ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸದನಕ್ಕೆ ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡುತ್ತಿದ್ದಾರೆ.
ಇಂದು ವಿಧಾನಸಭೆಯಲ್ಲಿ ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ವೇಳೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸದಸ್ಯರು ಕೇಳಿದಂತ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಧರ್ಮಸ್ಥಳ ಪ್ರಕರಣದ ಬಗ್ಗೆ ಇಂದು ಇಡೀ ದೇಶ ಗಮನಿಸುತ್ತಿದೆ. ಧರ್ಮಸ್ಥಳ ಠಾಣೆಗೆ ಹೋಗಿ ಓರ್ವ ದೂರು ಕೊಟ್ಟಿದ್ದನು. ನನಗೆ ನಿರಂತರ ಜೀವ ಬೆದರಿಕೆವೊಡ್ಡಿ ಶವ ಹೂತಿದ್ದ ಬಗ್ಗೆ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಅಪರಿಚಿತ ದೂರು ಕೊಟ್ಟಿದ್ದನು. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಸಹ ಕೇಳಿದ್ದನು ಎಂದರು.
ಈ ಹಿನ್ನಲೆಯಲ್ಲಿ ಪೊಲೀಸರು ನ್ಯಾಯಾಧೀಶರ ಮುಂದೆ ಆತನನ್ನು ಹಾಜರುಪಡಿಸಿ 164ರಡಿ ಹೇಳಿಕೆ ದಾಖಲಿಸಿದ್ದರು. ಬಳಿಕ ನ್ಯಾಯಾಧೀಶರು ತನಿಖೆಗೆ ಸೂಚಿಸಿದ್ದರು. ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು ತನಿಖೆ ಕೈಗೊಂಡಿದ್ದರು. ಆ ನಂತ್ರ ಎಸ್ಐಟಿ ರಚಿಸುವಂತೆ ಮಹಿಳಾ ಆಯೋಗ ಪತ್ರ ಬರೆದಿತ್ತು. ಎಸ್ಐಟಿ ಏಕೆ ರಚಿಸಬೇಕೆಂದೂ ಮಹಿಳಾ ಆಯೋಗ ಪತ್ರದಲ್ಲಿ ಉಲ್ಲೇಖಿಸಿತ್ತು ಎಂದರು.
ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಬಗ್ಗೆ ಎಸ್ಐಟಿ ರಚಿಸಲು ಮಹಿಳಾ ಆಯೋಗ ಕೋರಿತ್ತು. ಇದಾದ ಬಳಿಕ ನಾನು, ಮುಖ್ಯಮಂತ್ರಿ ಸಿದ್ಧರಾಮಯ್ಯ ಎಸ್ಐಟಿ ರಚನೆಗೆ ಆದೇಶ ನೀಡಿದ್ದೆವು. ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿತ್ತು ಎಂಬುದಾಗಿ ಸದನಕ್ಕೆ ಗೃಹ ಸಚಿವ ಪರಮೇಶ್ವರ್ ಉತ್ತರಿಸಿದರು.
ಉತ್ಖನನಕ್ಕೂ ಮುನ್ನ ಅಪರಿಚಿತನಿಂದ ಎಸ್ಐಟಿ ಹೇಳಿಕೆ ಪಡೆದಿತ್ತು. ಅಪರಿಚಿತನಿಂದ ಹೇಳಿಕೆ ಪಡೆದ ಬಳಿಕ ಮ್ಯಾಪಿಂಗ್ ಮಾಡಲಾಗಿತ್ತು. ಉತ್ಖನನ ನಡೆಸಿದ ಪೈಕಿ ಎರಡು ಜಾಗದಲ್ಲಿ ಅಸ್ಥಿಪಂಜರ, ಮೂಳೆ, ಬುರುಡೆ ಪತ್ತೆಯಾಗಿದೆ. ಒಂದು ಜಾಗದಲ್ಲಿ ಅಸ್ಥಿಪಂಜರ ಸಿಗುತ್ತೆ, ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಮತ್ತೊಂದು ಜಾಗದಲ್ಲಿ ಮೂಳೆ, ಬುರುಡೆ ಪತ್ತೆಯಾಗಿದ್ದವು. ಮೂಳೆ ಹಾಗೂ ಬುರುಡೆಗಳನ್ನು ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಇನ್ನೂ ತನಿಖೆಯೇ ಆರಂಭವಾಗಿಲ್ಲ ಎಂದರು.
ಅಪರಿಚಿತ ಸೂಚಿಸಿದ ಜಾಗದಲ್ಲಿ ಉತ್ಖನನ ನಡೆಸಲಾಗಿದೆ. ಉತ್ಖನನ ನಡೆಸಿ ಸಿಕ್ಕ ಅಸ್ಥಿಪಂಜರ, ಮೂಳೆ, ಬುರುಡೆ, ಎಫ್ಎಸ್ಎಲ್ ಗೆ ರವಾನಿಸಿದ್ದೇವೆ. ಇನ್ನೂ ತನಿಖೆ ನಡೆಸಬೇಕಿದೆ. ಸಿಕ್ಕ ಮೂಳೆಗಳ ಬಗ್ಗೆ, ಸಾಯಿಲ್ ಬಗ್ಗೆ ತನಿಖೆ ನಡೆಸಬೇಕಿದೆ. ನಾವು ಯಾವುದೇ ಒತ್ತಡಕ್ಕೆ ಮಣಿದು ಎಸ್ಐಟಿ ರಚಿಸಿಲ್ಲ. ಯಾವುದೇ ಕಾರಣಕ್ಕೂ ನಾವು ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ. ಸತ್ಯವನ್ನು ಹೊರ ತರುವುದೇ ನಮ್ಮ ಉದ್ದೇಶವಾಗಿದೆ. ಆತ ಹೇಳಿದಂತ ಪ್ರತಿಯೊಂದು ವಿಚಾರವನ್ನು ತನಿಖೆ ಮಾಡುವಂತ ಕೆಲಸ ಮಾಡಲಾಗುತ್ತಿದೆ ಎಂದರು.
ಔಷಧಿ ಪ್ಯಾಕೆಟ್ ಮೇಲೆ `ಕೆಂಪು ಗೆರೆ’ ಏಕೆ ಇರುತ್ತೆ ಗೊತ್ತಾ? ಏನಿದರ ಅರ್ಥ ತಿಳಿಯಿರಿ.!.
BREAKING : ‘CM‘ ವಿರುದ್ಧ ಕೊಲೆ ಆರೋಪ : ಮಹೇಶ್ ತಿಮರೋಡಿ ವಿರುದ್ಧ `FIR’ ದಾಖಲು.!