ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸಿಲಿಂಡರ್’ನ್ನ ಮನೆಗೆ ತಂದ ನಂತರ ಮೊದಲು ಸಿಲಿಂಡರ್ನ ತೂಕವನ್ನು ಅಳೆಯಿರಿ. ತೂಕ ಸರಿಯಾಗಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಸಿಲಿಂಡರ್ ಬದಲಾಯಿಸಬೇಕು. ಯಾಕಂದ್ರೆ ನಾವು ಸಿಲಿಂಡರ್ ದೀರ್ಘಕಾಲ ಓಡಿಸಬೇಕಾದ್ರೆ ಅದು ಸರಿಯಾಗಿ ತುಂಬಿದೆಯೇ ಎಂದು ನೋಡುವುದು ಬಹಳ ಮುಖ್ಯ. ಕ್ಯಾಲೆಂಡರ್‌ನಲ್ಲಿ ನೀವು ಸಿಲಿಂಡರ್’ನ್ನ ಮನೆಗೆ ತರುವ ದಿನಾಂಕವನ್ನ ಗಮನಿಸಿ. ಸಿಲಿಂಡರ್ ಎಷ್ಟು ಸಮಯದವರೆಗೆ ಬಳಸಲಾಗಿದೆ ಎಂಬುದನ್ನ ನೆನಪಿಟ್ಟುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಈ ವಿಧಾನವನ್ನು ಮುಂದುವರಿಸಿದರೆ, ಸಿಲಿಂಡರ್ ಎಷ್ಟು ಕಾಲ ಉಳಿಯುತ್ತದೆ ಎಂಬುದನ್ನ ನೀವು ಅಂದಾಜು ಮಾಡಬಹುದು.
ಗ್ಯಾಸ್ ಬರ್ನರ್’ಗಳನ್ನ ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಇದರಿಂದ ಅವುಗಳನ್ನ ಸರಿಯಾಗಿ ಬಳಸಿಕೊಳ್ಳಬಹುದು. ಬರ್ನರ್ ಧೂಳಿನಿಂದ ಮುಚ್ಚಿಹೋಗಿದ್ದರೆ, ಜ್ವಾಲೆಯು ನೀಲಿ ಬಣ್ಣಕ್ಕೆ ಬದಲಾಗಿ ಸ್ವಲ್ಪ ಹಳದಿಯಾಗಿ ಕಾಣಿಸುತ್ತದೆ. ಹಾಗಿದ್ದಲ್ಲಿ, ನಿಮ್ಮ ಗ್ಯಾಸ್ ಬರ್ನರ್ ಸ್ವಚ್ಛಗೊಳಿಸಿ. ಗ್ಯಾಸ್ ಬರ್ನರ್ ಸ್ವಚ್ಛವಾಗಿಡಲು, ಗ್ಯಾಸ್ ಬರ್ನರ್’ನ್ನು ಬಿಸಿ ನೀರಿನಲ್ಲಿ ಇರಿಸಿ ಮತ್ತು ಅದರ ಮೇಲೆ ಸ್ವಲ್ಪ ನಿಂಬೆ ಹಿಂಡಿ. ಅದಕ್ಕೆ ಸಂಪೂರ್ಣ ಇನೋ ಪ್ಯಾಕೆಟ್ ಸೇರಿಸಿ. ಎರಡರಿಂದ ಮೂರು ಗಂಟೆಗಳ ಕಾಲ ಈ ಮಿಶ್ರಣದಲ್ಲಿ ಬರ್ನರ್ ನೆನೆಸಿ ನಂತ್ರ ಬ್ರಷ್ನಿಂದ ಬರ್ನರ್ ಸ್ವಚ್ಛಗೊಳಿಸಿ.
ಅಡುಗೆ ಪ್ರಾರಂಭಿಸುವ ಮೊದಲು ಅಗತ್ಯವಿರುವ ಎಲ್ಲಾ ಪದಾರ್ಥಗಳನ್ನ ತಯಾರಿಸಿ. ತರಕಾರಿಗಳನ್ನ ಕತ್ತರಿಸಿ, ಬೆಳ್ಳುಳ್ಳಿಯನ್ನ ನುಣ್ಣಗೆ ಮಾಡಿಕೊಳ್ಳಿ, ಮಸಾಲೆಗಳನ್ನು ಸಿದ್ಧವಾಗಿಡಿ. ಹೀಗೆ ಮಾಡುವುದರಿಂದ ಗ್ಯಾಸ್ ಕೂಡ ಉಳಿತಾಯ ಮಾಡಬಹುದು.. ಅಲ್ಲದೆ, ನೀವು ಅಡುಗೆ ಮಾಡುವ ಖಾದ್ಯವನ್ನ ಅವಲಂಬಿಸಿ ಗ್ಯಾಸ್ ಜ್ವಾಲೆಯನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಗತ್ಯವಿಲ್ಲ.
ಅಡುಗೆಯಲ್ಲಿ ಸಾಧ್ಯವಾದಷ್ಟು ಕುಕ್ಕರ್ ಬಳಸಿ. ಇದು ಅಡುಗೆಗಾಗಿ ಅನಿಲ ಬಳಕೆಯನ್ನ ಕಡಿಮೆ ಮಾಡುತ್ತದೆ. ಗ್ಯಾಸ್ ಹಾಗೂ ಸಮಯ ಉಳಿತಾಯವಾಗುತ್ತದೆ. ಬೇಳೆಕಾಳುಗಳು ಮತ್ತು ಅಕ್ಕಿಯನ್ನು ಅಡುಗೆ ಮಾಡುವ ಮೊದಲು ಕನಿಷ್ಠ ಅರ್ಧ ಘಂಟೆಯವರೆಗೆ ನೆನೆಸಿಡಬೇಕು. ಇದು ಅನ್ನವನ್ನ ಬೇಗನೆ ಬೇಯಿಸುತ್ತದೆ.
ಗ್ಯಾಸ್ ಬಳಸುವಾಗ ಸರಿಯಾದ ಪಾತ್ರೆಗಳನ್ನ ಬಳಸಿ. ಅನುಪಾತದ ಪ್ರಕಾರ ಅಡುಗೆ ಪಾತ್ರೆಯ ಗಾತ್ರವನ್ನ ಆರಿಸಿ. ಕಿಟಕಿ ಚೌಕಟ್ಟಿನಲ್ಲಿ ಅಥವಾ ಗ್ಯಾಸ್ ಪೈಪ್ನಲ್ಲಿ ಸಣ್ಣ ಸೋರಿಕೆ ಇದ್ದರೆ, ತಕ್ಷಣ ಅದನ್ನ ಸರಿಪಡಿಸಿ. ಇದು ಅನಿಲ ವ್ಯರ್ಥವಾಗುವುದನ್ನ ತಡೆಯುತ್ತದೆ. ಅಲ್ಲದೆ, ನಿಯಂತ್ರಕ ಮತ್ತು ಗ್ಯಾಸ್ ಪೈಪ್’ನ್ನ ನಿಯಮಿತವಾಗಿ ಪರಿಶೀಲಿಸಬೇಕು. ಗ್ಯಾಸ್ ಬಳಸಿದ ನಂತರ ನಿಯಂತ್ರಕವನ್ನ ಸರಿಯಾಗಿ ಮುಚ್ಚಿ. ಇದರಿಂದಾಗಿ ಅನಿಲವನ್ನು ವ್ಯರ್ಥ ಮಾಡದೆ ಹೆಚ್ಚು ದಿನ ಬಳಸಬಹುದು.
WATCH : ತಿರುಚಿರಾಪಳ್ಳಿಯಲ್ಲಿ ‘ಪ್ರಧಾನಿ ಮೋದಿ’ ಭರ್ಜರಿ ರೋಡ್ ಶೋ ; ಹೂ ಮಳೆ ಸುರಿದು ಸ್ವಾಗತಿಸಿದ ಜನಸಮೂಹ
WATCH : ತಿರುಚಿರಾಪಳ್ಳಿಯಲ್ಲಿ ‘ಪ್ರಧಾನಿ ಮೋದಿ’ ಭರ್ಜರಿ ರೋಡ್ ಶೋ ; ಹೂ ಮಳೆ ಸುರಿದು ಸ್ವಾಗತಿಸಿದ ಜನಸಮೂಹ