ನವದೆಹಲಿ : ದೇಶಾದ್ಯಂತ ಪಿಂಚಣಿದಾರರ ವಿಶೇಷ ಅಭಿಯಾನದ ಸಮಯದಲ್ಲಿ ಒಂದು ತಿಂಗಳಲ್ಲಿ ಒಂದು ಕೋಟಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLC)ಗಳನ್ನು ರಚಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ತಿಳಿಸಿದ್ದಾರೆ. ಈ ಅಭಿಯಾನವನ್ನ 2024ರ ನವೆಂಬರ್ 1ರಿಂದ ನವೆಂಬರ್ 30ರವರೆಗೆ ದೇಶಾದ್ಯಂತ 800 ನಗರಗಳು ಮತ್ತು ಪಟ್ಟಣಗಳಲ್ಲಿ ನಡೆಸಲಾಗುತ್ತಿದೆ.
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಕ್ಯಾಂಪೇನ್ 3.0 ಗೆ ಚಾಲನೆ.!
ಈ ತಿಂಗಳ ಆರಂಭದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಪಿಂಚಣಿದಾರರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಯನ್ನ ಎದುರಿಸದಂತೆ ಡಿಜಿಟಲ್ ಸಬಲೀಕರಣಗೊಳಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಪಿಂಚಣಿದಾರರಿಗೆ ದೊಡ್ಡ ಸಾಧನೆ.!
ಡಿಜಿಟಲ್ ಲೈಫ್ ಸರ್ಟಿಫಿಕೇಟ್’ನ ಈ ಅಭಿಯಾನವು ಪಿಂಚಣಿದಾರರು ಮತ್ತು ಹಿರಿಯ ನಾಗರಿಕರಿಗೆ ಬಹಳ ಅನುಕೂಲಕರವೆಂದು ಸಾಬೀತಾಗಿದೆ ಎಂದು ಸಚಿವರು ಹೇಳಿದರು. ಈಗ ಪಿಂಚಣಿದಾರರು ಬ್ಯಾಂಕಿಗೆ ಹೋಗುವ ಅಗತ್ಯವಿಲ್ಲ. ಈ ಸೌಲಭ್ಯವು ಪಿಂಚಣಿದಾರರ ಜೀವನವನ್ನ ಸರಾಗಗೊಳಿಸಿದೆ ಮಾತ್ರವಲ್ಲದೆ ತಾಂತ್ರಿಕ ಸಮಸ್ಯೆಗಳನ್ನ ಎದುರಿಸಬೇಕಾಗಿಲ್ಲ.
ಪ್ರಧಾನಿ ಮೋದಿ ಅವರ ದೂರದೃಷ್ಟಿ.!
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ‘ಮನ್ ಕಿ ಬಾತ್’ ನ 116 ನೇ ಸಂಚಿಕೆಯಲ್ಲಿ, ಪಿಂಚಣಿದಾರರು ಈಗ ಡಿಜಿಟಲ್ ಜೀವನ ಪ್ರಮಾಣಪತ್ರಗಳ ಮೂಲಕ ತಮ್ಮ ಪಿಂಚಣಿಯನ್ನು ಸುಲಭವಾಗಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು. ಈ ಉಪಕ್ರಮದ ಅಡಿಯಲ್ಲಿ, 80 ವರ್ಷಕ್ಕಿಂತ ಮೇಲ್ಪಟ್ಟ 2 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಸೇರಿದಂತೆ 80 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣಪತ್ರಗಳನ್ನ ಪಡೆದಿದ್ದಾರೆ.
Israel-Lebanon Ceasefire : ಇಸ್ರೇಲ್-ಹಿಜ್ಬುಲ್ಲಾ ಕದನ ವಿರಾಮ ಸ್ವಾಗತಿಸಿದ ಭಾರತ ; ಹೇಳಿದ್ದೇನು ಗೊತ್ತಾ?