ಬೆಂಗಳೂರು: ನಿಮ್ಮ ಕನ್ನಡ ನ್ಯೂಸ್ ನೌ ನಿನ್ನೆಯಂದು ‘KPTCL ಕಿರಿಯ ಇಂಜಿನಿಯರ್’ ವರ್ಗಾವಣೆಯಲ್ಲಿ ‘ಮಹಾ ಎಡವಟ್ಟು’: ಒಂದೇ ಹುದ್ದೆಗೆ ‘7 ಜೆಇ’ ನೇಮಕ ಎಂಬುದಾಗಿ ಸುದ್ದಿಯೊಂದನ್ನು ಪ್ರಕಟಿಸಿತ್ತು. ವೈರಲ್ ಸುದ್ದಿಯ ಹಿನ್ನಲೆಯಲ್ಲಿ ಈ ಸುದ್ದಿ ಪ್ರಕಟಿಸಿದ ನಂತ್ರ, ಕೆಪಿಟಿಸಿಎಲ್ ಹಿರಿಯ ಅಧಿಕಾರಿಗಳು ಕರೆ ಮಾಡಿ, ಅದರ ವಾಸ್ತವ ಸತ್ಯ ಸಂಗತಿ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ. ಹಾಗಾದ್ರೆ ಒಂದೇ ಹುದ್ದೆಗೆ ಕೆಪಿಟಿಸಿಎಲ್ ನಿಂದ 7 ಕಿರಿಯ ಇಂಜಿನಿಯರ್ ವರ್ಗಾವಣೆ ಮಾಡಿದೆ ಎನ್ನುವ ವೈರಲ್ ಸುದ್ದಿಯ ಅಸಲಿ ಸತ್ಯ ಏನು ಅಂತ ಮುಂದೆ ಓದಿ.
ದಿನಾಂಕ 31-07-2024ರಂದು ಕೆಪಿಟಿಸಿಎಲ್ ನಿಂದ 226 ಕಿರಿಯ ಇಂಜಿನಿಯರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಈ ವರ್ಗಾವಣೆ ಆದೇಶದಲ್ಲಿ ಮಹಾ ಎಡವಟ್ಟು ಮಾಡಿದೆ. ಒಂದೇ ಹುದ್ದೆಗೆ 7 ಕಿರಿಯ ಇಂಜಿನಿಯರ್ ನೇಮಕ ಮಾಡಿದೆ ಎಂಬುದಾಗಿ ತಿಳಿದು ಬಂದಿತ್ತು. ಇದಷ್ಟೇ ಅಲ್ಲದೇ ಕನಿಷ್ಠ 4 ವರ್ಷ ಗ್ರೂಪ್-ಸಿ ಪದವೃಂದದ ನೌಕರರು ಆ ಹುದ್ದೆಯಲ್ಲಿ ಕೆಲಸ ಮಾಡಿದ್ದರೇ ಮಾತ್ರವೇ ವರ್ಗಾವಣೆ ಮಾಡಲು ಅರ್ಹರಿರುತ್ತಾರೆ ಎಂದು ಷರತ್ತು ವಿಧಿಸಿ ತಿಳಿಸಿತ್ತು. ಆದರೇ 1 ವರ್ಷಕ್ಕಿಂತ ಹೆಚ್ಚು ಅವಧಿಗೆ ಕಾರ್ಯನಿರ್ವಹಿಸಿದ್ದಂತ ಜೆಇ ಹುದ್ದೆಗೆ ಮತ್ತೊಬ್ಬರನ್ನು ವರ್ಗಾವಣೆಯನ್ನು ಮಾಡಲಾಗಿದೆ ಎನ್ನಲಾಗಿತ್ತು. ಆ ಎಲ್ಲದಕ್ಕೂ ಕೆಪಿಟಿಸಿಎಲ್ ಉನ್ನತ ಮೂಲಗಳ ಕ್ಲಾರಿಫಿಕೇಷನ್ ಈ ಕೆಳಗಿನಂತಿದೆ.
ಹೀಗಿದೆ ಕೆಪಿಟಿಸಿಎಲ್ ಸಂಪೂರ್ಣ ಸ್ಪಷ್ಟನೆ
ಕೆಪಿಟಿಸಿಎಲ್ 226 ವರ್ಗಾವಣೆಯ ಪಟ್ಟಿ ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಅದರಲ್ಲಿ ಯಾವುದೇ ಎಡವಟ್ಟಿಲ್ಲ. ವರ್ಗಾವಣೆಯ ಅಧಿಕೃತ ಜ್ಞಾಪನ ಸುತ್ತೋಲೆಯಲ್ಲಿ ಮೊದಲು ಕ್ರಮ ಸಂಖ್ಯೆ. ಆನಂತ್ರ ನೌಕರರು ಹೆಸರು ಮತ್ತು ಪದನಾಮ, ಬಳಿಕ ಅವರು ಸದ್ಯ ಕಾರ್ಯನಿರ್ವಹಿಸುತ್ತಿರುವ ಸ್ಥಳ, ಹಾಗೆ ಅವರನ್ನು ವರ್ಗಾವಣೆಗೆ ಅನುಮತಿ ನೀಡಲಾಗಿರುವಂತ ವೃತ್ತವನ್ನು ನಮೂದಿಸಲಾಗಿದೆ. ಇದಾದ ಬಳಿಕ ಅಂತಹ ನೌಕರರು ವರ್ಗಾವಣೆಗೆ ಎಲ್ಲಿಗೆ ಕೋರಿದ್ದಾರೆ ಎಂಬುದನ್ನು ತಿಳಿಸಲಾಗಿದೆ. ಆದರೇ ಅವರನ್ನು ಆ ಕೋರಿರುವ ಸ್ಥಳಕ್ಕೆ ವರ್ಗಾವಣೆ ಮಾಡಿಲ್ಲ. ಇದೇ ವರ್ಗಾವಣೆ ಪಟ್ಟಿಯಲ್ಲಿ ಎಡವಟ್ಟು ಎನ್ನುವ ಗೊಂದಲಕ್ಕೂ ಕಾರಣವಾಗಿತ್ತು ಎಂದಿದೆ.
ಹಾಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಕಿರಿಯ ಇಂಜಿನಿಯರ್ ಗಳನ್ನು ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ರಾಯಚೂರು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ ಕಾರ್ಯ ಮತ್ತು ಪಾಲನ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಆದರೇ ಅವರು ವರ್ಗಾವಣೆ ಕೋರಿರುವಂತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿಲ್ಲ. ಹೀಗೆ ಆ ಸ್ಥಳಕ್ಕೆ ಕೋರಿದ್ದಾರೆ. ಖಾಲಿ ಇದ್ದರೇ ಅಲ್ಲಿಗೆ ಪೋಸ್ಟಿಂಗ್ ನೀಡುವಂತೆ ಆಯಾ ಜಿಲ್ಲಾ ವಿಭಾಗದ ಎಸ್ಇ ಅವರಿಗೆ ಹೊಣೆಗಾರಿಕೆಯನ್ನು ನೀಡಲಾಗಿದೆ.
ಒಂದೇ ಹುದ್ದೆಗೆ 7 ಜೆಇ ನೇಮಕ ಮಾಡಿಲ್ಲ
ಇನ್ನೂ ಕೆಪಿಟಿಸಿಎಲ್ ವರ್ಗಾವಣೆ ಪಟ್ಟಿಯಲ್ಲಿ ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವ್ಯಾಪ್ತಿಯ ಕಾರ್ಯ ಮತ್ತು ಪಾಲನ ವೃತ್ತದ ಒಂದೇ ಹುದ್ದೆಗೆ 7 ಜೆಇ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಕೆಪಿಟಿಸಿಎಲ್ ನಿಯಮದ ಪ್ರಕಾರ 66/11 ಕೆವಿ ಉಪ ಕೇಂದ್ರಕ್ಕೆ ನಾಲ್ಕು ಜನ ಜೆಇಗಳನ್ನು ವರ್ಗಾವಣೆ ಮಾಡಬಹುದು. ಆ ಹುದ್ದೆಗೆ ನಿಯೋಜಿಸಬಹದಾಗಿದೆ. ಅಲ್ಲದೇ 220 ಕೆವಿ ಸ್ವೀಕರಣಾ ಕೇಂದ್ರಕ್ಕೆ ಇನ್ನೂ ಹೆಚ್ಚಿನ ಜೆಇ ನೇಮಿಸಬಹುದಾಗಿದೆ. ಅದರ ಹೊರತಾಗಿ 7 ಜೆಇ ನೇಮಕ ಸಾಧ್ಯವಿಲ್ಲ. ಅದು ಕಾನೂನು ಬಾಹಿರ ಕೂಡ. ಆದರೇ 7 ಜೆಇಗಳು 66/11 ಕೆವಿ ಉಪ ಕೇಂದ್ರ, ಡಿ.ಕೆ ಮೈದಾನ, ಕವಿಪ್ರನಿನಿ ಮೈಸೂರು ಇಲ್ಲಿಗೆ ವರ್ಗಾವಣೆ ಕೋರಿರಿದ್ದಾರೆ. ಆ ಸ್ಥಳದಲ್ಲಿ ಖಾಲಿ ಇದ್ದರೇ ನಿಯೋಜಿಸುವುದು, ಖಾಲಿ ಇಲ್ಲದೇ ಇದ್ದರೇ ಅದೇ ವಿಭಾಗದ ಇತರೆ ಉಪ ಕೇಂದ್ರಗಳಿಗೆ ನಿಯೋಜಿಸುವುದು ಎಸ್ಇಗೆ ಸೇರಿರುತ್ತದೆ.
7 ಜೆಇಗಳು ಒಂದೇ ಸ್ಥಳಕ್ಕೆ ವರ್ಗಾವಣೆ ಕೋರಿಕೆ
- ಅಶ್ವಿತ ಬಿಎಲ್( SL No.19), ಕಿರಿಯ ಇಂಜಿನಿಯರ್, 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಆರ್ ಬಿಐ ಲೇಔಟ್, ಬೆಂಗಳೂರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಂತ ಇವರು, ಕಾರ್ಯ ಮತ್ತು ಪಾಲನಾ ವೃತ್ತ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ವರ್ಗಾವಣೆ ಮಾಡಲಾಗಿದೆ. ಇವರು ನನಗೆ 66/11 ಕೆವಿ ಉಪ ಕೇಂದ್ರ ಡಿ.ಕೆ ಮೈದಾನ, ಕವಿಪ್ರನಿನಿ, ಮೈಸೂರು ಇಲ್ಲಿಗೆ ಹಾಕಿಕೊಡಿ ಅಂತ ಕೋರಿದ್ದಾಗಿ ವರ್ಗಾವಣೆಯಲ್ಲಿ ತಿಳಿಸಿರೋದು.
- ಟಿ.ಎನ್ ಜಯಸಿಂಹರಾಜು( SL No.82), ಕಿರಿಯ ಇಂಜಿನಿಯರ್, 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಬೆಳಗೋಳ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಂತ ಇವರನ್ನು ಕಾರ್ಯ ಮತ್ತು ಪಾಲನ ವೃತ್ತ, ಚಾವಿಸನಿನಿ, ಮೈಸೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಇವರು 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಡಿ.ಕೆ ಮೈದಾನ, ಮೈಸೂರು ಇಲ್ಲಿಗೆ ವರ್ಗಾವಣೆಗೆ ಕೋರಿದ್ದಾರೆ ಅಂತ ತಿಳಿಸಲಾಗಿದೆ.
- ಮಹೇಂದ್ರ.ವೈ( SL No.68), ಕಿರಿಯ ಇಂಜಿನಿಯರ್, 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಗುಂಡ್ಲುಪೇಟೆ ಇವರನ್ನು ಕಾರ್ಯ ಮತ್ತು ಪಾಲನ ವೃತ್ತ, ಚಾವಿಸನಿನಿ, ಮೈಸೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಇವರು 66/11 ಕೆವಿ ಉಪ ಕೇಂದ್ರ, ಕೆವಿಪ್ರನಿನಿ, ಡಿ.ಕೆ ಮೈದಾನ, ಮೈಸೂರು ಇಲ್ಲಿಗೆ ವರ್ಗಾವಣೆಗೆ ಕೋರಿರುತ್ತಾರೆ ಎಂದಿದೆ.
- ಉಮಾಪತಿ( SL No.96), ಕಿರಿಯ ಇಂಜಿನಿಯರ್, ರಮಾ ವಿಲಾಸ ಶಾಖೆ, ಕಾರ್ಯ ಮತ್ತು ಪಾಲನ ಕೇಂದ್ರೀಯ ಉಪ ವಿಭಾಗ, ಚಾವಿಸನಿನಿ ಮೈಸೂರು ಇಲ್ಲಿಂದ ಕಾರ್ಯ ಮತ್ತು ಪಾಲನ ವೃತ್ತ, ಚಾವಿಸನಿನಿ, ಮೈಸೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಇವರು 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಡಿ.ಕೆ ಮೈದಾನ, ಮೈಸೂರು ಇಲ್ಲಿಗೆ ವರ್ಗಾವಣೆ ಸ್ಥಳ ಕೋರಿದ್ದಾರೆ ಎಂದಿದೆ.
- ಸುಶೀಲ.ಆರ್( SL No.128), ಕಿರಿಯ ಇಂಜಿನಿಯರ್, 110/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಮುತ್ತಿನಕೊಪ್ಪ, ಶಿವಮೊಗ್ಗ ಇವರನ್ನು ಕಾರ್ಯ ಮತ್ತು ಪಾಲನಾ ವೃತ್ತ, ಮವಿಸಕಂ ಮೈಸೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಇವರು 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಡಿ.ಕೆ ಮೈದಾನ, ಮೈಸೂರು ಇಲ್ಲಿಗೆ ಸ್ಥಳ ಕೋರಿದ್ದಾರೆ ಎಂದಿದೆ.
- ಗುರುಸ್ವಾಮಿ ಕೆ.ಎಸ್( SL No.146), ಕಿರಿಯ ಇಂಜಿನಿಯರ್, ಶಾಂತಿನಗರ ಶಾಕೆ, ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಚಾವಿಸನಿನಿ, ಜ್ಯೋತಿ ನಗರ, ಮೈಸೂರು ಇವರನ್ನು ಕಾರ್ಯ ಮತ್ತು ಪಾಲನ ವೃತ್ತ, ಚಾವಿಸನಿನಿ, ಮೈಸೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಇವರು 220 ಕೆವಿ ಸ್ವೀಕರಣಾ ಕೇಂದ್ರ, ಕವಿಪ್ರನಿನಿ, ವಾಜಮಂಗಲ, ಮೈಸೂರು ಅಥವಾ 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಡಿ.ಕೆ ಮೈದಾನ, ಮೈಸೂರು ಇಲ್ಲಿಗೆ ಸ್ಥಳ ಕೋರಿದ್ದಾರೆ ಎಂದು ತಿಳಿಸಲಾಗಿದೆ.
- ಕುಮಾರ ( SL No.224), ಕಿರಿಯ ಇಂಜಿನಿಯರ್, 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಬೇಗೂರು ಇವರನ್ನು ಕಾರ್ಯ ಮತ್ತು ಪಾಲನ ವೃತ್ತ, ಚಾವಿಸನಿನಿ, ಮೈಸೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಇವರು 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಡಿ.ಕೆ ಮೈದಾನ, ಮೈಸೂರು ಇಲ್ಲಿಗೆ ಸ್ಥಳ ಕೋರಿದ್ದಾರೆ ಅಂತ ಹೇಳಿದೆ.
ಒಟ್ಟಾರೆಯಾಗಿ ಈ ಮೇಲ್ಕಂಡ 7 ಕಿರಿಯ ಇಂಜಿನಿಯರ್ ಗಳನ್ನು ಕಾರ್ಯ ಮತ್ತು ಪಾಲನ ವೃತ್ತ, ಚಾವಿಸನಿನಿ, ಮೈಸೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಇವರುಗಳು ವರ್ಗಾವಣೆಗಾಗಿ ಕೋರಿರುವಂತ ಸ್ಥಳ 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಡಿ.ಕೆ ಮೈದಾನ, ಮೈಸೂರು ಆಗಿರುತ್ತದೆ ಎಂಬುದು ಆಗಿರುತ್ತದೆ. ಅದರ ಹೊರತಾಗಿ ಒಂದೇ ಹುದ್ದೆಗೆ 7 ಜೆಇಗಳನ್ನು ನೇಮಕ ಮಾಡಿಲ್ಲ ಎಂಬುದಾಗಿ ಕೆಪಿಟಿಸಿಎಲ್ ಸ್ಪಷ್ಟ ಪಡಿಸಿದೆ.
ಡಿ.ಕೆ ಮೈದಾನದ ಉಪ ಕೇಂದ್ರಕ್ಕೆ ನಾಲ್ವರು ಜೆಇಗಳಿಗೆ ಸ್ಥಳ ನಿಯುಕ್ತಿ ಗೊಳಿಸಬಹುದಾಗಿದೆ. ಇನ್ನುಳಿದಂತ ಮೂವರು ಜೆಇಗಳನ್ನು ಅದೇ ವೃತ್ತದ ಬೇರೆ ಉಪ ಕೇಂದ್ರಗಳಿಗೆ ಎಸ್ಇ ಸ್ಥಳ ನಿಯುಕ್ತಿಗೊಳಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಒಂದೇ ಹುದ್ದೆಗೆ ಇಬ್ಬರು ಕಿರಿಯ ಇಂಜಿನಿಯರ್ ವರ್ಗಾವಣೆಯೇ?
- ಬಿಎನ್ ಲೋಹಿತ್( SL No.122), ಕಿರಿಯ ಇಂಜಿನಿಯರ್, 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ಉದಯಪುರ ಇಲ್ಲಿ ಕೆಲಸ ಮಾಡುತ್ತಿದ್ದವರನ್ನು ಕಾರ್ಯ ಮತ್ತು ಪಾಲನ ವೃತ್ತ, ಚಾವಿಸನಿನಿ, ಹಾಸನ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಇವರು ಶಾಂತಿ ಗ್ರಾಮ ಶಾಖೆ, ಕಾರ್ಯ ಮತ್ತು ಪಾಲನ ವಿಭಾಗ, ಚಾವಿಸನಿನಿ, ಹಾಸನ ಇಲ್ಲಿಗೆ ಸ್ಥಳ ನಿಯೋಜನೆಗೆ ಕೋರಿದ್ದಾರೆ ಅಂತ ತಿಳಿಸಲಾಗಿದೆ.
- ಚೇತನ್ ಬಿಎಸ್( SL No.226), ಕಿರಿಯ ಇಂಜಿನಿಯರ್, 66/11 ಕೆವಿ ಉಪ ಕೇಂದ್ರ, ಕವಿಪ್ರನಿನಿ, ರಾಮೇಶ್ವರನಗರ, ಹಾಸನ ಇವರನ್ನು ಕಾರ್ಯ ಮತ್ತು ಪಾಲನ ವೃತ್ತ, ಚಾವಿಸನಿನಿ, ಹಾಸನ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಇವರು ಶಾಂತಿ ಗ್ರಾಮ ಶಾಖೆ, ಕಾರ್ಯ ಮತ್ತು ಪಾಲನ ಚಾವಿಸನಿನಿ, ಹಾಸನ ಇಲ್ಲಿಗೆ ಸ್ಥಳ ನಿಯೋಜನೆಗೆ ಕೋರಿದ್ದಾರೆ ಎಂದಿರುವುದಾಗಿದೆ.
ಸೋ ಈ ಮೇಲ್ಕಂಡ ಕಿರಿಯ ಇಂಜಿನಿಯರ್ ಅವರುಗಳನ್ನು ಕಾರ್ಯ ಮತ್ತು ಪಾಲನ ವೃತ್ತ, ಚಾವಿಸನಿನಿ, ಹಾಸನಕ್ಕೆ ವರ್ಗಾವಣೆ ಮಾಡಲಾಗಿದೆ. ಅವರು ವರ್ಗಾವಣೆಗಾಗಿ ಕೋರಿರುವಂತ ಸ್ಥಳ ಶಾಂತಿಗ್ರಾಮ ಶಾಖೆಯಾಗಿದೆ ಎಂಬುದಾಗಿದೆ. ಅದರ ಹೊರತಾಗಿ ಶಾಂತಿ ಗ್ರಾಮ ಶಾಖೆಯ ಒಂದೇ ಜೆಇ ಹುದ್ದೆಗೆ ಈ ಇಬ್ಬರನ್ನು ನೇಮಕ ಮಾಡಲಾಗಿಲ್ಲ.
4 ವರ್ಷ ಪೂರೈಸದಿದ್ದರೂ ಆ ಸ್ಥಳಕ್ಕೆ ವರ್ಗಾವಣೆ ಕೋರಿದ್ದರೆ ಅಲ್ಲಿದ್ದಂತ ಜೆಇಗಳು ಏನು ಮಾಡಬೇಕು.?
ಇನ್ನೂ ಕೆಲವರು 4 ವರ್ಷ ಪೂರೈಸದಂತ ಸ್ಥಳಗಳಿಗೂ ನಿಯೋಜನೆ ಕೋರಿದ್ದಾರೆ. ಹೀಗೆ ಕೋರಿರುವ ಸ್ಥಳದಲ್ಲಿ ಹಾಲಿ ಇರುವಂತವರು 4 ವರ್ಷ ಪೂರೈಸಿದ್ದರೇ ಮಾತ್ರವೇ ಅವರ ಸ್ಥಳಕ್ಕೆ ಇವರನ್ನು ಹಾಕೋದನ್ನು ಆಯಾ ಎಸ್ಇಗಳು ಮಾಡಲಿದ್ದಾರೆ. ಜೊತೆಗೆ ಅಲ್ಲಿ ಹುದ್ದೆ ಖಾಲಿ ಇದ್ದರೇ ಮಾತ್ರವೇ ಆ ಕೋರಿರುವಂತ ಸ್ಥಳಕ್ಕೆ ನಿಯೋಜಿಸಬಹುದು. ಅದರ ಹೊರತಾಗಿ ಖಾಲಿ ಇಲ್ಲದೇ ಇದ್ದರೇ ಅದೇ ವೃತ್ತ ವ್ಯಾಪ್ತಿಯ ಬೇರೊಂದು ಉಪ ಕೇಂದ್ರಕ್ಕೆ ವರ್ಗಾವಣೆಗೊಂಡಿರುವಂತ ಜೆಇಗಳನ್ನು ಎಸ್ಇ ಸ್ಥಳ ನಿಯೋಜನೆಗೊಳಿಸಲಿದ್ದಾರೆ.
ಇದಷ್ಟೇ ಅಲ್ಲದೇ ಹೀಗೆ ಎಡವಟ್ಟು ಆಗಿದ್ದಾಗ ಷರತ್ತು ಮತ್ತು ಸೂಚನೆಗಳಿಗೆ ಒಳಪಟ್ಟಂತೆ ಜೆಇಗಳು ಆಯಾ ಎಸ್ಇಗಳಿಗೆ ತಾವು ಜೆಇ ಆಗಿ ನೇಮಕಗೊಂಡಿರುವಂತ ಸ್ಥಳಕ್ಕೆ ಮತ್ತೊಬ್ಬರು ಕೋರಿದ್ದಾರೆ. ಆದರೇ ನಾವು 4 ವರ್ಷ ಪೂರೈಸಿಲ್ಲ ಎಂಬುದಾಗಿ ಎಸ್ಇಗಳಿಗೆ ಮನವಿಯನ್ನು ಸಲ್ಲಿಸಿದರೇ, ಅಂತವರನ್ನು ವರ್ಗಾವಣೆ ಮಾಡಲು ಬರುವುದಿಲ್ಲ ಎಂಬುದಾಗಿಯೂ ಕೆಪಿಟಿಸಿಎಲ್ ಸ್ಪಷ್ಟ ಪಡಿಸಿದೆ.
ಓದುಗರೇ ನಿಮ್ಮ ಗಮನಕ್ಕಾಗಿ ಈ ಸುದ್ದಿಯ ವಾಸ್ತವ ಸಂತ್ಯಾಂಶದ ಅರಿವಿಗಾಗಿ ವರ್ಗಾವಣೆ ಸಂಪೂರ್ಣ ಪಟ್ಟಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ. ಅಲ್ಲದೇ ಮೇಲ್ಕಂಡ ಸ್ಪಷ್ಟೀಕರಣದಲ್ಲಿ ಜೆಇ ಹೆಸರಿನ ಮುಂದೆ ಅವರ ವರ್ಗಾವಣೆಯ ಕ್ರಮ ಸಂಖ್ಯೆಯನ್ನು SL No ಎಂಬುದಾಗಿಯೂ ನಮೂಗಿಸಿ ತಿಳಿಸಲಾಗಿದೆ. ಅದನ್ನು ಪಟ್ಟಿಯಲ್ಲಿ ಪರಿಶೀಲಿಸಿ, ಸ್ಪಷ್ಟ ಪಡಿಸಿಕೊಳ್ಳಬಹುದಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾಜ್ಯದ ರೈತರೇ ಗಮನಿಸಿ : ‘PM KISAN’ ಹಣ ಜಮಾ ಆಗಲು ಕೂಡಲೇ `e-KYC’ ಮಾಡಿಸಿಕೊಳ್ಳಿ!
BREAKING : ಕರ್ನಾಟಕದ 20 ಸೇರಿ 1,037 ಪೊಲೀಸರಿಗೆ `ರಾಷ್ಟ್ರಪತಿ ಪದಕ’ಘೋಷಣೆ
ರಾಜ್ಯದ ರೈತರಿಗೆ ಗುಡ್ ನ್ಯೂಸ್ ; ಸೆಪ್ಟೆಂಬರ್ ನಿಂದ ‘ಪೋಡಿ’ ಅಭಿಯಾನಕ್ಕೆ ಚಾಲನೆ