ನವದೆಹಲಿ: ಆನ್ ಲೈನ್ ವಂಚಕರು ಈಗ ಮತ್ತೊಂದು ದಾರಿಯನ್ನು ಹಿಡಿದಿದ್ದಾರೆ. ಬ್ಯಾಂಕ್ ಗ್ರಾಹಕರನ್ನು ವಂಚಿಸುವಂತ ಮಗದೊಂದು ದಾರಿಯೇ ಸಿಬಿಐ ಸಮನ್ಸ್, ವಾರೆಂಟ್ ಅನ್ನುವಂತ ಸಂದೇಶವಾಗಿದೆ. ಒಂದು ವೇಳೆ ನೀವು ಆ ಸಮನ್ಸ್, ವಾರೆಂಟ್ ಗೆ ಬೆಚ್ಚಿ ಬಿದ್ದು, ಅಲ್ಲಿನ ಲಿಂಕ್ ಓಪನ್ ಮಾಡಿದ್ದೇ ಆದ್ರೇ ನಿಮ್ಮ ಖಾತೆಯೇ ಖಾಲಿಯಾಗಿಬಿಡುತ್ತದೆ. ಹಾಗಾದ್ರೇ ಅಂತದ ಸ್ಕ್ಯಾಮ್ ಏನು ಎನ್ನುವ ಬಗ್ಗೆ ಮುಂದೆ ಓದಿ.
ಇಂದು ಸ್ವತಹ ಸಿಬಿಐ ಫೇಕ್ ನೋಟಿಸ್, ವಾರೆಂಟ್ ಬಗ್ಗೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ( Central Bureau of Investigation- CBI) ಸಾರ್ವಜನಿಕರಿಗೆ ಎಚ್ಚರಿಕೆಯ ಮಾಹಿತಿಯೊಂದನ್ನು ಎಕ್ಸ್ ನಲ್ಲಿ ವೀಡಿಯೋ ಸಹಿತ ಮಾಹಿತಿಯನ್ನು ಹಂಚಿಕೊಂಡಿದೆ. ಅದರಲ್ಲಿ ಹಿರಿಯ ಸಿಬಿಐ ಅಧಿಕಾರಿಗಳ ಹೆಸರು ಮತ್ತು ಹುದ್ದೆಗಳನ್ನು ದುರುಪಯೋಗಪಡಿಸಿಕೊಳ್ಳುವ ಹಗರಣಗಳ ಬಗ್ಗೆ ದಯವಿಟ್ಟು ಜಾಗರೂಕರಾಗಿರಿ. ಸಿಬಿಐ ನಿರ್ದೇಶಕರು ಸೇರಿದಂತೆ ಸಿಬಿಐ ಅಧಿಕಾರಿಗಳ ಸಹಿಯನ್ನು ಹೊಂದಿರುವ ನಕಲಿ ದಾಖಲೆಗಳು ಮತ್ತು ನಕಲಿ ವಾರಂಟ್ಗಳು / ಸಮನ್ಸ್ಗಳನ್ನು ವಂಚನೆ ( CBI fake warrants/summon ) ಮಾಡಲು, ವಿಶೇಷವಾಗಿ ಇಂಟರ್ನೆಟ್ / ಇಮೇಲ್ಗಳು / ವಾಟ್ಸಾಪ್ ಇತ್ಯಾದಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದೆ.
ಇನ್ನೂ ಮತ್ತೊಂದು ಎಕ್ಸ್ ಪೋಸ್ಟ್ ನಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಸಿಬಿಐ ಲೋಗೋವನ್ನು ಕೆಲವು ಅಪರಾಧಿಗಳು ತಮ್ಮ ಪ್ರದರ್ಶನ ಚಿತ್ರವಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಮುಖ್ಯವಾಗಿ ವಾಟ್ಸಾಪ್ ಮೂಲಕ ಕರೆಗಳನ್ನು ಮಾಡಲು, ಮುಖ್ಯವಾಗಿ ವಾಟ್ಸಾಪ್ ಮೂಲಕ, ಹಣವನ್ನು ಸುಲಿಗೆ ಮಾಡಲು. ಸಾರ್ವಜನಿಕರು ಜಾಗರೂಕರಾಗಿರಬೇಕು. ಇಂತಹ ಹಗರಣಗಳಿಗೆ ಬಲಿಯಾಗಬಾರದು. ಅಂತಹ ಯಾವುದೇ ಪ್ರಯತ್ನವನ್ನು ತಕ್ಷಣ ಸ್ಥಳೀಯ ಪೊಲೀಸರಿಗೆ ವರದಿ ಮಾಡಬೇಕು ಅಂತ ಮನವಿ ಮಾಡಿದೆ.
Publicly available CBI logo is misused by some criminals as their display picture to make calls, mainly through WhatsApp, to extort money. Public is advised to be cautious and not fall prey to such scams. Any such attempt should be immediately reported to the local Police. pic.twitter.com/P4cWkg1lhH
— Central Bureau of Investigation (India) (@CBIHeadquarters) August 6, 2024
ಮಲೆನಾಡಿಗರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘ಗುಡ್ಡ ಕುಸಿತ ತಡೆ’ಗೆ 300 ಕೋಟಿ ವ್ಯಯಿಸಲು ನಿರ್ಧಾರ
BREAKING : `CM ಸಿದ್ದರಾಮಯ್ಯ’ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆ!