ಬೆಂಗಳೂರು:ಬಿಬಿಎಂಪಿಯ ಆರ್ ಆರ್ ನಗರ ವ್ಯಾಪ್ತಿಯಲ್ಲಿ ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್ ವೇಳೆ ಅಕ್ರಮ ಮಾಡಲು ಮುಂದಾದ ಅಧಿಕಾರಿ ಹಾಗೂ ಅಕ್ರಮ ಆಸ್ತಿಯ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
BREAKING : ಮಾಜಿ ಪಿಎಂ HD ದೇವೇಗೌಡ ಸಂಪೂರ್ಣ ಗುಣಮುಖ : ಆಸ್ಪತ್ರೆಯಿಂದ ಬಿಡುಗಡೆ
ಆರ್ ಆರ್ ನಗರ ವಲಯದಲ್ಲಿನ ಉಪ ವಿಭಾಗದ ಸಹ ಕಂದಾಯ ಅಧಿಕಾರಿ ಕಚೇರಿಯಲ್ಲಿ ಎಫ್ ಡಿಎ
ಓಂಕಾರಮೂರ್ತಿ, ವಾರ್ಡ್ ನಂ.160ರಲ್ಲಿನ ಹಲಗೆವಡೇರಹಳ್ಳಿಯಲ್ಲಿ ‘ಎ’ರಿಜಿಸ್ಟರ್ ಪುಸ್ತಕ ಡಿಜಿಟಲ್ ಸ್ಕ್ಯಾನಿಂಗ್ ಮಾಡುವ ಸಂದರ್ಭದಲ್ಲಿ ಅಕ್ರಮವಾಗಿ ವ್ಯಕ್ತಿಯೊಬ್ಬರ ಆಸ್ತಿ ವಿವರವನ್ನು ನಮೂದು ಮಾಡಿ ಸಿಕ್ಕಿ ಬಿದ್ದಿದ್ದಾರೆ.
BREAKING: ಬೆಂಗಳೂರಿನ ಪರ್ಫ್ಯೂಮ್ ಫ್ಯಾಕ್ಟರಿ ಅಗ್ನಿ ಅವಘಡ, ಮೂವರು ಸಜೀವ ದಹನ!
ಈ ಅಕ್ರಮದ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಅವರ ವಿರುದ್ಧ ಫೆ.14ರಂದು ಎಆರ್ ಒ ಅರುಣ್ ಕುಮಾರ್ ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಡಿಎ ಓಂಕಾರಮೂರ್ತಿ ಹಾಗೂ ಅಕ್ರಮ ನಮೂದಾದ ಆಸ್ತಿ ಮಾಲೀಕ ಯತಿನ್ ಗೌತಮ್ ವಿ ವಿರುದ್ಧ ದೂರು ದಾಖಲಿಸಿದ್ದಾರೆ.
2023ರ ನವೆಂಬರ್ ತಿಂಗಳಿನಿಂದ ಆರ್.ಆರ್.ನಗರ ಕಛೇರಿಯಲ್ಲಿ, ಆಸ್ತಿ ವಹಿಗಳನ್ನು ಕಂಪ್ಯೂಟರೈಸ್ ಮಾಡುವ ಸಲುವಾಗಿ ಎಲ್ಲಾ ವಹಿಗಳನ್ನು ಕಂಪ್ಯೂಟರ್ನಲ್ಲಿ ಸ್ಕ್ಯಾನ್ ಮಾಡುವ ಕಾರ್ಯ ಪ್ರಾರಂಭ ಮಾಡಲಾಗಿತ್ತು. ಹಲಗೆವಡೇರಹಳ್ಳಿ, ಗ್ರಾಮಕ್ಕೆ ಸಂಬಂಧಿಸಿದ ‘ಎ’ ಖಾತಾ ವಹಿ ಪುಸ್ತಕವನ್ನು ಸ್ಕ್ಯಾನ್ ಮಾಡಲಾಗಿದ್ದು ಆ ಸಮಯದಲ್ಲಿ, ವ್ಯಾಲ್ಯೂಮ್ ನಂ. 38ರ ‘ಎ’ ಖಾತಾ ಪುಸ್ತಕ ವಹಿಯಲ್ಲಿ ಪುಟ ಸಂಖ್ಯೆ 122 ನ್ನು ಸ್ಕ್ಯಾನ್ ಮಾಡಲಾಗಿದ್ದು, ಅದರಲ್ಲಿ ಕ್ರ.ಸಂ. 7361 ರಲ್ಲಿ, ಕಿರಣಾಜ್ ಹೆಸರು ಇದ್ದು, ಕ್ರ.ಸಂ. 7362 ರಲ್ಲಿ, ಯಾವುದೇ ಹೆಸರು ದಾಖಲಾಗಿರಲಿಲ್ಲ. ಆದರೆ ಅದರ ಕೆಳಭಾಗ ಕ್ರ.ಸಂ. 7363 ರಲ್ಲಿ, ಆದಿ ನಾರಾಯಣಶೆಟ್ಟಿ, ನಟರಾಜ್ ರವರ ಹೆಸರು ನಮೂದಾಗಿರುತ್ತದೆ.
ಕ್ರ.ಸಂ. 7362 ರಲ್ಲಿ, ಯಾವುದೇ ಹೆಸರು ದಾಖಲಾಗಿರದ ಕಾರಣ ಇದನ್ನೇ ಬಂಡವಾಳ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರಾಗಿ ಹಾಗೂ ವಾರ್ಡ್ ನಂ. 160 ರ ವಿಷಯ ನಿರ್ವಾಹಕರಾಗಿದ್ದ ಓಂಕಾರಮೂರ್ತಿ, ಕ್ರ.ಸಂ. 7362 ರಲ್ಲಿ ಖಾಲಿ ಇದ್ದ ಸ್ಥಳದಲ್ಲಿ 66/1 ಹಾಗೂ 9/5 ಎಂಬ, 40*60 ಅಳತೆಯ ನಿವೇಶನದ ವಿವರ ಹಾಗೂ ಅದರ ಆಸ್ತಿ ಮಾಲೀಕ ಯತಿನ್ ಗೌತಮ್ ವಿ. ಎಂಬುದಾಗಿ ನಮೂದಿಸಿದ್ದರು. ಫೆ.12ರಂದು ಎಆರ್ ಒ ಅರುಣ್ ಕುಮಾರ್ ಪರಿಶೀಲನೆ ನಡೆಸಿದಾಗ ಈ ಅಕ್ರಮ ಗಮನಕ್ಕೆ ಬಂದಿದೆ.
ಹೀಗಾಗಿ ಎಆರ್ ಒ ಅರುಣ್ ಕುಮಾರ್, “ಸರ್ಕಾರಿ ಕಡತವನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ ಯಾವುದೇ ನಿಯಮಗಳನ್ನು ಪಾಲಿಸದೆ ಯತಿನ್ ಗೌತಮ್ ವಿ, ಎಂಬಾತನ ಜೊತೆ ಸೇರಿಕೊಂಡು ಸರ್ಕಾರಿ ಕಡತದಲ್ಲಿ, ಆತನ ಹೆಸರನ್ನು ಅಕ್ರಮವಾಗಿ ಉಲ್ಲೇಖಿಸಿ ಯಾವುದೇ ದಾಖಲಾತಿಗಳನ್ನು ಪಡೆದು ಕಡತದಲ್ಲಿ ಇಟ್ಟುಕೊಳ್ಳದೇ ವಂಚನೆ ಮತ್ತು ಮೋಸ ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.