ ಸಿಬ್ಬಂದಿ ಒಳಗೊಂಡಂತೆ) ರವರುಗಳಿಗೆ ನೇವಿ ಬ್ಲೂ ಪೀಕ್ ಕ್ಯಾಪ್ ಗಳನ್ನು ವಿತರಿಸಬೇಕಾಗಿರುತ್ತದೆ. ಆದ್ದರಿಂದ, ಎಲ್ಲಾ ಪೊಲೀಸ್ ಆಯುಕ್ತರು, ಜಂಟಿ ಆಯುಕ್ತರು, ಉಪ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ಅಧೀಕ್ಷಕರುಗಳು, ಕಮಾಂಡೆಂಟ್ ರವರು, ಪ್ರಾಂಶುಪಾಲರು ಹಾಗೂ ನಿರ್ದೇಶಕರು, ಕೆಪಿಎ, ಮೈಸೂರು ರವರುಗಳು ತಮ್ಮ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ವಿತರಿಸಬೇಕಾಗಿರುವ ಕ್ಯಾಪ್‌ಗಳನ್ನು ತಮ್ಮ ವತಿಯಿಂದಲೇ ಖರೀದಿಸಲು ಕೆಟಿಪಿಪಿ ಅಧಿನಿಯಮ 1999 ನಿಯಮ 2000 ಅನ್ನು ಅನುಸರಿಸಿ ಖರೀದಿ ಪ್ರಕ್ರಿಯೆ ಕೈಗೊಂಡು ಸರ್ಕಾರದ ಆದೇಶ ಸಂಖ್ಯೆ:ಹೆಚ್‌ಡಿ 171 ಇಎಫ್‌ಎಸ್ 2010, ದಿನಾಂಕ: 03.01.2012 ಕ್ರ.ಸಂ.6 (Item No. 35) ರಲ್ಲಿನ ಆರ್ಥಿಕ ವಿತ್ತಾಧಿಕಾರದನ್ವಯ (ಪ್ರತಿ ಲಗತ್ತಿಸಿದೆ) ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಯಿಂದ ಮಂಜೂರಾತಿ ಪಡೆಯುವಂತೆ ನಿರ್ದೇಶಿಸಲಾಗಿದೆ. (ಈ ಕಛೇರಿ ವತಿಯಿಂದ ನೇವಿ ಬ್ಲ್ಯೂ ಪೀಕ್ ಕ್ಯಾಪ್ ಅನ್ನು ರೂ.226/- (ತೆರಿಗೆ ಸೇರಿ ತಲಾ ಒಂದಕ್ಕೆ) ಖರೀದಿಸಿದ ಮೊತ್ತದ ಮಿತಿಯೊಳಗೆ ಖರೀದಿಸುವುದು)
ಪೀಕ್ ಕ್ಯಾಪ್‌ಗಳ ಖರೀದಿಗೆ ತಗಲುವ ವೆಚ್ಚಕ್ಕೆ ಸಂಬಂಧಿಸಿದಂತೆ “ಲೆಕ್ಕ ಶೀರ್ಷಿಕೆ -221 ಸಾಮಗ್ರಿ ಮತ್ತು ಸರಬರಾಜು” ಅಡಿಯಲ್ಲಿ ಅನುದಾನ ಕೋರಿ ಬೇಡಿಕೆ ಪತ್ರವನ್ನು ಸಲ್ಲಿಸಿದ್ದಲ್ಲಿ, ಅನುದಾನವನ್ನು ಸಂಬಂಧಪಟ್ಟ ಘಟಕಾಧಿಕಾರಿಗಳಿಗೆ ಕೂಡಲೇ ಬಿಡುಗಡೆ ಮಾಡಲು ಪ್ರಧಾನ ಕಛೇರಿಯಿಂದ ಕ್ರಮ ಕೈಗೊಳ್ಳಲಾಗುವುದು.
NAVY BLUE PEAK CAP ನ ಮಾದರಿ ಹಾಗೂ ತಾಂತ್ರಿಕ ನಿರ್ದಿಷ್ಟತೆಯನ್ನು ಖರೀದಿ ಪ್ರಕ್ರಿಯೆ ಕೈಗೊಳ್ಳುವ ಘಟಕಾಧಿಕಾರಿಗಳಿಗೆ ಈ ಸುತ್ತೋಲೆಯೊಂದಿಗೆ ಕಳುಹಿಸಿಕೊಡಲಾಗಿದೆ. ಸದರಿ ಮಾದರಿ ಹಾಗೂ ತಾಂತ್ರಿಕ ನಿರ್ದಿಷ್ಠತೆಯಂತೆಯೇ ಕಟ್ಟುನಿಟ್ಟಾಗಿ ಖರೀದಿಸಲು ಕೂಡಲೇ ಅಗತ್ಯ ಕ್ರಮ ಕೈಗೊಂಡು ಪೀಕ್ ಕ್ಯಾಪ್‌ಗಳನ್ನು ಪೊಲೀಸ್ ಸಿಬ್ಬಂದಿಗಳಿಗೆ ವಿತರಿಸಿ, 30 ದಿನಗಳೊಳಗಾಗಿ ಪಾಲನ ವರದಿಯನ್ನು ಈ ಕಛೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.









