ಧಾರವಾಡ : 110 ಕೆವ್ಹಿ. ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿನಾಂಕ:05.01.2025 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11ಕೆವ್ಹಿಮಾರ್ಗಗಳಲ್ಲಿ ದಿನಾಂಕ:05.01.2025ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಟೋಲ-ನಾಕಾ, ಮಾಳಮಡ್ಡಿ, ನಗರಕರ ಕಾಲೋನಿ, ಬಾಗಲಕೋಟ ಪೆಟ್ರೋಲ ಪಂಪ್, ಲಕ್ಷ್ಮೀನಗರ, ಗಾಂಧಿ ನಗರ, ಕಲಘಟಗಿ ರಸ್ತೆ, ರಾಜೀವಗಾಂಧಿ ನಗರ, ಸರಸ್ವತಿನಗರ, ತೇಜಸ್ವಿನಗರ, ಸಂಗೊಳ್ಳಿ ರಾಯಣ್ಣ ನಗರ, ಗಿರಿನಗರ, ಕಕ್ಕಯ್ಯಾ ನಗರ, ಗುರುದೇವ ನಗರ, ವಿದ್ಯಾಗಿರಿ, ರಜತಗಿರಿ, ಸಪ್ತಗಿರಿ,ವಾಯ್. ಎಸ್.ಕಾಲೋನಿ, ಲಕ್ಕಮ್ಮನಹಳ್ಳಿ, ಗೋಪಾಲಪುರ, ದಾನೇಶ್ವರಿ ನಗರ, ಸನ್ಮತಿ ಮಾರ್ಗ, ಸ್ಟೇಶನ್ ರೋಡ್, ನುಗ್ಗಿಕೇರಿ, ವಿವೇಕಾನಂದ ನಗರ, ಕೆ.ಎಮ್.ಪಿ, ವೆಂಕಟೇಶ್ವರ, ಸೋಮೇಶ್ವರ,ಗಾರ್ಡನ ಪಾಲಿಮರ, ಜೆ.ಎಸ್.ಎಸ್, ಮಾದರಮಡ್ಡಿ, ನವಲೂರ, ಲಕ್ಕಮ್ಮನಹಳ್ಳಿ ಕೈಗಾರಿಕಾ ಪ್ರದೇಶ,ರಾಯಾಪುರ ಕೈಗಾರಿಕಾ ಪ್ರದೇಶ, ಜನ್ನತ ನಗರ, ಲಕ್ಷ್ಮೀಸಿಂಗನಕೇರಿ, ಪಿ.ಬಿ ರಸ್ತೆ, ಮೂಗಬಸವೇಶ್ವರ ಕರೆಂಟ್ ಇರೋದಿಲ್ಲ.
ಹೊಸಯೆಲ್ಲಾಪುರ, ಜೈ ಕೆಫೆ ಸರ್ಕಲ್, ನುಚ್ಚಂಬ್ಲಿ ಭಾವಿ, ದುಂಡಿ ಓಣಿ, ಯಲಿಗಾರ ಓಣಿ, ಭೂಸಪ್ಪ ಚೌಕ್, ಶಿವಾನಂದ ನಗರ, ಚಪ್ಪರ್‍ಬಂದ್ ಕಾಲೋನಿ, ರಾಮನಗರ, ಸಂಗಮ ಸರ್ಕಲ್, ಲೈನ್ ಬಜಾರ್, ದರೋಗಾ ಓಣಿ, ತುಪ್ಪದ ಓಣಿ, ಸೌದಾಗರ ಗಲ್ಲಿ, ಟಿಕಾರೆ ರೋಡ್, ಮಾರ್ಕೆಟ್ ಪೋಲಿಸ್ ಸ್ಟೇಶನ್, ಸಿಬಿಟಿ, ಓಲ್ಡ್ ಬಸ್ಟ್ಯಾಂಡ್, ರಿಗಲ್ ಸರ್ಕಲ್, ಟಿಪ್ಪು ಸರ್ಕಲ್, ಭಾರತ ಸ್ಕೂಲ್, ಗ್ರಾಸ್ ಮಾರ್ಕೆಟ್, ಕಾಮತ ಹೊಟೆಲ್, ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಸೋಮಾಪುರ, ಗೋವನಕೊಪ್ಪ, ದೊಂಗಡಿಕೊಪ್ಪ ಗ್ರಾಮ, ನಿಗದಿ, ದೇವರ ಹುಬ್ಬಳ್ಳಿ, ಕಲಕೇರಿ ಪ್ರದೇಶದಲ್ಲಿ ಪವರ್ ಕಟ್ ಆಗಲಿದೆ.
ಹಳ್ಳಿಗೇರಿ, ಮನಸೂರು ಮತ್ತು ಮನಗುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳು, ರಾಯಾಪುರ ಗ್ರಾಮ, ರಾಯಾಪುರ ಆಶ್ರಯ ಕಾಲೋನಿ, ವಿಠ್ಠಲ ನಗರ, ಮಯೂರ ಆದಿತ್ಯ ರೆಸಾರ್ಟ, ರೇಷ್ಮೆ ಇಲಾಖೆ, ಇಸ್ಕಾನ್, ರಾಯಾಪುರ ಮತ್ತು 110ಕೆವ್ಹಿ ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ 33 ಕೆವ್ಹಿ ರಾಯಾಪುರ ಮತ್ತು ವಿದ್ಯಾಗಿರಿ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನಪ್ರದೇಶಗಳಲ್ಲಿವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
BREAKING: ರಾಸಲೀಲೆ ವೀಡಿಯೋ ವೈರಲ್ ಕೇಸ್: ತುಮಕೂರಿನ ಮಧುಗಿರಿ ಡಿವೈಎಸ್ಪಿ ಸಸ್ಪೆಂಡ್