ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಸಿಡಿದೆದ್ದಿರುವಂತ ದಿಂಗಾಲೇಶ್ವರಶ್ರೀಗಳು, ಇಂದು ಅಧಿಕರೃತವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಮೆರವಣಿಗೆ ಇಲ್ಲದೇ ಸಾಂಕೇತಿಕವಾಗಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದಂತ ದಿಂಗಾಲೇಶ್ವರ ಶ್ರೀಗಳು, ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಕೇವಲ ನಾಲ್ವರು ಬೆಂಬಲಿಗರೊಂದಿಗೆ ಆಗಮಿಸಿ, ಧಾರವಾಡದ ಡಿಸಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ದಿಂಗಾಲೇಶ್ವರ ಶ್ರೀಗಳು ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಈ ಬಳಿಕ ಮೆರವಣಿಗೆ ಸ್ಥಳಕ್ಕೆ ತೆರಳಿದಂತ ಅವರು, ಧಾರವಾಡದ ಕಾರ್ಪೋರೇಷನ್ ವೃತ್ತದಿಂದ ದಿಂಗಾಲೇಶ್ವರ ಶ್ರೀಗಳು ಮೆರವಣಿಗೆಯಲ್ಲಿ ಆಗಮಿಸಿದರು. ಮೆರವಣಿಗೆ ಮೂಲಕ ಮತ್ತೆ ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರವನ್ನು ಸಲ್ಲಿಕೆ ಮಾಡಿದರು.
15 ನಿಮಿಷ ನಡೆದು, ಆನಂತ್ರ ಮೆರವಣಿಗೆಯಲ್ಲಿ ಸಾಗಿ ಬಂದ ಅವರೊಂದಿಗೆ 200ಕ್ಕೂ ಹೆಚ್ಚು ಬೆಂಬಲಿಗರು ಇದ್ದರು. ಈ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ದಿಂಗಾಲೇಶ್ವರಶ್ರೀಗಳು ನಾಮಪತ್ರವನ್ನು ಸಲ್ಲಿಸಿದರು.
BREAKING: ತುಮಕೂರಲ್ಲಿ ರಾಮನವಮಿ ಮಜ್ಜಿಗೆ ಸೇವಿಸಿದ 45ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
BREAKING: ಇವಿಎಂ-ವಿವಿಪ್ಯಾಟ್ ಪರಿಶೀಲನೆ ಪ್ರಕ್ರಿಯೆ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ