ಬೆಂಗಳೂರು: ರಾಜ್ಯದ ಕೆಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ತಪ್ಪುಗಳಾಗಿರುತ್ತವೆ. ಆ ತಪ್ಪುಗಳನ್ನು ಸರಿ ಪಡಿಸೋದು ಹೇಗೆ ಎಂಬುದು ಅನೇಕ ವಿದ್ಯಾರ್ಥಿಗಳಿಗೆ ತಿಳಿದಿರೋದಿಲ್ಲ. ಅಂತವರಿಗೆ ಇಲಾಖೆಯಿಂದಲೇ ತಿದ್ದುಪಡಿಗೆ ಆದೇಶ ಮಾಡಿದೆ. ಜಸ್ಟ್ ನೀವು ಈ ಕೆಳಕಂಡ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಿದರೇ ತಪ್ಪು ತಿದ್ದುಪಡಿಯಾಗಿ, ಹೊಸ ಅಂಕಪಟ್ಟಿ ಲಭ್ಯವಾಗಲಿದೆ.
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಮೂಲಕ ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿನ ತಪ್ಪು ತಿದ್ದುಪಡಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಿದೆ.
ಈ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಜ್ಞಾಪನ ಪತ್ರವನ್ನು ಹೊರಡಿಸಲಾಗಿದೆ. ಅದರಲ್ಲಿ ಪ್ರಸ್ತುತ ಮತ್ತು ಹಿಂದಿನ ಸಾಲಿನ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಭಾವಚಿತ್ರ, ಲಿಂಗ, ಮಾಧ್ಯಮ ಮತ್ತು ಜನ್ಮ ದಿನಾಂಕ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಿಂದ ಪ್ರಸ್ತಾವನೆಗಳು ಪಿ.ಯು. ಅಂಕಪಟ್ಟಿ ಶಾಖೆಗೆ ಮೂಲ ಅಂಕಪಟ್ಟಿಯೊಂದಿಗೆ ಸಲ್ಲಿಸಲಾಗುತ್ತಿದ್ದು, ಸದರಿ ಅಂಕಪಟ್ಟಿಯಲ್ಲಿ ತಿದ್ದುಪಡಿಗಳಿಗೆ ಯಾವುದೇ ಶುಲ್ಕ ನಿಗದಿಯಾಗಿರುವುದಿಲ್ಲ.
ಈ ಮೇಲಿನ ತಿದ್ದುಪಡಿಗಳನ್ನು ಮಾಡುವ ಸಂದರ್ಭಗಳಲ್ಲಿ ಅಭ್ಯರ್ಥಿಯು ಸಲ್ಲಿಸಿರುವಂತಹ ಮೂಲ ಅಂಕಪಟ್ಟಿಯಲ್ಲಿಯೇ ಬೆರಳಚ್ಚು ಯಂತ್ರದ ಮೂಲಕ ತಿದ್ದುಪಡಿ ಮಾಡಿ ಶಾಖೆಯ ಹಿರಿಯ ಸಹಾಯಕ ನಿರ್ದೇಶಕರಿಂದ ದೃಢಿಕರಿಸಲಾಗುತ್ತಿದೆ. ಆದರೆ ಕೆಲವು ಅಭ್ಯರ್ಥಿಗಳು ಮೂಲ ಅಂಕಪಟ್ಟಿಗಳಲ್ಲಿ ತಿದ್ದುಪಡಿಯಾಗಿರುವುದನ್ನು ಕೆಲವು ಸಂಸ್ಥೆ/ಇಲಾಖೆಗಳಲ್ಲಿ ಒಪ್ಪದ ಕಾರಣ ಮೂಲ ಅಂಕಪಟ್ಟಿಯನ್ನು ಹಿಂದಿರುಗಿಸಿ ದ್ವಿಪ್ರತಿಗಾಗಿ ಪ್ರಸ್ತಾವನೆಗಳನ್ನು ಮಂಡಲಿಗೆ ಸಲ್ಲಿಸಲಾಗುತ್ತಿದೆ. ಅಲ್ಲದೆ, ಭಾವಚಿತ್ರ ತಿದ್ದುಪಡಿಗಳಿಗೆ CORRECTED COPY ಎಂದು ಮುದ್ರಿಸಿ ನೀಡಲಾಗುತ್ತಿದ್ದು, ಇದೇ ಮಾದರಿಯಲ್ಲಿ ಪುಸಕ್ತ ಮತ್ತು ಹಿಂದಿನ ಎಲ್ಲಾ ವರ್ಷಗಳ ಅಂಕಪಟ್ಟಿ, ತಿದ್ದುಪಡಿಗಳಿಗೆ ಶುಲ್ಕವನ್ನು ನಿಗದಿಪಡಿಸಿ, ಅಂಕಪಟ್ಟಿಗಳನ್ನು ನೀಡುವ ಬಗ್ಗೆ ಮಂಡಲಿಯಿಂದ ಆದೇಶವನ್ನು ಹೊರಡಿಸಲು ಕ್ರಮ ಕೈಗೊಳ್ಳಲು ಕೋರಿರುವುದನ್ನು ಕೂಲಂಕುಷವಾಗಿ ಪರಿಶೀಲಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ ಹಾಗೂ ಮಾಧ್ಯಮ ತಿದ್ದುಪಡಿ ಮಾಡುವ ಸಂಬಂಧ ಈ ಕೆಳಕಂಡಂತೆ ಆದೇಶಿಸಿದ್ದಾರೆ.
ಪುಸಕ್ತ ಮತ್ತು ಹಿಂದಿನ ಸಾಲಿನ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಭಾವಚಿತ್ರ, ಲಿಂಗ, ಮಾಧ್ಯಮ ಮತ್ತು ಜನ್ಮ ದಿನಾಂಕ ತಿದ್ದುಪಡಿ ಸಂಬಂಧ ಉಲ್ಲೇಖ-1ರ ಸರ್ಕಾರಿ ಆದೇಶದಲ್ಲಿ ನಿಗದಿಯಾಗಿರುವಂತೆ ಹಾಗೂ ಉಲ್ಲೇಖ-3 ರಲ್ಲಿ ಮಂಡಲಿಯ ಇ-ಕಛೇರಿಯ ಕಡತದಲ್ಲಿ ಅನುಮೋದಿಸಿರುವಂತೆ ನಿಗದಿತ ಶುಲ್ಕ ರೂ. 1600/- (ರೂಪಾಯಿ ಒಂದು ಸಾವಿರದ ಆರು ನೂರು ಮಾತ್ರ https://k2.karnataka.gov.in ಮೂಲಕ ಲಾಗಿನ್ ಆಗಿ ಚಲನ್ ಪ್ರತಿಯನ್ನು ಸೃಜಿಸಿ ಲೆಕ್ಕ ಶೀರ್ಷಿಕೆ 0202-01-101-1-06 ನ್ನು ನಮೂದಿಸಿ ಸಂಬಂಧಿಸಿದ ಬ್ಯಾಂಕ್‌ನಲ್ಲಿ ಹಣ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಢೀಕೃತ ಪ್ರತಿ ಮತ್ತು ದ್ವಿತೀಯ ಪಿಯುಸಿಯ ಮೂಲ ಅಂಕಪಟ್ಟಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಪುಸ್ತಾವನೆ ಸಲ್ಲಿಸಿದಲ್ಲಿ ಮಂಡಲಿಯ ವತಿಯಿಂದ ಪರಿಷ್ಕೃತ ಅಂಕಪಟ್ಟಿಯನ್ನು ನೀಡಲಾಗುವುದು ಎಂದು ಈ ಮೂಲಕ ತಿಳಿಯಪಡಿಸಿದ್ದಾರೆ.
BIG NEWS: ಸಾಗರದ ನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ‘DYSP’ಗೆ ದೂರು
ಜ.19, 25ರಂದು KPSC ಗ್ರೂಪ್-ಬಿ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ
BREAKING:ದೆಹಲಿಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಗೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ | Ayushman Bharat
BIG NEWS: ಸಾಗರದ ನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ‘DYSP’ಗೆ ದೂರು