ತುಮಕೂರು: ನಗರದಲ್ಲಿ ಧಾರುಣ ಘಟನೆ ಎನ್ನುವಂತೆ ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವಂತ ಲೋರಸ್ ಬಯೋ ಕಂಪನಿಯಲ್ಲಿ ಸಂಪ್ ಕ್ಲೀನ್ ಮಾಡುವ ಉಸಿರುಗಟ್ಟಿ ವೆಂಕಟೇಶ್(32), ಪ್ರತಾಪ್(23) ಸಾವನ್ನಪ್ಪಿದ್ದಾರೆ.
ವೆಂಕಟೇಶ್ ಜೊತೆಗೆ ಫ್ಯಾಕ್ಟರಿಯ ಸಂಪ್ ಅನ್ನು ನಾಲ್ವರು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆಯಲ್ಲಿ ಕಾರ್ಮಿಕ ವೆಂಕಟೇಶ್, ಸೆಕ್ಯೂರಿಟಿ ಗಾರ್ಡ್ ಪ್ರತಾಪ್, ಮಂಜುನಾಥ್, ಯುವರಾಜ್ ಉಸಿರುಗಟ್ಟಿ ಅಸ್ವಸ್ಥರಾಗಿದ್ದಾರೆ. ಸ್ಥಳದಲ್ಲಿದ್ದಂತ ಇತರೆ ಕಾರ್ಮಿಕರು ಅವರನ್ನು ರಕ್ಷಿಸಿದ್ದಾರೆ.
ಕೂಡಲೇ ಅವರನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗಾಗಿ ಕರೆದೊಯ್ದಿದ್ದರು. ಆದರೇ ಮಾರ್ಗ ಮಧ್ಯೆ ಸೆಕ್ಯೂರಿಟಿ ಗಾರ್ಡ್ ಪ್ರತಾಪ್ ಹಾಗೂ ಕಾರ್ಮಿಕ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಉಸಿರುಗಟ್ಟಿ ವೆಂಕಟೇಶ್, ಪ್ರತಾಪ್ ಸಾವನ್ನಪ್ಪಿದರೇ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
BREAKING: ಬೆಂಗಳೂರಲ್ಲಿ ಮಳೆಯಿಂದಾಗಿ ‘ಡೆಂಗ್ಯೂ ಪ್ರಕರಣ’ ಭಾರೀ ಹೆಚ್ಚಳ