ಶಿವಮೊಗ್ಗ: ಸೊರಬದ ಚಂದ್ರಗುತ್ತಿ ದೇವಸ್ಥಾನ, ಸಾಗರದ ಗಣಪತಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅವ್ಯವಹಾರ ನಡೆಸಿದ್ದಾರೆ ಎಂಬುದಾಗಿ ಆರೋಪವನ್ನು ಡಿಸಿ ನೇತೃತ್ವದ ಮುಜರಾಯಿ ಇಲಾಖೆಯ ಸಭೆಯಲ್ಲಿ ಆರೋಪ ಕೇಳಿ ಬಂದಿತ್ತು. ಆದರೆ ವಾಸ್ತವ ಸತ್ಯವೇ ಬೇರೆಯಾಗಿದೆ. ಅದು ಏನು ಅಂತ ಮುಂದಿದೆ ಓದಿ.
ಶಿವಮೊಗ್ಗ ಜಿಲ್ಲೆಯ ಸೊರಬ ಚಂದ್ರಗುತ್ತಿ ದೇವಸ್ಥಾನ ಹಾಗೂ ಸಾಗರ ತಾಲ್ಲೂಕಿನ ಗಣಪತಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪ್ರಮಿಳಾ ಕುಮಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಇಓ ಆಗಿ ಅಧಿಕಾರಿ ವಹಿಸಿಕೊಂಡ ನಂತರ ದೇವಾಲಯಕ್ಕೆ ಆದಾಯ ಹರಿದು ಬರುತ್ತಿದ್ದರೇ, ಅನಗತ್ಯ ಹಣ ದುರ್ಬಳಕೆಗೂ ಬ್ರೇಕ್ ಬಿದ್ದೆದೆ ಎಂಬುದು ಭಕ್ತರ ಮಾತಾಗಿದೆ.
ಸೊರಬದ ಚಂದ್ರಗುತ್ತಿ ದೇವಸ್ಥಾನದ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಉತ್ತಮ ರೀತಿಯಲ್ಲಿ ನಡೆದಿದೆ. ಶೌಚಾಲಯ, ದೇವಸ್ಥಾನಕ್ಕೆ ಹೊಸ ಟ್ರ್ಯಾಕ್ಟರ್ ತರಿಸುವಲ್ಲಿ ಇಓ ಮಹತ್ವದ ಪಾತ್ರ ವಹಿಸಿದ್ದಾರೆ ಎಂಬುದು ಮುಜರಾಯಿ ಇಲಾಖೆಯ ದಾಖಲೆಗಳೇ ಹೇಳುತ್ತಿವೆ.
ಸರ್ಕಾರದಿಂದ ಬಂದಂತಹ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಯಶಸ್ವಿಯಾಗಿರುವ ಇಓ, ಹುಂಡಿ ಹಣವನ್ನು ಸದ್ಬಳಕೆ ಮಾಡುವಲ್ಲಿ ಉತ್ತಮ ಹೆಜ್ಜೆ ಇರಿಸಿದ್ದಾರೆ. ಯಾವುದೇ ಕೊರತೆಯು ಭಕ್ತರಿಗೆ ಆಗದಂತೆ ಕ್ರಮ ಕೈಗೊಂಡಿದ್ದಾರೆ ಎಂಬುದು ಸ್ಥಳೀಯರು, ಭಕ್ತರ ಮಾತಾಗಿದೆ.
ಇನ್ನೂ ಸಾಗರದ ಗಣಪತಿ ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲೂ ಅಷ್ಟೇ ಉತ್ತಮ ಕಾರ್ಯವನ್ನು ಇಓ ಮಾಡುತ್ತಿದ್ದಾರೆ. ಅನಗತ್ಯ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಿ, ಗಣಪತಿ ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿರುವ ಕೀರ್ತಿ ಇಓ ಪ್ರಮಿಳಾ ಕುಮಾರಿ ಸಲ್ಲುತ್ತಿದೆ ಎಂದು ದೇವಸ್ಥಾನ ಭಕ್ತರು, ಆಡಳಿತ ಮಂಡಳಿಯವರೇ ಹೇಳುತ್ತಿದ್ದಾರೆ.
ಇಓ ಪ್ರಮಿಳಾ ಕುಮಾರಿ ಅಧಿಕಾರ ವಹಿಸಿಕೊಂಡ ಮೇಲೆ ಅಭಿವೃದ್ಧಿಯ ನಾಗಾಲೋಟವೇ ಮುಂದೆ ಸಾಗಿದೆ. ದಸರಾ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಿದ ಕೀರ್ತಿ ಅವರಿಗೆ ಸಲ್ಲಿದೆ ಎನ್ನಲಾಗುತ್ತಿದೆ. ಗಲಾಟೆ-ಗಲಭೆಗಳಿಗೆ ಅವಕಾಶ ನೀಡದೇ ಪ್ರತಿಯೊಂದು ಧಾರ್ಮಿಕ ಕಾರ್ಯಗಳನ್ನು ಅಚ್ಚುಕಟ್ಟಿನಿಂದ ಉತ್ತಮ ರೀತಿಯಲ್ಲಿ ಮುನ್ನೆಡೆಸಿಕೊಂಡು ಹೋಗುತ್ತಿರುವ ಮಾತು ಕೇಳಿ ಬಂದಿದೆ.
ಚಂದ್ರಗುತ್ತಿ, ಸಾಗರದ ಗಣಪತಿ ದೇವಸ್ಥಾನ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯವನ್ನು ಭಕ್ತರಿಗೆ ಉತ್ತಮ ರೀತಿಯಲ್ಲಿ ಕಲ್ಪಿಸಿರುವ ಅವರು, ದೇವಾಲಯಗಳ ಆದಾಯ ಸೋರಿಕೆ ತಡೆದು, ಲಕ್ಷಾಂತರ ಆದಾಯ ಹೆಚ್ಚಳಕ್ಕೂ ಕಾರಣ ಆಗಿದ್ದಾರೆ ಎಂದು ಸಾರ್ವಜನಿಕರೇ ಹೇಳುತ್ತಿದ್ದಾರೆ.
ಹೀಗಿದ್ದರೂ ಶಿವಮೊಗ್ಗ ಡಿಸಿ ನೇತೃತ್ವದಲ್ಲಿ ನಡೆದಂತ ಮುಜರಾಯಿ ಇಲಾಖೆಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಸದಸ್ಯರು ಮಾಡಿದ ಆರೋಪ ನಿರಾಧಾರವಾದದ್ದು. ಚಂದ್ರಗುತ್ತಿ ದೇವಸ್ಥಾನ, ಸಾಗರದ ಗಣಪತಿ ದೇವಾಲಯ ಅವ್ಯವಹಾರ ನಡೆದಿಲ್ಲ. ಹೀಗಿದ್ದರೂ ಆರೋಪ ಮಾಡಿದ್ದು ಏಕೆ ಎಂಬುದೇ ಯಕ್ಷ ಪ್ರಶ್ನೆ ಅಂತ ಭಕ್ತರ ಮಾತನಾಡಿಕೊಳ್ಳುತ್ತಿದ್ದಾರೆ.
ಅಂದಹಾಗೆ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರು ಮಾಡಿದ ಆರೋಪಗಳಿಗೆ ಈಗಾಗಲೇ ದಾಖಲೆ ಸಹಿತ ವರದಿಯನ್ನು ಉತ್ತರ ರೂಪದಲ್ಲಿ ಜಿಲ್ಲಾ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಇದು ಡಿಸಿ ಗಮನಕ್ಕೆ ಬಂದಿಲ್ವ.? ಮತ್ತೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇಕೆ? ಎಂಬುದು ಹಲವರ ಪ್ರಶ್ನೆಯಾಗಿದೆ.
ಸೊರಬದ ಚಂದ್ರಗುತ್ತಿ ದೇವಸ್ಥಾನಕ್ಕೆ ಬಂದ ಸೀರೆಗಳನ್ನು ಶಿಷ್ಟಾಚಾರದಂತೆ ವಿಲೇವಾರಿ ಮಾಡಿರುವುದು ದಾಖಲೆಗಳೇ ಹೇಳುತ್ತಿವೆ. ಸಾಗರದ ಗಣಪತಿ ದೇವಾಲಯ ಜಾತ್ರೆಯಿಂದ ಈ ಹಿಂದಿಗಿಂತಲೂ ಹೆಚ್ಚು ಆದಾಯ ಹರಿದು ಬರಲು ಇಓ ಕಾರಣ ಆಗಿದ್ದಾರೆ. ಸ್ಟಾಲ್ ಹರಾಜಿನ ಹಣ ಜಮೆಯಲ್ಲೂ ಅವ್ಯವಹಾರ ನಡೆದಿಲ್ಲ ಎಂಬುದು ಈಗಾಗಲೇ ಡಿಸಿಗೆ ಸಲ್ಲಿಸಲಾದ ವರದಿಯಲ್ಲೇ ಸ್ಪಷ್ಟವಾಗಿದೆ.
ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ಚಂದ್ರಗುತ್ತಿ, ಗಣಪತಿ ದೇವಾಲಯ ಅಭಿವೃದ್ಧಿ ನಾಗಾಲೋಟ ಸಹಿಸದವರು, ಅವ್ಯವಹಾರಕ್ಕೆ ಅವಕಾಶ ಮಾಡಿಕೊಡದೇ ಇರೋದೇ ಇಓ ಮೇಲಿನ ಸುಖಾ ಸುಮ್ಮನೆ ಆರೋಪಗಳಿಗೆ ಕಾರಣ ಎಂಬುದು ಭಕ್ತರ ಕಿಡಿ ನುಡಿಯಾಗಿದೆ. ಇಂತಹ ಆರೋಪಗಳನ್ನು ನಿಲ್ಲಿಸಬೇಕು. ಜಿಲ್ಲಾಧಿಕಾರಿಗಳು ಯಾರೋ ಒಬ್ಬರು ಮಾಡುವಂತ ಸತ್ಯಕ್ಕೆ ದೂರವಾದ ಆರೋಪಗಳಿಗೆ ಕಿವಿಗೊಡಬಾರದು ಎಂಬುದು ಸೊರಬ ಚಂದ್ರಗುತ್ತಿ ದೇವಸ್ಥಾನದ, ಸಾಗರದ ಗಣಪತಿ ದೇವಾಲಯ ಭಕ್ತರ ಒತ್ತಾಯವಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…








