ಚನ್ನೈ: ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 2024 ರ ಪಂದ್ಯದಲ್ಲಿ ಎಂಎಸ್ ಧೋನಿ ಸ್ಟಂಪ್ಗಳ ಹಿಂದೆ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಅಭಿಮಾನಿಗಳು ಮತ್ತು ತಜ್ಞರನ್ನು ದಿಗ್ಭ್ರಮೆಗೊಳಿಸಿದ್ದಾರೆ . ವಿಜಯ್ ಶಂಕರ್ ಅವರು ಡ್ಯಾರಿಲ್ ಮಿಚೆಲ್ ಅವರ ಎಸೆತವನ್ನು ಎದುರಿಸಿದರು ಮತ್ತು ಈ ವೇಳೇ ಧೋನಿ ಕ್ಯಾಚ್ ಪೂರ್ಣಗೊಳಿಸಲು ಪೂರ್ಣ ಪ್ರಮಾಣದ ಡೈವ್ ಮಾಡುವ ಮೊದಲು ಸ್ವಲ್ಪವೂ ಹಿಂಜರಿಯಲಿಲ್ಲ. ಬ್ಯಾಟ್ನೊಂದಿಗೆ ಸಂಪರ್ಕ ಹೊಂದಿದ ನಂತರ ಚೆಂಡು ಸಾಕಷ್ಟು ವೇಗವಾಗಿ ಚಲಿಸುತ್ತದೆ ಮತ್ತು ಧೋನಿ ಈ ಪ್ರಯತ್ನವನ್ನು (ಕ್ಯಾಚ್ ಪಡೆದುಕೊಳ್ಳುವುದಕ್ಕೆ) ಪೂರ್ಣಗೊಳಿಸಲು ಕೇವಲ 0.6 ಸೆಕೆಂಡುಗಳನ್ನು ಹೊಂದಿದ್ದರು ಎಂದು ರಿಪ್ಲೇಗಳು ತೋರಿಸಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 63 ರನ್ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ 6 ವಿಕೆಟ್ ನಷ್ಟಕ್ಕೆ 206 ರನ್ಗಳ ಸವಾಲಿನ ಮೊತ್ತ ಪೇರಿಸಿತು.
ಇದಕ್ಕೆ ಉತ್ತರವಾಗಿ ಜಿಟಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದಕ್ಕೂ ಮುನ್ನ ಶಿವಂ ದುಬೆ (23 ಎಸೆತಗಳಲ್ಲಿ 51 ರನ್), ಋತುರಾಜ್ ಗಾಯಕ್ವಾಡ್ (36 ಎಸೆತಗಳಲ್ಲಿ 46 ರನ್) ಮತ್ತು ರಚಿನ್ ರವೀಂದ್ರ (20 ಎಸೆತಗಳಲ್ಲಿ 46 ರನ್) ರನ್ ಗಳಿಸಿದರು. ಸಮೀರ್ ರಿಜ್ವಿ (14) ಅಚ್ಚರಿಯ ಆಟ ಪ್ರದರ್ಶಿಸಿದರೆ, ಡ್ಯಾರಿಲ್ ಮಿಚೆಲ್ (24) ಕೂಡ ಕೊಡುಗೆ ನೀಡಿದರು.
ಜಿಟಿ ಪರ ರಶೀದ್ ಖಾನ್ 2 ವಿಕೆಟ್ ಪಡೆದರೆ, ಸಾಯಿ ಕಿಶೋರ್ 28ಕ್ಕೆ 1, ಸ್ಪೆನ್ಸರ್ ಜಾನ್ಸನ್ 35ಕ್ಕೆ 1, ಮೋಹಿತ್ ಶರ್ಮಾ 36ಕ್ಕೆ 1 ವಿಕೆಟ್ ಪಡೆದರು. ಈ ಮೊತ್ತವನ್ನು ಬೆನ್ನಟ್ಟಿದ ಸಾಯಿ ಸುದರ್ಶನ್ 31 ಎಸೆತಗಳಲ್ಲಿ 37 ರನ್ ಗಳಿಸಿದರು ಆದರೆ ಡೇವಿಡ್ ಮಿಲ್ಲರ್ (21) ಮತ್ತು ವೃದ್ಧಿಮಾನ್ ಸಹಾ (21) ಸೇರಿದಂತೆ ಯಾರೂ ಕೊನೆಯಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ.
ONE OF THE GREATEST CATCH BY A 42 YEAR OLD MS DHONI. 🤯💥pic.twitter.com/NQrDysnxoB
— Mufaddal Vohra (@mufaddal_vohra) March 26, 2024