ನವದೆಹಲಿ : ಟೀಂ ಇಂಡಿಯಾ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಆಗಿರುವ ದಿನೇಶ್ ಕಾರ್ತಿಕ್, ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮೂಲಕ ನಿವೃತ್ತಿಯ ಸುಳಿವು ನೀಡಿದ್ದಾರೆ.

ಅಂದ್ಹಾಗೆ, ವಿಶ್ವಕಪ್ಗೂ ಮುನ್ನವೇ ಕಾರ್ತಿಕ್ಗೆ ಇದು ಕೊನೆಯ ವಿಶ್ವಕಪ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಕಾರ್ತಿಕ್ ಬುಧವಾರ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋವನ್ನ ಹಂಚಿಕೊಳ್ಳುವ ಮೂಲಕ ಇದನ್ನ ಸೂಚಿಸಿದ್ದಾರೆ. ನಿವೃತ್ತಿ ತೆಗೆದುಕೊಳ್ಳುವುದಾಗಿ ಸ್ಪಷ್ಟವಾಗಿ ಹೇಳಿಲ್ಲ. ಆದ್ರೆ, ಅವರ ಪೋಸ್ಟ್ನಿಂದ ಅಭಿಮಾನಿಗಳು ಇದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ.

ವಿಶ್ವಕಪ್ನ ಆರಂಭಿಕ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಆಡುವ XI ನಲ್ಲಿ ಅವಕಾಶ ನೀಡಲಾಯಿತು. ಆದರೂ ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ಇದರ ನಂತರ, ಇಂಗ್ಲೆಂಡ್ ವಿರುದ್ಧದ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಅವರ ಸ್ಥಾನಕ್ಕೆ ರಿಷಬ್ ಪಂತ್ ಅವರನ್ನ ಬದಲಾಯಿಸಲಾಯಿತು. ಕಾರ್ತಿಕ್ಗೆ 37 ವರ್ಷ ವಯಸ್ಸಾಗಿದ್ದು, ಮುಂದಿನ ವಿಶ್ವಕಪ್ನಲ್ಲಿ ಆಡುತ್ತಾರೆ ಎಂಬ ಭರವಸೆ ಈಗ ಕಡಿಮೆಯಾಗಿದೆ. ಕಾರ್ತಿಕ್ ನಿವೃತ್ತಿ ಸೂಚನೆಯನ್ನೂ ನೀಡಿದ್ದಾರೆ.

 

‘ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (CET)-2022’ ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನ, ಈಗಲೇ ಅರ್ಜಿ ಸಲ್ಲಿಸಿ!

ಹೋಟೆಲ್ ಆಹಾರ ಪ್ರಿಯರಿಗೆ ಗುಡ್ ನ್ಯೂಸ್: ಹಾಲು, ಮೊಸರಿನ ದರ ಏರಿಕೆಯಾದ್ರೂ, ಉಪಹಾರಗಳ ದರ ಹೆಚ್ಚಳವಿಲ್ಲ

BIG NEWS: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೊಣೆ ಹೊತ್ತ ಉಗ್ರರ ಸಂಘಟನೆ ಪೋಸ್ಟರ್ ವೈರಲ್

Share.
Exit mobile version